ಬೀದಿ ನಾಯಿ ದಾಳಿ ಕೆಲವರಿಗೆ ಗಾಯ

 ಬೀದಿ ನಾಯಿ ದಾಳಿಯಿಂದ ಗಾಯಗೊಂಡವರು.
ಬೀದಿ ನಾಯಿ ದಾಳಿಯಿಂದ ಗಾಯಗೊಂಡವರು.
Published on

ಪ್ರಮುಖ ಮುಖ್ಯಾಂಶಗಳು

  • dog ​​attack
ಕುಶಾಲನಗರ: ಇತ್ತೀಚೆಗೆ ಬೀದಿ ನಾಯಿಯೊಂದು ಪುರಸಭೆ ಮಾಜಿ ಸದಸ್ಯರೊಬ್ಬರ ಮೇಲೆ ದಾಳಿ ಮಾಡಿದ ಘಟನೆ ಮಾಸುವ ಮುನ್ನವೇ ನಗರದ ಎಚ್‌ಆರ್‌ಪಿ ಕಾಲನಿಯ ನೀರಾವರಿ ನಿಗಮದ ಕಚೇರಿ ಸಮೀಪ ಬೀದಿ ನಾಯಿಯೊಂದು ಬಾಲಕಿ ಸೇರಿದಂತೆ ಕೆಲವರಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಶುಕ್ರವಾರ ನಡೆದಿದೆ.
ಗಾಯಗೊಂಡವರು ಮೃದುನಿ, ಮಂಜು, ಮಾಲೇಶ್, ಸಾವಿತ್ರಿ ಎಂದು ತಿಳಿದುಬಂದಿದೆ. ಗಾಯಾಳುಗಳು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net