ರೋರ‍್ಯಾಕ್ಟ್ ಜಿಲ್ಲಾ ಪ್ರತಿನಿಧಿಯಾಗಿ ಶ್ರೀರಕ್ಷಾ ನೇಮಕ

ರೋರ‍್ಯಾಕ್ಟ್ ಜಿಲ್ಲೆ 3181 ಜಿಲ್ಲಾ ಪ್ರತಿನಿಧಿಯಾಗಿ ಕೊಡಗು ಮೂಲದ ಶ್ರೀರಕ್ಷಾ ಅಧಿಕಾರ ಸ್ವೀಕರಿಸಿದರು. ಸತೀಶ್ ಬೋಳಾರ್, ಯಶಸ್ವಿ ಸೋಮಶೇಖರ್, ಹೆಚ್.ಆರ್. ಕೇಶವ್, ಡಾ. ಸೂರ್ಯನಾರಾಯಣ ಕೊಕ್ಕಾಡಿ ಇದ್ದರು.
ರೋರ‍್ಯಾಕ್ಟ್ ಜಿಲ್ಲೆ 3181 ಜಿಲ್ಲಾ ಪ್ರತಿನಿಧಿಯಾಗಿ ಕೊಡಗು ಮೂಲದ ಶ್ರೀರಕ್ಷಾ ಅಧಿಕಾರ ಸ್ವೀಕರಿಸಿದರು. ಸತೀಶ್ ಬೋಳಾರ್, ಯಶಸ್ವಿ ಸೋಮಶೇಖರ್, ಹೆಚ್.ಆರ್. ಕೇಶವ್, ಡಾ. ಸೂರ್ಯನಾರಾಯಣ ಕೊಕ್ಕಾಡಿ ಇದ್ದರು.
Published on
ಮಡಿಕೇರಿ:
ರೋರ‍್ಯಾಕ್ಟ್ ಜಿಲ್ಲೆ 3181 ಜಿಲ್ಲಾ ಪ್ರತಿನಿಧಿಯಾಗಿ ಕೊಡಗು ಮೂಲದ ಶ್ರೀರಕ್ಷಾ ಮೈಸೂರಿನಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ತನ್ನ ತಂಡದೊAದಿಗೆ ಪದಗ್ರಹಣ ಸ್ವೀಕರಿಸಿದರು. ಮೈಸೂರಿನ ಶ್ರೀ ಕಂಠೀರವ ನರಸಿಂಹರಾಜ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಆಯೋಜಿತ ಸಮಾರಂಭದಲ್ಲಿ ರೋರ‍್ಯಾಕ್ಟ್ ಗೆ ಸೇರಿದ 56 ಸಂಸ್ಥೆಗಳಿಗೆ ಜಿಲ್ಲಾ ಪ್ರತಿನಿಧಿಯಾಗಿ ನೇಮಕಗೊಂಡ ಶ್ರೀರಕ್ಷಾ ಮತ್ತು ಕಾಯದರ್ಶಿಯಾಗಿ ನೇಮಕವಾದ ಮೂಕಳೇರ ತುಳಸಿ ತಂಗಮ್ಮ ಅವರಿಗೆ ರೋಟರಿ ಪ್ರಾಂತಪಾಲ ಸತೀಶ್ ಬೋಳಾರ್ ಪದಗ್ರಹಣ ನೀಡಿದರು
ನಾಪೋಕ್ಲುವಿನ ಹಿರಿಯ ಪತ್ರಕರ್ತ ಪ್ರಭಾಕರ್ ಮತ್ತು ಅಶ್ವಿನಿ ದಂಪತಿ ಪುತ್ರಿಯಾದ ಶ್ರೀರಕ್ಷಾ ಅಧಿಕಾರ ಸ್ವೀಕರಿಸಿ ಮಾತನಾಡಿ, ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಿಂದ ರೋರ‍್ಯಾಕ್ಟ್ನ ಈ ಪ್ರಮುಖ ಹುದ್ದೆಗೆ ನೇಮಕಗೊಂಡ ಸಂತೋಷ ತನ್ನದಾಗಿದೆ. ಸಾಕಷ್ಟು ಯೋಜನೆಗಳೊಂದಿಗೆ ಯುವತಂಡದ ನೆರವಿನೊಂದಿಗೆ ಜನಸೇವೆಗೆ ಇಳಿಯಲಾಗುವುದು. ಮಾಜಿ ಸೈನಿಕರಿಗೆ ನೆರವು, ಪರಿಸರ ಸಂರಕ್ಷಣೆಗಾಗಿ ಮ್ಯಾರಾಥಾನ್, ಆರ್ಥಿಕ ನಿಧಿ ಸಂಗ್ರಹ, ಕನ್ನಡ ನಾಡು ನುಡಿಗಾಗಿ ಕಾರ್ಯಕ್ರಮಗಳೂ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ರೋರ‍್ಯಾಕ್ಟ್ ಅಧ್ಯಕ್ಷೆಯಾಗಿ 4 ವರ್ಷಗಳ ಹಿಂದೆ ಪ್ರಾರಂಭವಾದ ರೋರ‍್ಯಾಕ್ಟ್ ಪಯಣದಲ್ಲಿ ಈಗ ಮುಖ್ಯ ಹುದ್ದೆ ದೊರಕುವಲ್ಲಿ ಕಾರಣವಾಗಿದೆ. ಸೇವಾ ಕಾರ್ಯಯೋಜನೆಗಳಲ್ಲಿ ಆಗ ಸಸಿಯಾಗಿದ್ದವಳು, ಈಗ ಗಿಡವಾಗಿ ಬೆಳೆಯುತ್ತಿದ್ದೇನೆ ಎಂದರು.
