ಕ್ರೀಡಾ ಜಿಲ್ಲೆ ಕೊಡಗಿನಲ್ಲಿ ಮೈದಾನಗಳದ್ದೇ ಕೊರತೆ

ವಿರಾಜಪೇಟೆ ತಾಲೂಕು ವಿ.ಬಾಡಗ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಿವಿಧ ಕ್ರೀಡೆಗಳ ತರಬೇತಿ ಕೇಂದ್ರದ ವೀಕ್ಷಣೆ ಸಂದರ್ಭ ಅಧಿಕಾರಿಗಳ ಜತೆ ಶಾಸಕ ಎ.ಎಸ್. ಪೊನ್ನಣ್ಣ ಚರ್ಚೆ ನಡೆಸಿದ ದೃಶ್ಯ. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಡಿಸಿಎಫ್ ನೆಹರು, ತಹಸೀಲ್ದಾರ್ ಪ್ರವೀಣ್ ಮತ್ತಿತರರು ಇದ್ದರು.
ವಿರಾಜಪೇಟೆ ತಾಲೂಕು ವಿ.ಬಾಡಗ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಿವಿಧ ಕ್ರೀಡೆಗಳ ತರಬೇತಿ ಕೇಂದ್ರದ ವೀಕ್ಷಣೆ ಸಂದರ್ಭ ಅಧಿಕಾರಿಗಳ ಜತೆ ಶಾಸಕ ಎ.ಎಸ್. ಪೊನ್ನಣ್ಣ ಚರ್ಚೆ ನಡೆಸಿದ ದೃಶ್ಯ. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಡಿಸಿಎಫ್ ನೆಹರು, ತಹಸೀಲ್ದಾರ್ ಪ್ರವೀಣ್ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕ್ರೀಡಾ ಮೂಲಭೂತ ಸೌಕರ್ಯಗಳಿಲ್ಲ
  • ಪ್ರತಿಭಾವಂತರಿಗೆ ಬೇಕಿದೆ ಪ್ರೋತ್ಸಾಹ
  • ಸುಸಜ್ಜಿತ ಕ್ರೀಡಾಂಗಣದ ಬೇಡಿಕೆ
ಮಡಿಕೇರಿ:
ಕ್ರೀಡಾ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಕೊಡಗಿನಲ್ಲಿ ಕ್ರೀಡೆಗಳಿಗೆ ಸಂಬAಧಿಸಿದAತೆ ಮೂಲಭೂತ ಸೌಕರ್ಯಗಳ ಕೊರತೆ ಇಲ್ಲಿಯ ಪ್ರತಿಭೆಗಳು ಅರಳುವ ಮೊದಲೇ ಬಾಡುವಂತೆ ಮಾಡುತ್ತಿದೆ. ಬೆರಳೆಣಿಕೆಯಷ್ಟು ಸುಸಜ್ಜಿತ ಕ್ರೀಡಾಂಗಣಗಳನ್ನು ಹೊರತುಪಡಿಸಿದರೆ ಸ್ಥಳೀಯವಾಗಿ ಕಚ್ಛಾ ಮೈದಾನಗಳೇ ಸ್ಥಳೀಯ ಕ್ರೀಡಾಪಟುಗಳ ಅಭ್ಯಾಸದ ಅಂಗಣಗಳಾಗಿವೆ. ಇಂಥ ಪರಿಸ್ಥಿತಿಯಲ್ಲಿ ವಿ. ಬಾಡಗ ಗ್ರಾಮದಲ್ಲಿ ಉತ್ತಮ ದರ್ಜೆಯ ಕ್ರೀಡಾಂಗಣ ಮತ್ತು ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣ ಕ್ರೀಡಾಪ್ರೇಮಿಗಳಲ್ಲಿ ನಿರೀಕ್ಷೆ ಗರಿಗೆದರುವಂತೆ ಮಾಡಿದೆ.
