ಮಡಿಕೇರಿ ಸೌಂದರ್ಯ ಉಳಿಸಿಕೊಳ್ಳಲು ಕಠಿಣ ಕ್ರಮ ಅನಿವಾರ್ಯ

ಮಡಿಕೇರಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿದರು. ಮಹೇಶ್ ಜೈನಿ, ಪಿ. ಕಲಾವತಿ, ಹೆಚ್.ಆರ್. ರಮೇಶ್ ಇದ್ದರು.
ಮಡಿಕೇರಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿದರು. ಮಹೇಶ್ ಜೈನಿ, ಪಿ. ಕಲಾವತಿ, ಹೆಚ್.ಆರ್. ರಮೇಶ್ ಇದ್ದರು.
Published on
ಮಡಿಕೇರಿ:
ಮಡಿಕೇರಿ ನಗರದ ಸೌಂದರ್ಯ ಉಳಿಸಿಕೊಳ್ಳಲು ತ್ಯಾಜ್ಯ ವಿಲೇವಾರಿ ವಿಷಯದಲ್ಲಿ ಸ್ವಲ್ಪ ಕಠಿಣ ಕ್ರಮಗಳನ್ನು ಅನುಸರಿಸಬೇಕಾದ ಅಗತ್ಯವಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ನಗರಸಭೆ ವ್ಯಾಪ್ತಿಯಲ್ಲಿ ಬಿಗಡಾಯಿಸುತ್ತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಶನಿವಾರ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗುಡ್ಡಗಾಡು ಪ್ರದೇಶ ಹಾಗೂ ಶೀತ ವಾತಾವರಣ ಹೊಂದಿರುವ ಮಡಿಕೇರಿಯ ತ್ಯಾಜ್ಯ ಸಮಸ್ಯೆಯ ಸವಾಲುಗಳು ಇತರ ನಗರಗಳಿಗಿಂತ ಭಿನ್ನವಾಗಿದ್ದು, ಸ್ಥಳೀಯ ಸಮಸ್ಯೆಗೆ ತಕ್ಕಂತೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕಾಗಿದೆ. ಪ್ರಸ್ತುತ ಮಡಿಕೇರಿಯ 23 ವಾರ್ಡ್ಗಳಿಂದ ದಿನಂಪ್ರತಿ ಸುಮಾರು 13 ಟನ್ ಹಸಿ ತ್ಯಾಜ್ಯ ಹಾಗೂ 5 ಟನ್ ಒಣ ತ್ಯಾಜ್ಯ ಸಂಗ್ರಹವಾಗುತ್ತಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ ಬ್ಲಾಕ್ ಸ್ಪಾಟ್‌ಗಳಲ್ಲಿ ಸಂಯೋಜಿತ ಕಸ ಹೆಚ್ಚು ಸಂಗ್ರಹವಾಗುತ್ತಿದ್ದು, ಇದನ್ನು ಬೇರ್ಪಡಿಸುವುದು ದೊಡ್ಡ ಸವಾಲಾಗಿದೆ. ಸ್ಟೋನ್ ಹಿಲ್ ಡಂಪಿAಗ್ ಯಾರ್ಡ್ನಿಂದ ಸುತ್ತಮುತ್ತಲಿನ ಮನೆಗಳಿಗೆ ಆಗುತ್ತಿರುವ ತೊಂದರೆ ಕುರಿತು ಸುಬ್ರಹ್ಮಣ್ಯನಗರ ಅಸೋಸಿಯೇಷನ್ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಹಳೆಯ ಕಸವನ್ನು ಸಂಪೂರ್ಣವಾಗಿ ತೆರವುಗೊಳಿಸಲು ಹಾಗೂ ಹೊಸ ಕಸ ಹಾಕದಂತೆ ಕೋರ್ಟ್ ನೀಡಿದ ನಿರ್ದೇಶನವನ್ನು ಪಾಲಿಸಲು ನಗರಸಭೆ ಬದ್ಧವಾಗಿದೆ.