ರೋಟರಿ ಜಿಲ್ಲಾ ಪ್ರಾಂತಪಾಲ ಸತೀಶ್ ಬೋಳಾರ್ ಮಾತನಾಡಿ, ಯುವಪೀಳಿಗೆಯವರು ಸಾಮಾಜಿಕ ಕಳಕಳಿಯೊಂದಿಗೆ ಸೇವಾ ಗುಣ ಬೆಳೆಸಿಕೊಳ್ಳಬೇಕು ಎಂದರು.
ನಿಯೋಜಿತ ರೋಟರಿ ಜಿಲ್ಲಾ ಪ್ರಾಂತಪಾಲ ಯಶಸ್ವಿ ಸೋಮಶೇಖರ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಪಾಠವನ್ನು ಕಲಿಸಿದರೆ ರೋಟರಿಯಂಥ ಸೇವಾ ಸಂಸ್ಥೆಗಳು ಜೀವನ ಮೌಲ್ಯವನ್ನು ಕಲಿಸುತ್ತವೆ ಎಂದರು.
ಮಾಜಿ ಪ್ರಾಂತಪಾಲ ಹೆಚ್.ಆರ್. ಕೇಶವ್ ಮಾತನಾಡಿ, ತಲಕಾವೇರಿಯಲ್ಲಿ ಉಗಮಿಸುವ ಕಾವೇರಿ ನದಿಯು ತನ್ನ ದಿಕ್ಕನ್ನು ಬದಿಲಿಸಿದ್ದರೆ ಬಹಳ ಹತ್ತಿರದಲ್ಲಿಯೇ ಕೇರಳದ ಸಮುದ್ರ ಸೇರಲು ಸಾಧ್ಯವಿತ್ತು, ಆದರೆ ಕಾವೇರಿ ನದಿಯು, ಜನರಿಗೆ ಪ್ರಯೋಜನಕಾರಿಯಾಗಬೇಕೆಂದೇ 720 ಕಿ.ಮೀ. ಕ್ರಮಿಸಿ ಎಲ್ಲರಿಗೂ ನೀರು ನೀಡಿ ತನ್ನ ಜೀವನ ಸಾರ್ಥಕಗೊಳಿಸಿದ್ದಾಳೆ. ಕಾವೇರಿಯ ಈ ನಡೆ ಎಲ್ಲರಿಗೂ ಸೇವಾ ಕಾರ್ಯಕ್ಕೆ ಮಾದರಿಯಾಗಬೇಕೆಂದರು.
ಚುನಾಯಿತ ರೋಟರಿ ಪ್ರಾಂತಪಾಲ ಡಾ. ಸೂರ್ಯನಾರಾಯಣ ಕೊಕ್ಕಾಡಿ, ರೋಟರಿ ಜಿಲ್ಲಾ ಕಾಯದರ್ಶಿ ಗೋಪಾಲಕೃಷ್ಣ ಶೆಟ್ಟಿ, ರೋಟರಿ ಸಂಸ್ಥೆಗಳ ವಿಸ್ತರಣಾ ಸಮಿತಿ ಜಿಲ್ಲಾ ಅಧ್ಯಕ್ಷ ಹೆಚ್.ಟಿ. ಅನಿಲ್, ರೋಟರಿ ತರಬೇತುದಾರ ಡಾ. ಸಿ.ಆರ್. ಪ್ರಶಾಂತ್, ರೋಟರಿ ಮಡಿಕೇರಿ ವುಡ್ಸ್ ಸ್ಥಾಪಕಾಧ್ಯಕ್ಷ ಎಸ್.ಎಸ್. ಸಂಪತ್ ಕುಮಾರ್ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net