ಭೌಗೋಳಿಕವಾಗಿ ವಿಶಿಷ್ಟ ಜಿಲ್ಲೆಯಾಗಿರುವ ಕೊಡಗಿನಿಂದ ಕ್ರೀಡಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ಸಿಕ್ಕಿದೆ. ಸೀಮಿತ ಸವಲತ್ತುಗಳ ನಡುವೆಯೇ ಇಲ್ಲಿನ ಕ್ರೀಡಾ ಪ್ರತಿಭೆಗಳು ಅಂತಾರಾಷ್ಟಿçÃಯ ಮಟ್ಟದಲ್ಲೂ ಮಿಂಚುತ್ತಿವೆ. ಹಾಗಾಗಿ ಮತ್ತಷ್ಟು ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲು ಕ್ರೀಡಾ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಹಿಂದಿನಿAದಲೂ ಸ್ಥಳೀಯ ಕ್ರೀಡಾಭಿಮಾನಿಗಳು ಸÀರ್ಕಾರದ ಮುಂದೆ ಬೇಡಿಕೆ ಇಡುತ್ತಾ ಬಂದಿದ್ದರೂ ನಿರೀಕ್ಷಿತ ಪ್ರತಿಕ್ರಿಯೆ ಸಿಗದಿರುವ ಬಗ್ಗೆ ಅಸಮಾಧಾನವಿದೆ.
ಕೊಡಗಿನಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿ, ಸೋಮವಾರಪೇಟೆ, ಪೊನ್ನಂಪೇಟೆ ಸೇರಿದಂತೆ ಕೆಲವು ಕಡೆಗಳಲ್ಲಿ ಮಾತ್ರ ಹಾಕಿ ಕೇಂದ್ರೀಕೃತವಾಗಿ ಬೆರಳೆಣಿಕೆಯಷ್ಟು ಸುಸಜ್ಜಿತ ಕ್ರೀಡಾಂಗಣಗಳು ಇವೆ. ಉಳಿದ ಭಾಗಗಳಲ್ಲಿ ಕ್ರೀಡಾಪಟುಗಳ ಅಭ್ಯಾಸಕ್ಕೆ ಕಚ್ಛಾ ಆಟದ ಮೈದಾನಗಳೇ ಗತಿ. ಮತ್ತೆ ಕೆಲವು ಊರಿನಲ್ಲಿ ಈ ಸೌಲಭ್ಯವೂ ಇಲ್ಲ.
ಬಹುತೇಕ ಕಡೆಗಳಲ್ಲಿ ಶಾಲಾ-ಕಾಲೇಜುಗಳ ಆಟದ ಮೈದಾನವೇ ಕ್ರೀಡಾಪಟುಗಳ ಪಾಲಿನ ಅಭ್ಯಾಸದ ಜಾಗಗಳಾಗಿದೆ. ಗ್ರಾಮೀಣ ಪ್ರದೇಶಗಳಲ್ಲಂತೂ ಭತ್ತದ ಗದ್ದೆಗಳು, ಪಾಳು ಬಿದ್ದ ಜಮೀನುಗಳನ್ನೇ ಆಟದ ಮೈದಾನವನ್ನಾಗಿ ಬಳಸಿಕೊಳ್ಳುವ ಅನಿವಾರ್ಯತೆ ಇದೆ. ಇಷ್ಟೆಲ್ಲಾ ಕೊರತೆಗಳ ಮಧ್ಯೆಯೂ ಜಿಲ್ಲೆಯ ಕ್ರೀಡಾಪಟುಗಳು ತಮ್ಮ ತಮ್ಮ ಆಯ್ಕೆಯ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಪ್ರತಿ ವರ್ಷ ಕೌಟುಂಬಿಕ ಕ್ರೀಡಾಕೂಟಗಳ ಮೂಲಕವೂ ಸದ್ದು ಮಾಡುವ ಕೊಡಗಿನಲ್ಲಿ ಹಾಕಿ ಅಥವಾ ಕ್ರಿಕೆಟ್ ಆಡಲು ಸೂಕ್ತ ಮೈದಾನದ ಕೊರತೆ ಇದೆ. ಆತಿಥ್ಯ ವಹಿಸಿಕೊಳ್ಳುವ ಕುಟುಂಬಗಳೇ ತಮ್ಮ ಸರದಿ ಬಂದಾಗ ಲಕ್ಷಾಂತರ ರೂ. ವ್ಯಯಿಸಿ ಮೈದಾನಗಳನ್ನು ಸಿದ್ದಪಡಿಸಿಕೊಳ್ಳುವುದು, ಆಟಗಾರರ ಗ್ಯಾಲರಿ ನಿರ್ಮಿಸಿಕೊಳ್ಳುವುದು ಸೇರಿದಂತೆ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಕ್ರೀಡಾಕೂಟದ ಬಜೆಟ್‌ನಲ್ಲಿ ಸಿಂಹಪಾಲು ಮೈದಾನಗಳನ್ನು ಸಿದ್ಧಪಡಿಸಲು ಮೀಸಲಿರಿಸಬೇಕಾಗಿದೆ.
