ಕೂಡಿಗೆಯಲ್ಲಿ ಸಂಭ್ರಮದ ಶ್ರೀ ಸುಬ್ರಹ್ಮಣ್ಯ ರಥೋತ್ಸವ

ಕೂಡಿಗೆಯಲ್ಲಿರುವ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ 57ನೇ ವಾರ್ಷಿಕ ಮಹಾ ರಥೋತ್ಸವ ಶ್ರದ್ಧಾಭಕ್ತಿಯೊಂದಿಗೆ ನಡೆಯಿತು.  26ಎಂಡಿಕೆ09: ಕೂಡಿಗೆ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ 57ನೇ ವಾರ್ಷಿಕ ಮಹಾ ರಥೋತ್ಸವ ಸಂದರ್ಭ ಕೇರಳ ಚೆಂಡ ವಾದನ ಗಮನ ಸೆಳೆಯಿತು.
ಕೂಡಿಗೆಯಲ್ಲಿರುವ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ 57ನೇ ವಾರ್ಷಿಕ ಮಹಾ ರಥೋತ್ಸವ ಶ್ರದ್ಧಾಭಕ್ತಿಯೊಂದಿಗೆ ನಡೆಯಿತು. 26ಎಂಡಿಕೆ09: ಕೂಡಿಗೆ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ 57ನೇ ವಾರ್ಷಿಕ ಮಹಾ ರಥೋತ್ಸವ ಸಂದರ್ಭ ಕೇರಳ ಚೆಂಡ ವಾದನ ಗಮನ ಸೆಳೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಕಾವೇರಿ - ಹಾರಂಗಿ ನದಿ ಸಂಗಮ ಕ್ಷೇತ್ರ ಕೂಡಿಗೆ
  • ಶ್ರದ್ಧಾಭಕ್ತಿಯಿಂದ ನಡೆದ ರಥೋತ್ಸವ
  • ರಥ ಎಳೆದು ಧನ್ಯರಾದ ಭಕ್ತರು
ಕುಶಾಲನಗರ:
ಕೊಡಗಿನ ಪವಿತ್ರ ಕಾವೇರಿ - ಹಾರಂಗಿ ನದಿ ಸಂಗಮ ಕ್ಷೇತ್ರವಾದ ಕೂಡಿಗೆಯಲ್ಲಿರುವ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ 57ನೇ ವಾರ್ಷಿಕ ಮಹಾ ರಥೋತ್ಸವ ಶ್ರದ್ಧಾಭಕ್ತಿಯೊಂದಿಗೆ ಬುಧವಾರ ನಡೆಯಿತು. ವಿಶೇಷ ಪೂಜೆ, ವಿವಿಧ ಹೋಮ, ಹವನ ಸೇರಿದಂತೆ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದ ನಂತರ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಮಾರ್ಗಶಿರ ಶುಕ್ಲ ಚಂಪಾ ಷಷ್ಠಿಯ ಅಂಗವಾಗಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಬೆಳಗ್ಗಿನಿಂದಲೇ ವಿಶೇಷ ಅಭಿಷೇಕ, ಹೋಮ ಹವನ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆದು ನಂತರ ಶ್ರೀ ಸ್ವಾಮಿ ಸನ್ನಿಧಿಯಲ್ಲಿ ಧಿಗ್ಬಲಿ, ರಥ ಬಲಿ, ರಥ ಪೂಜೆ ಸೇರಿದಂತೆ ವಿವಿಧ ಪೂಜೆಗಳ ನಂತರ ಶ್ರೀ ಸ್ವಾಮಿಯ ವಿಗ್ರಹವನ್ನು ಹೂವಿನಿಂದ ಸಿಂಗಾರಗೊAಡ ಭವ್ಯ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ನಂತರ ಭಕ್ತರ ಜಯ ಘೋಷದೊಂದಿಗೆ ಮಧ್ಯಾಹ್ನ 12.30 ಗಂಟೆಗೆ ಮಹಾ ರಥೋತ್ಸವ ಆರಂಭಗೊAಡಿತು.
