ತಾಲೂಕಿನಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಾರ್ಗದರ್ಶನ

ಸಂತ ಮೈಕಲರ ಶಾಲಾ ಸಭಾಂಗಣದಲ್ಲಿ ನಡೆದ ಶಿಬಿರವನ್ನು ಡಾ.ಮಂತರ್‌ಗೌಡ ಉದ್ಘಾಟಿಸಿದರು. ರತ್ನಾಕರ್ ರೈ, ಕಾರ್ಯಪ್ಪ, ಬಿ.ಜಿ.ಅನಂತಶಯನ ಇತರರು ಇದ್ದರು.
ಸಂತ ಮೈಕಲರ ಶಾಲಾ ಸಭಾಂಗಣದಲ್ಲಿ ನಡೆದ ಶಿಬಿರವನ್ನು ಡಾ.ಮಂತರ್‌ಗೌಡ ಉದ್ಘಾಟಿಸಿದರು. ರತ್ನಾಕರ್ ರೈ, ಕಾರ್ಯಪ್ಪ, ಬಿ.ಜಿ.ಅನಂತಶಯನ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕಿನಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಾರ್ಗದರ್ಶನ
ಮಡಿಕೇರಿ: ಮಡಿಕೇರಿ ತಾಲೂಕಿನಾದ್ಯಂತ ಸುಮಾರು ೧೬೦೦ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ರೋಟರಿ ಮಿಸ್ಟಿಹಿಲ್ಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಯೋಗದೊಂದಿಗೆ ಎರಡು ದಿನಗಳ ವಿದ್ಯಾರ್ಥಿಗಳ ಪ್ರೇರಣಾ ಮತ್ತು ವೃತ್ತಿ ಮಾರ್ಗದರ್ಶನ ಶಿಬಿರ ಯಶಸ್ವಿಯಾಗಿ ನೆರವೇರಿತು.
ಮಡಿಕೇರಿ ಸಂತ ಮೈಕಲರ ಶಾಲಾ ಸಭಾಂಗಣದಲ್ಲಿ ನಡೆದ ಶಿಬಿರ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ.ಮಂತರ್‌ಗೌಡ, ವಿದ್ಯಾರ್ಥಿಗಳು ಆತ್ಮಶಕ್ತಿ ಬೆಳೆಸಿಕೊಂಡು ತಮ್ಮ ಕೌಶಲ್ಯದ ಮೇಲೆ ನಂಬಿಕೆ ಇರಿಸಿ ಗುರಿ ಸಾಧಿಸಬೇಕು. ಪೂರ್ಣ ಶ್ರಮ ಹಾಕಿ ಪರೀಕ್ಷೆ ಎದುರಿಸಬೇಕು. ಫಲಿತಾಂಶ ಏನೇ ಬಂದರೂ ಸಮಭಾವದಿಂದ ಎದುರಿಸಬೇಕೆಂದು ಕಿವಿಮಾತು ಹೇಳಿದರು.
ರೋಟರಿ ಜಿಲ್ಲೆಯ ಪ್ರಮುಖರಾದ ವಿಕ್ರಂ ದತ್ತ ಮಾತನಾಡಿ, ಪರೀಕ್ಷೆಯನ್ನು ಒಂದು ಹಬ್ಬ ಎಂದು ಪರಿಗಣಿಸಿ, ಶಿಸ್ತು, ಸಂಯಮದಿಂದ ಹೆಜ್ಜೆ ಇರಿಸಿದರೆ ಯಶಸ್ಸು, ನೆಮ್ಮದಿ ಖಚಿತ ಎಂದರು.
ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ವೃತ್ತಿ ಮಾರ್ಗದರ್ಶನದ ಕುರಿತು ವಿಸ್ತತವಾಗಿ ವಿವರಣೆ ನೀಡಲಾಯಿತು. ಆಯಾ ಶಾಲಾ ಆಡಳಿತ ಮಂಡಳಿ, ಬೋಧಕ ವರ್ಗ, ಶಿಕ್ಷಣ ಇಲಾಖೆಯ ಅಧಿಕಾರಿ ವರ್ಗ ಶಿಬಿರಕ್ಕೆ ಕೈಜೋಡಿಸಿದರು.
ಈ ಸಂದರ್ಭದಲ್ಲಿ ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಕಾರ್ಯಪ್ಪ, ಇಂಟರಾಕ್ಟ್ ಚೇರ್ಮನ್ ಬಿ.ಜಿ.ಅನಂತಶಯನ, ನಿಯೋಜಿತ ಅಧ್ಯಕ್ಷ ರಾಜೇಶ್ ಹಾಗೂ ಸದಸ್ಯರು ಹಾಜರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ.ಮಹೇಶ್, ಡಿಡಿಪಿಐ ಬಸವರಾಜು, ಸಂಚಾಲಕಿ ಜಾನೆಟ್ ಉಸ್ತುವಾರಿ ವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net