ಜಿಲ್ಲೆಯ ಪ್ರಮುಖ ಊರುಗಳಲ್ಲಿ ಸುಸಜ್ಜಿತ ಕ್ರೀಡಾಂಗಣಗಳನ್ನು ನಿರ್ಮಿಸಬೇಕು ಎನ್ನುವ ಬೇಡಿಕೆ ಕೊಡಗಿನಲ್ಲಿ ಬಹಳ ಹಿಂದಿನಿAದಲೂ ಇದೆ. ಈ ನಿಟ್ಟಿನಲ್ಲಿ ಕ್ರೀಡಾಭಿಮಾನಿಗಳು ಪ್ರಯತ್ನ ಮುಂದುವರಿಸಿದ್ದರೂ ನಿರೀಕ್ಷಿತ ಪ್ರಗತಿ ಕಾಣಲು ಸಾಧ್ಯ ಆಗಲಿಲ್ಲ. ಪ್ರತಿ ಬಜೆಟ್‌ನಲ್ಲೂ ಇಂಥ ನಿರೀಕ್ಷೆ ಹುಸಿಯಾಗುತ್ತಲೇ ಬರುತ್ತಿದೆ.
ಹಿಂದಿನ ಸರ್ಕಾರದಲ್ಲಿ ರೇಷ್ಮೇ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವರಾಗಿದ್ದ ಡಾ. ನಾರಾಯಣ ಗೌಡ ಹೊಸದಾಗಿ ತಾಲೂಕು ಕ್ರೀಡಾಂಗಣಗಳ ನಿರ್ಮಾಣದ ಬಗ್ಗೆ ಅಧಿವೇಶನದಲ್ಲಿ ಮಾಹಿತಿ ಕೊಟ್ಟಿದ್ದರು. ರಾಜ್ಯದ ಒಟ್ಟು 83 ಕ್ರೀಡಾಂಗಣಗಳ ಪೈಕಿ ಕೊಡಗಿನ ಕುಶಾಲನಗÀರ
ವಿರಾಜಪೇಟೆ, ಪೊನ್ನಂಪೇಟೆ ಹಾಗೂ ಭಾಗಮಂಡಲದ ಹೆಸರು ಕಾಣಿಸಿಕೊಂಡಿತ್ತಾದರೂ ನಂತರ ನಂತರದ ಯಾವುದೇ ಬೆಳವಣಿಗೆಗಳ ಬಗ್ಗೆ ಮಾಹಿತಿ ಇಲ್ಲ.
ಇದೀಗ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕ್ರೀಡಾ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು, ಜಿಲ್ಲೆಯಲ್ಲಿ ಕ್ರೀಡಾ ಮೂಲಸೌಕರ್ಯಗಳ ಹೆಚ್ಚಳಕ್ಕೆ ಆದ್ಯತೆ ಕೊಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾಗಿ ಇತ್ತೀಚೆಗಷ್ಟೇ ಅಧಿಕಾರ ಸ್ಚೀಕರಿಸಿರುವ ಸ್ವತಃ ಕರಾಟೆ ಪಟುವೂ ಆಗಿರುವ ಸಿ.ಎಸ್. ಅರುಣ್ ಮಾಚಯ್ಯ ಕೂಡ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿದ್ದು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಈ ಸಂಬAಧ ಚರ್ಚೆಯನ್ನೂ ನಡೆಸಿದ್ದಾರೆ.