ರಥೋತ್ಸವಕ್ಕೂ ಮೊದಲು ಅಯ್ಯಪ್ಪ ವ್ರತಾಧಾರಿಗಳು ದೇವರ ಕೀರ್ತನೆಗಳನ್ನು ಹಾಡಿ ಬೃಹತ್ ಪ್ರಮಾಣದ ಕರ್ಪೂರ ಹೆಚ್ಚಿ ಭಕ್ತಿ ಮೆರೆದರು.
ಸ್ವಾಮಿಯ ಸನ್ನಿಧಾನದಿಂದ ಸಂಪ್ರದಾಯದAತೆ ಕೂಡಿಗೆ ಮುಖ್ಯ ರಸ್ತೆಯ ಮೂಲಕ ಕೂಡುಮಂಗಳೂರು ಗ್ರಾಮದವರೆಗೆ ರಥೋತ್ಸವ ಸಾಗಿತು. ಈ ಸಂದರ್ಭದಲ್ಲಿ ಆಗಮಿಸಿದ್ದ ಭಕ್ತರು ರಥಕ್ಕೆ ಪೂಜೆ ಸಲ್ಲಿಸುವುದರ ಜತೆಗೆ ಬಾಳೆ ಹಣ್ಣು, ಜವನಗಳನ್ನು ಎಸೆದು ಭಕ್ತಿ ಮೆರೆದರು.
ರಥದ ಮುಂಭಾಗದಲ್ಲಿ ಕೂಡಿಗೆ - ಕೂಡುಮಂಗಳೂರು ಹನುಮ ಸೇನಾ ಸೇವಾ ಟ್ರಸ್ಟ್ ವತಿಯಿಂದ ವಿನೂತನವಾದ ಡ್ರೀವಡ್ಸ್ ಸಂಗೀತ ಒಳಗೊಂಡ ಚಂಡೆವಾದ್ಯ, ಕೀಲು ಕುದುರೆ ಸೇರಿದಂತೆ ವಿವಿಧ ಆಕರ್ಷಕ ಗೊಂಬೆ ಕುಣಿತ ರಥೋತ್ಸವಕ್ಕೆ ಮೆರುಗು ನೀಡಿದವು. ಸಂಜೆ 4 ಗಂಟೆಗೆ ಗ್ರಾಮಸ್ಥರಿಂದ ಪೂಜೆ ಸಲ್ಲಿಕೆ ಅದ ನಂತರ ಕೂಡುಮಂಗಳೂರು ಗ್ರಾಮದಿಂದ ಸಸ್ಥಳಕ್ಕೆ ರಥವನ್ನು ಭಕ್ತರು ಎಳೆದುಕೊಂಡು ಬಂದರು.
ದೇವಾಲಯ ಸಮಿತಿ ವತಿಯಿಂದ ಮಹಾ ರಥೋತ್ಸವದ ಅಂಗವಾಗಿ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯ ನಡೆಯಿತು. ಪೂಜಾ ಕೈಂಕರ್ಯಗಳನ್ನು ದೇವಸ್ಥಾನದ ಪ್ರಧಾನ ಅರ್ಚಕ ನವೀನ್ ಭಟ್ ಹಾಗೂ ಅರಕಲಗೂಡುವಿನ ಶ್ರೀ ಹರಿ ನೇತೃತ್ವದ ತಂಡ ನೆರವೇರಿಸಿಕೊಟ್ಟರು.
ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಾ ರಥೋತ್ಸವಕ್ಕೆ ಜಿಲ್ಲೆಯ ಭಕ್ತರು ಸೇರಿದಂತೆ ಪಕ್ಕದ ಹಾಸನ, ಮೈಸೂರು ಜಿಲ್ಲೆಗಳ ಗಡಿಭಾಗದ ಪಿರಿಯಾಪಟ್ಟಣ, ಮತ್ತು ಅರಕಲಗೂಡು ತಾಲೂಕಿನ ಭಕ್ತರೂ ಆಗಮಿಸಿದ್ದರು.
ಸ್ವಾಮಿಯ ಸನ್ನಿಧಿಯಲ್ಲಿ ಬೆಳಗ್ಗೆಯಿಂದ ಸಂಜೆ 7 ಗಂಟೆಯ ವರೆಗೂ ಪೂಜೆಗಳು ನಡೆದವು.