ನಗರದ 20 ಕಡೆಗಳಲ್ಲಿ ಗುರುತಿಸಲಾಗಿರುವ ಪ್ರಮುಖ ಬ್ಲಾಕ್ ಸ್ಪಾಟ್‌ಗಳಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರು ಸಿಕ್ಕಸಿಕ್ಕಲ್ಲಿ ಕಸ ಎಸೆಯುವುದನ್ನು ತಡೆಯಲು ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ನಿಯಮ ಉಲ್ಲಂಘಿಸುವವರಿಗೆ ಭಾರಿ ದಂಡ ವಿಧಿಸಲು ಕೌನ್ಸಿಲ್ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ನಗರದ ಮಟ್ಟಿಗೆ ಮಹತ್ವದ ಸಭೆಯಲ್ಲಿ ಸ್ವಚ್ಛ ಭಾರತ ಯೋಜನೆ ಅಧಿಕಾರಿ ಗೈರು ಹಾಜರಾಗಿರುವುದರಿಂದ ಅವರಿಗೆ ನೊಟೀಸ್ ನೀಡುವಂತೆ ಇದೇ ಸಂದರ್ಭ ಸೂಚನೆ ನೀಡಿದರು.
ನಗರಸಭೆ ಸದಸ್ಯ ಅಪ್ಪಣ್ಣ ಮಾತನಾಡಿ, ತ್ಯಾಜ್ಯ ವಿಲೇವಾರಿಗೆ ಸಂಬAಧಿಸಿದ ಮಾದರಿ ಕೆಲಸಗಳು ನಗರಸಭೆಯಿಂದಲೇ ಶುರುವಾಗಬೇಕು. ಪ್ರತಿ ವಾರ್ಡ್ಗಳಲ್ಲೇ ತ್ಯಾಜ್ಯ ವಿಲೇವಾರಿ ಮಾಡುವಂತಾಗಬೇಕು. ಮನೆಗಳಿಂದ ಶೂನ್ಯ ತ್ಯಾಜ್ಯ ಹೊರಬರುವ ರೀತಿಯಲ್ಲಿ ಕ್ರಮಗಳು ಆಗಬೇಕು. ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟದ ವಿರುದ್ಧ ಕ್ರಮದ ಜತೆ ಜಾಗೃತಿ ಮೂಡಿಸುವ ಅಗತ್ಯವೂ ಇದೆ ಎಂದರು.
ಸದಸ್ಯರಾದ ಮನ್ಸೂರ್ ಅಲಿ, ಅರುಣ್ ಶೆಟ್ಟಿ, ಶ್ವೇತಾ ಪ್ರಶಾಂತ್, ಅನಿತಾ ಪೂವಯ್ಯ, ನಗರಸಭೆ ಎಂಜಿನಿಯರ್ ಸತೀಶ್ ಹಲವು ಸಲಹೆಗಳನ್ನು ನೀಡಿದರು.
ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಪೌರಾಯುಕ್ತ ಹೆಚ್.ಆರ್. ರಮೇಶ್ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರು ಸಭೆಯಲ್ಲಿ ಇದ್ದರು.
ಮಡಿಕೇರಿ ನಗರದ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ಲೀನ್ ಕೂರ್ಗ ಎನ್ನುವ ಸಂಸ್ಥೆ ಆಸಕ್ತಿ ತೋರಿಸಿದ್ದು, ಈ ಸಂಬAಧ ಕಾರ್ಯಯೋಜನೆ ಬಗ್ಗೆ ಸಂಸ್ಥೆಯ ಪ್ರಮುಖರು ಸಭೆಯಲ್ಲಿ ಮಾಹಿತಿ ನೀಡಿದರು. ಜಿಲ್ಲೆಯ ಪರಿಸರದ ಬಗ್ಗೆ ಕಾಳಜಿ ಇರುವ, ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಚಟುವಟಿಕೆಗಳನ್ನು ನಡೆಸುತ್ತಿರುವ ಕೊಡಗಿನವರೇ ಆದ ಪೂಜಾ, ಪವನ್ ಅಯ್ಯಪ್ಪ, ಅಪರ್ಣ ಕುಮಾರ್ ಹಾಗೂ ಸವಿತಾ ಚೆಂಗಪ್ಪ ತ್ಯಾಜ್ಯ ವಿಲೇವಾರಿಗೆ ಸಂಬAಧಪಟ್ಟAತೆ ತಾವು ಕೈಗೊಂಡಿರುವ ವಿವಿಧ ಯೋಜನೆಗಳ ಬಗ್ಗೆ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net