ಎಸ್ಸೆಸ್ಸೆಲ್ಸಿ ಇಂಗ್ಲಿಷ್ ಕಲಿಕಾ ಪುಸ್ತಕ ಬಿಡುಗಡೆ

ಡಯಟ್ ಸಂಸ್ಥೆಯಲ್ಲಿ ಇಂಗ್ಲಿಷ್ ಕಲಿಕಾ ಪುಸ್ತಕವನ್ನು ರಾಮಚಂದ್ರರಾಜೇ ಅರಸ್ ಬಿಡುಗಡೆಗೊಳಿಸಿದರು. ಎನ್.ವಿ.ಸ್ವಾಮಿ, ಎಂ.ಕೃಷ್ಣಪ್ಪ, ಡಾ ಸದಾಶಿವಯ್ಯ ಪಲ್ಲೇದ್, ವಿಕ್ರಾಂತ್ ಕೇಳ್ಕರ್, ರತ್ನಕುಮಾರ್ ಇತರರು ಇದ್ದರು.
ಡಯಟ್ ಸಂಸ್ಥೆಯಲ್ಲಿ ಇಂಗ್ಲಿಷ್ ಕಲಿಕಾ ಪುಸ್ತಕವನ್ನು ರಾಮಚಂದ್ರರಾಜೇ ಅರಸ್ ಬಿಡುಗಡೆಗೊಳಿಸಿದರು. ಎನ್.ವಿ.ಸ್ವಾಮಿ, ಎಂ.ಕೃಷ್ಣಪ್ಪ, ಡಾ ಸದಾಶಿವಯ್ಯ ಪಲ್ಲೇದ್, ವಿಕ್ರಾಂತ್ ಕೇಳ್ಕರ್, ರತ್ನಕುಮಾರ್ ಇತರರು ಇದ್ದರು.
Published on
ಕುಶಾಲನಗರ: ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಸೋಮವಾರಪೇಟೆ ತಾಲೂಕು ಹಂಡ್ಲಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ವಿಕ್ರಾಂತ್ ಕೇಳ್ಕರ್ ಅವರು ಎಸ್ಸೆಸ್ಸೆಲ್ಸಿ ಇಂಗ್ಲಿಷ್ ಪರೀಕ್ಷೆಯ ಫಲಿತಾಂಶ ವೃದ್ಧಿಗೆ ಸಿದ್ಧಪಡಿಸಿರುವ ’ಇಮೇಜಿನೇಟೆಡ್ ಲೆಸನ್ಸ್-ಎಸ್ಸೆಸ್ಸೆಲ್ಸಿ ಇಂಗ್ಲಿಷ್ ಪಾಠಗಳು ನನ್ನ ಕಲ್ಪನೆಯಂತೆ’ ಎಂಬ ಕಲಿಕಾ ಪುಸ್ತಕವನ್ನು ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶ ಹಾಗೂ ಕನ್ನಡ ಮಾಧ್ಯಮದ ಕೆಲ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಎನಿಸಿರುವ ಇಂಗ್ಲಿಷ್ ಕಲಿಕೆ ಉತ್ತಮಪಡಿಸಲು ವಿಕ್ರಾಂತ್ ಕೇಳ್ಕರ್ ಅವರು ಸಿದ್ಧಪಡಿಸಿರುವ ಪುಸ್ತಕ ಸಹಕಾರಿಯಾಗಿದೆ. ಇಂಗ್ಲಿಷ್ ಸುಲಭ ಕಲಿಕೆ ಜತೆಗೆ, ಚಿತ್ರಗಳನ್ನು ವೀಕ್ಷಿಸುವ ಮೂಲಕ ಓದಿದ ಅಂಶಗಳನ್ನು ಹೆಚ್ಚು ಕಾಲ ನೆನಪಿಟ್ಟುಕೊಳ್ಳುವಲ್ಲಿಯೂ ಪುಸ್ತಕ ಮಹತ್ವದ ಕೆಲಸ ಮಾಡುತ್ತದೆ. ಈ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯುವಲ್ಲಿ ಸಹಕರಿಯಾಗಲಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಮಾತನಾಡಿ, ಸಂಪನ್ಮೂಲ ಶಿಕ್ಷಕ ವಿಕ್ರಾಂತ್ ಅವರು ತಮ್ಮ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆ ಮೂಲಕ ಮಕ್ಕಳಿಗೆ ಇಂಗ್ಲಿಷ್ ಭಾಷೆಯನ್ನು ಸರಳವಾಗಿ ಕಲಿಯುವಂತೆ ತಯಾರಿಸಿರುವ ಈ ಕಲಿಕಾ ಪುಸ್ತಕ ಹೆಚ್ಚಿನ ಸಹಕಾರಿಯಾಗಲಿದೆ ಎಂದರು.
ಶಿಕ್ಷಕ ವಿಕ್ರಾಂತ್ ಕೇಳ್ಕರ್ ಮಾತನಾಡಿದರು. ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಎನ್.ವಿ.ಸ್ವಾಮಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್.ಪಲ್ಲೇದ್, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್.ರತ್ನಕುಮಾರ್, ಕೂಡುಮಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಶಿಕ್ಷಕರ ಸಂಘಟನೆಯ ಪ್ರಮುಖರಾದ ಪೊನ್ನಚ್ಚನ ಶ್ರೀನಿವಾಸ್, ಯಶವಂತ್, ಪೂರ್ಣೇಶ್, ನಿವೃತ್ತ ಚಿತ್ರಕಲಾ ಶಿಕ್ಷಕ ಉ.ರಾ.ನಾಗೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net