ಕನ್ನಡದಲ್ಲಿ ನಾಮಫಲಕ ಕಡ್ಡಾಯಕ್ಕೆ ಕ್ರಮ

ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಬಳಕೆ ಮಾಡದ ಉದ್ದಿಮೆಗಳಿಗೆ ಗುಡ್ಡೆಹೊಸೂರು ಪಂಚಾಯಿತಿಯಿAದ ಎಚ್ಚರಿಕೆ ಕೊಡಲಾಯಿತು.
ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಬಳಕೆ ಮಾಡದ ಉದ್ದಿಮೆಗಳಿಗೆ ಗುಡ್ಡೆಹೊಸೂರು ಪಂಚಾಯಿತಿಯಿAದ ಎಚ್ಚರಿಕೆ ಕೊಡಲಾಯಿತು.
Published on
ಮಡಿಕೇರಿ:
ಸರ್ಕಾರದ ಆದೇಶದಂತೆ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಬಳಕೆ ಮಾಡುವುದು ಕಡ್ಡಾಯವಾಗಿದ್ದು, ಈ ನಿಯಮವನ್ನು ಉಲ್ಲಂಘಿಸಿರುವ ಉದ್ದಿಮೆಗಳ ವಿರುದ್ಧ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ಕಠಿಣ ಕ್ರಮಕ್ಕೆ ಮುಂದಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೇ ಅನೇಕ ವಾಣಿಜ್ಯ ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ನಾಮಫಲಕಗಳನ್ನು ಅಳವಡಿಸಿರುವುದು ಕಂಡುಬAದಿದೆ. ಅಂತಹ ಉದ್ದಿಮೆಗಳನ್ನು ಗುರುತಿಸಿರುವ ಪಂಚಾಯತಿ ಆಡಳಿತ, ಈಗಾಗಲೇ ದಂಡ ವಿಧಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಕಡೆಗಣಿಸುವ ಸಂಸ್ಥೆಗಳ ವಿರುದ್ಧ ಶೂನ್ಯ ಸಹನೆ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬರುವ 2026-27ನೇ ಸಾಲಿನ ನೂತನ ಆರ್ಥಿಕ ವರ್ಷಕ್ಕೆ ಸಂಬAಧಿಸಿದAತೆ ಪಂಚಾಯತ್ ಮಹತ್ವದ ನಿರ್ಧಾರ ಕೈಗೊಂಡಿದೆ. ಏ.1ರಿಂದ ವಾಣಿಜ್ಯ ಉದ್ದಿಮೆಗಳು ತಮ್ಮ ವ್ಯಾಪಾರ ಪರವಾನಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವಾಗ, ನಾಮಫಲಕದಲ್ಲಿ ಕನಿಷ್ಠ ಶೇ.60 ಕನ್ನಡ ಭಾಷೆ ಇರುವುದನ್ನು ಕಡ್ಡಾಯವಾಗಿ ದೃಢೀಕರಿಸಬೇಕು. ಒಂದು ವೇಳೆ ನಿಗದಿತ ಪ್ರಮಾಣದಲ್ಲಿ ಕನ್ನಡ ಭಾಷೆಯನ್ನು ಬಳಸದಿದ್ದಲ್ಲಿ, ಅಂತಹ ಉದ್ದಿಮೆಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು. ಅಲ್ಲದೆ, ಸರ್ಕಾರದ ನಿಯಮಾನುಸಾರ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಂಚಾಯತ್ ಪ್ರಕಟಣೆಯಲ್ಲಿ ಎಚ್ಚರಿಸಿದೆ.
"

ನಾಡಿನ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಸರ್ಕಾರದ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ಉದ್ದಿಮೆದಾರನ ಕರ್ತವ್ಯ. ಕಾನೂನು ಉಲ್ಲಂಘಿಸುವವರ ವಿರುದ್ಧ ದಂಡದ ಜತೆಗೆ ಪರವಾನಗಿ ರದ್ದತಿಯಂತಹ ಕ್ರಮ ಅನಿವಾರ್ಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net