ಸುಸಜ್ಜಿತ ಕ್ರೀಡಾಂಗಣ ಮತ್ತು ವಿವಿಧ ಕ್ರೀಡೆಗಳ ತರಬೇತಿ ಕೇಂದ್ರದ ನಿರ್ಮಾಣಕ್ಕಾಗಿ ವಿರಾಜಪೇಟೆ ತಾಲೂಕಿನ ವಿ. ಬಾಡಗ ಗ್ರಾಮದಲ್ಲಿ 11.5 ಎಕರೆ ಜಾಗ ಗುರುತಿಸಲಾಗಿದ್ದು, ಕ್ರೀಡಾಂಗಣ ನಿರ್ಮಾಣ ಪೂರ್ವಭಾವಿ ಕೆಲಸಗಳು ಶುರುವಾಗಿದೆ. ಈ ಕ್ರೀಡಾಂಗಣ ಜಿಲ್ಲೆಯ ಎಲ್ಲಾ ಕ್ರೀಡಾಪಟುಗಳ ಬಳಕೆಗೆ ಯೋಗ್ಯವಾಗುವಂತೆ ರೂಪಿಸುವ ನಿಟ್ಟಿನಲ್ಲಿ ನೀಲನಕಾಶೆ ಸಿದ್ಧಪಡಿಸಿಕೊಳ್ಳಲಾಗಿದೆ. ಹೋರಾಂಗಣ ಆಟಕ್ಕೆ ಅವಕಾಶ ಕೊಡುವುದರ ಜತೆಯಲ್ಲಿ ಒಳಾಂಗಣ ಆಟಗಳಿಗೂ ಸಮಾನ ಪ್ರಾಮುಖ್ಯತೆ ಕೊಟ್ಟು ಕ್ರೀಡಾಂಗಣ ನಿರ್ಮಿಸುವ ಉದ್ದೇಶ ಇರುವುದಾಗಿ ಸಿ.ಎಸ್. ಅರುಣ್ ಮಾಚಯ್ಯ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ಹಾಕಿ ಆಟದ ರೀತಿಯಲ್ಲಿ ಕೊಡಗಿನಲ್ಲಿ ಇತ್ತೀಚೆಗೆ ಶೂಟಿಂಗ್ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದೆ. ಆದರೆ ಶೂಟಿಂಗ್ ಅಭ್ಯಾಸಕ್ಕೆ ಸಾರ್ವಜನಿಕ ಬಳಕೆಗೆ ಜಿಲ್ಲೆಯಲ್ಲಿ ಎಲ್ಲೂ ಕ್ರೀಡಾಂಗಣ ಇಲ್ಲ. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಬಿ. ಶೆಟ್ಟಿಗೇರಿ ಬಾಡಗ ಗ್ರಾಮದ ಉದ್ದೇಶಿತ ಕ್ರೀಡಾಂಗಣದಲ್ಲಿ ಶೂಟಿಂಗ್ ರೇಂಜ್ ನಿರ್ಮಿಸುವ ಚಿಂತನೆ ಬಗ್ಗೆಯೂ ಚರ್ಚೆ ನಡೆದಿದೆ. ಇದರ ಜತೆಗೆ ಆರ್ಚರಿ ಕ್ರೀಡೆಯ ಅಭ್ಯಾಸಕ್ಕೂ ಇಲ್ಲಿ ಅವಕಾಶ ಮಾಡಿಕೊಡುವ ಚಿಂತನೆ ಇದ್ದು ಶಾಸಕ ಪೊನ್ನಣ್ಣ ಅವರಿಗೆ ಈ ಸಂಬAಧ ಸಲಹೆ ನೀಡಿರುವುದಾಗಿ ಅರುಣ್ ಮಾಚಯ್ಯ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇರುವ ಜಿಲ್ಲಾ ಕ್ರೀಡಾಂಗಣವಾದ ಜ. ತಿಮ್ಮಯ್ಯ ಕ್ರೀಡಾಂಗಣ ಸಂಪೂರ್ಣ ದುಸ್ಥಿತಿ ತಲುಪಿದೆ. ಕ್ರೀಡೆಗೆ ಬಳಕೆ ಆಗಬೇಕಿದ್ದ ಈ ಮೈದಾನವನ್ನು ಮಡಿಕೇರಿ ದಸರಾ ಸಂದರ್ಭದಲ್ಲಿ ವಾಹನ ನಿಲುಗಡೆಗೆ ಬಳಕೆ ಮಾಡಿಕೊಂಡ ಪರಿಣಾಮ ಇಲ್ಲಿ ಈಗ ಯಾವುದೇ ಕ್ರೀಡಾ ಚಟುವಟಿಕೆ ನಡೆಸದಂತಾಗಿದೆ. ಪ್ರತಿ ವರ್ಷ ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಇದೇ ಮೈದಾನದಲ್ಲಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಮೈದಾನ ಹಾಳಾಗಿರುವ ಕಾರಣ ಪೊಲೀಸ್ ಕವಾಯತು ಮೈದಾನಕ್ಕೆ ಕಾರ್ಯಕ್ರಮ ಸ್ಥಳಾಂತರಿಸಲಾಗಿತ್ತು. ಇಂಥ ಮೈದಾನಕ್ಕೂ ಕಾಯಕಲ್ಪ ಕೊಡಲು ಕರ್ನಾಟಕ ಕ್ರೀಡಾ ಪ್ರಾಧಿಕಾರ ಮುಂದಾಗಿದೆ.
