

ಚಾರಣದ ಸಂದರ್ಭದಲ್ಲಿ ಕಸದ ನಿರ್ವಹಣೆಯ ಕುರಿತ ಅರಣ್ಯ ಇಲಾಖೆಯ ಕ್ರಮ ಶ್ಲಾಘನೀಯ. ಅದರೊಂದಿಗೆ ಚಾರಣ ಮಾರ್ಗಗಳಲ್ಲಿ ಸ್ಪಷ್ಟ ಸೂಚನಾ ಫಲಕಗಳನ್ನು ಅಳವಡಿಸಬೇಕು. ಚಾರಣಿಗರ ಸೌಲಭ್ಯಕ್ಕಾಗಿ ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಹಾಗೂ ಶೌಚಾಲಯ ವ್ಯವಸ್ಥೆಗಳನ್ನು ಒದಗಿಸಬೇಕು. ಅಪಾಯಕಾರಿ ಪ್ರದೇಶಗಳಲ್ಲಿ ಇಲಾಖೆಯ ಸಿಬ್ಬಂದಿ ನಿಯೋಜಿಸಬೇಕು.
ಸೋಲೋ ಟ್ರಕ್ಕಿಂಗ್‌ಗೆ ಅವಕಾಶ ನೀಡಬಾರದು. ಪ್ರತಿಯೊಬ್ಬ ಚಾರಣಿಗರಿಗೆ ಟ್ರ‍್ಯಾಕಿಂಗ್ ಉಪಕರಣ ಅಳವಡಿಸಬೇಕು ಹಾಗೂ ಅದರ ವೆಚ್ಚವನ್ನು ಅವರಿಂದಲೇ ಭರಿಸಬೇಕು. ಪ್ರತಿಯೊಂದು ಚಾರಣ ತಂಡದೊAದಿಗೆ ಸ್ಥಳೀಯ ಗೈಡ್ ಕಳುಹಿಸಬೇಕು. ಅರಣ್ಯ ಇಲಾಖೆ ನಿಯಮಗಳನ್ನು ಬಿಗಿಗೊಳಿಸಬೇಕು.
ತಡಿಯಂಡಮೋಳ್ ಬೆಟ್ಟವನ್ನು 16ಬಾರಿ ಚಾರಣ ಮಾಡಿದ್ದೇನೆ. ಕೊಡಗಿನಲ್ಲಿ ಅತಿ ಹೆಚ್ಚು ಜನ ಚಾರಣಕ್ಕೆ ಹೋಗುವ ಬೆಟ್ಟ ಅದು. ದಾರಿ ತಪ್ಪುವ ಸಂದರ್ಭವೇ ಇಲ್ಲ. ಚಾರಣ ಹೋಗುವ ಬೆಟ್ಟಗಳಲ್ಲಿ ಅರಣ್ಯ ಇಲಾಖೆಯವರು ದಾರಿಯ ಬಗ್ಗೆ, ದೂರದ ಬಗ್ಗೆ ಮಾಹಿತಿ ಫಲಕ ಹಾಕುವುದು ಒಳ್ಳೆಯದು. ಪುಷ್ಪಗಿರಿಯಲ್ಲಿ ಇದನ್ನು ಮಾಡಿದ್ದಾರೆ.
ಸ್ಥಳೀಯ ಮಾಹಿತಿ ಇರುವ ಗೈಡ್‌ಗಳ ಮಾರ್ಗದರ್ಶನದಲ್ಲಿಯೇ ಚಾರಣ ಕೈಗೊಳ್ಳಬೇಕು. ಅಲ್ಲಲ್ಲಿ ನಿಯಮಿತವಾದ ಸಂಖ್ಯೆಯನ್ನು ಒಳಗೊಂಡಿರುವ ಮಾಹಿತಿ ಫಲಕಗಳಿರಬೇಕು. ಕಟ್ಟುನಿಟ್ಟಾಗಿ ಪ್ರವೇಶವಿಲ್ಲ ಎಂಬ ಸ್ಥಳಕ್ಕೆ ಚಾರಣಿಗರು ಹೋಗುವ ಸಾಹಸ ಮಾಡಬಾರದು. ಕೈಯಲ್ಲೊಂದು ನೀಲನಕ್ಷೆ, ಮಾಹಿತಿಯ ಪ್ರತಿ ಇರಬೇಕು. ಇಂತಿಷ್ಟು ಅವಧಿಯಲ್ಲೇ ಹಿಂದಿರುಗಬೇಕೆAಬ ನಿಯಮ ಜಾರಿಯಾಗಬೇಕು.
ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ ದೇಶಕ್ಕೆ ಮಾದರಿಯಾಗುವಂಥ ಪ್ರಮಾಣಿತ ಮಾನದಂಡ ರೂಪಿಸಬೇಕು. ಇ-ಗಸ್ತು, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಳಕೆ ಮಾಡುವ ಎಂ.ಸ್ಟೆçöÊಪ್ ಮಾದರಿಯ ಆ್ಯಪ್ ರೀತಿಯಲ್ಲೇ ಚಾರಣಿಗರ ಮೊಬೈಲ್‌ನಲ್ಲಿ ಚಾರಣದ ಅವಧಿಯಲ್ಲಿ ತಾತ್ಕಾಲಿಕವಾಗಿ ಆ್ಯಪ್ ಅಳವಡಿಸಿದರೆ ದಾರಿ ತಪ್ಪಿಸಿಕೊಂಡವರ ಶೋಧ ಕಾರ್ಯ ಸುಲಭವಾಗುತ್ತದೆ. ಇಂಥ ಆ್ಯಪ್ ಅಭಿವೃದ್ಧಿಡಿಸಬೇಕು, ಚಾರಣಿಗರಿಗೆ ಗುಂಪು ವಿಮೆ ಮಾಡಿಸಬೇಕು. ಗೈಡ್‌ಗಳಿಗೆ ಹೊಣೆಗಾರಿಕೆ ನಿಗದಿ ಮಾಡಿ ಕಡ್ಡಾಯವಾಗಿ ವೈರ್‌ಲೆಸ್ ಸೆಟ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.