ಜನರಲ್ ತಿಮ್ಮಯ್ಯ ಮೈದಾನವನ್ನು ಸಿಂಥೆಕ್ ಟರ್ಫ್ ಮೈದಾನವನ್ನಾಗಿ ಮಾಡಲು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸುವುದಾಗಿ ತಿಳಿಸಿರುವ ಸಿ.ಎಸ್. ಅರುಣ್ ಮಾಚಯ್ಯ, ಮಂತರ್ ಗೌಡ ಅವರ ಪ್ರಸ್ತಾವನೆಗೆ ಸರ್ಕಾರದಿಂದ ಈ ವರ್ಷ ಅಂಗೀಕಾರ ಸಿಗಲಿದೆ. ನಂತರ ಈ ಕ್ರೀಡಾಂಗಣವನ್ನು ಮಾದರಿ ಕ್ರೀಡಾಂಗಣವನ್ನಾಗಿ ರೂಪಿಸಲಾಗುವುದು. ಈ ಮೂಲಕ ಜಿಲ್ಲೆಯ ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಅವಕಾಶಗಳನ್ನು ಇಲ್ಲಿ ಮಾಡಿಕೊಡಲಾಗುವುದು. ಕ್ರೀಡಾ ಮೂಲ ಸೌಕರ್ಯ ಇಲ್ಲ ಎನ್ನುವ ಕೊರತೆ ನೀಗಿಸಲು ಸಾಧ್ಯವಾದಷ್ಟು ಪ್ರಯತ್ನ ಮಾಡಲಾಗುವುದು ಎನ್ನುತ್ತಾರೆ.
"

ಕೊಡಗು ಕ್ರೀಡೆಯ ತವರೂರು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕರ್ನಾಟಕ ಕ್ರೀಡಾ ನೀತಿ ರಚಿಸಿದ್ದು ನಾನು. ಕ್ರೀಡಾಪಟುಗಳು ಬೆಳೆಯಲು ಪ್ರಾಥಮಿಕ ಶಾಲಾ ಹಂತದಲ್ಲಿ ಪ್ರೋತ್ಸಾಹ ಕೊಡಬೇಕು. ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಇರಬೇಕು. ಮೂಲಭೂತ ಸೌಕರ್ಯಗಳು ಕೂಡ ಬೇಕು. ಈ ನಿಟ್ಟಿನ್ಲಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರ ಕೆಲಸ ಮಾಡುತ್ತಿದೆ. ಮಡಿಕೇರಿ ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟರ್ಫ್ ಅಳವಡಿಸಲು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸಲ್ಲಿಸಿರುವ ಪ್ರಸ್ತಾವನೆಗೆ ಈ ವರ್ಷ ಅಂಗೀಕಾರ ಸಿಗಲಿದೆ. ಎ.ಎಸ್. ಪೊನ್ನಣ್ಣ ಪ್ರಯತ್ನದಿಂದ ವಿ. ಬಾಡಗ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾಂಗಣ ಮತ್ತು ವಿವಿಧ ಕ್ರೀಡೆಗಳ ತರಬೇತಿ ಕೇಂದ್ರವನ್ನು ಮಾದರಿಯಾಗಿ ನಿರ್ಮಿಸುವ ನಿಟ್ಟಿನಲ್ಲಿ ಸೂಕ್ತ ಸಲಹೆಗಳನ್ನು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net