ರಥೋತ್ಸವದ ಅಂಗವಾಗಿ ದೇವಸ್ಥಾನದ ಜಾಗದಲ್ಲಿ ಜಾತ್ರೋತ್ಸವವು ನಡೆಯಿತು. ಇದರ ಅಂಗವಾಗಿ ಕೂಡಿಗೆಯಿಂದ ಕೂಡುಮಂಗಳೂರು ಗ್ರಾಮದ ವರೆಗೆ ಎಲ್ಲಾ ಅಂಗಡಿ ಮುಂಗಟ್ಟು, ಮನೆಗಳು, ವಿದ್ಯುತ್ ದೀಪಗಳಿಂದ ಸಿಂಗಾರಗೊAಡಿದ್ದವು. ಮುಂಜಾನೆಯಿAದಲೇ ಭಕ್ತರು ಹಣ್ಣು ಕಾಯಿ ಸೇರಿದಂತೆ ಹರಕೆಯನ್ನು ಸರ್ಮರ್ಪಿಸುತ್ತಿದರು. ರಾತ್ರಿ 8 ಗಂಟೆಗೆ ವಿದ್ಯುತ್ ಅಲಂಕೃತ ಭವ್ಯ ಮಂಟಪದಲ್ಲಿ ಶ್ರೀ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಮಂಟಪೋತ್ಸವ ನಡೆಸಲಾಯಿತು.
ಸಂಪ್ರದಾಯದAತೆ ಕೂಡಿಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಾ ರಥೋತ್ಸವದ ಸಂದರ್ಭದಲ್ಲಿ ದೇವಾಲಯದ ಮೇಲ್ಬಾಗದ ಆಕಾಶದಲ್ಲಿದಲ್ಲಿ ಗರುಡ ಹಾರಾಟ ನಡೆಸಿ ದೇವಾಲಯವನ್ನು ಸುತ್ತುತ್ತದೆ ಎಂಬ ಜನರ ನಂಬಿಕೆಯAತೆ ಈ ಬಾರಿ ರಥದಲ್ಲಿ ಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುವ ಸಮಯದಲ್ಲಿ ಒಂದು ಗರುಡನ ಪ್ರತ್ಯಕ್ಷವಾಯಿತು. ಈ ಸಂದರ್ಭದಲ್ಲಿ ಭಕ್ತರು ಶ್ರೀ ಸ್ವಾಮಿಯ ದರ್ಶನ ಎಂಬAತೆ ಜಯಘೋಷ ಹಾಕಿ ಭಕ್ತಿ ಮೆರೆದರು.
ರಥೋತ್ಸವದ ಅಂಗವಾಗಿ ಕೂಡಿಗೆ ಹನುಮ ಸೇನಾ ಸೇವಾ ಸಮಿತಿಯ ವತಿಯಿಂದ ಕೂಡಿಗೆ ಆಸ್ಪತ್ರೆ ಸಮೀಪದ ಮೈದಾನದಲ್ಲಿ ಅತ್ಯಾಕರ್ಷಕವಾಗಿ ಸಿಡಿಸಿದ ಬಣ್ಣ ಬಣ್ಣದ ಆಕರ್ಷಕ ಮದ್ದು ಗುಂಡುಗಳ ಪ್ರದರ್ಶನ ಹಾಗೂ ಬಾಣ ಬಿರುಸುಗಳ ಚಿತ್ತಾರ ನೋಡುಗರ ಕಣ್ಮನ ಸಳೆದವು.
ಈ ಸಂದರ್ಭದಲ್ಲಿ ಟಾಟಾ ಕಾಫಿ ಸಂಸ್ಕರಣಾ ಕೇಂದ್ರದ ಜನರಲ್ ಮ್ಯಾನೇಜರ್ ಆಗಿರುವ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಯು. ಸೋಮಯ್ಯ, ಸೀನಿಯರ್ ಮ್ಯಾನೇಜರ್ ನವೀನ್, ಸತ್ಯನಾರಾಯಣ ವ್ರತಚಾರಣ ಸಮಿತಿ ಅಧ್ಯಕ್ಷ ಗುರು, ಕಾರ್ಯದರ್ಶಿ ವಿಜೂ, ಹನುಮ ಸೇನಾ ಸಮಿತಿ ಅಧ್ಯಕ್ಷ ಶಿವಕುಮಾರ್, ಕೂಡುಮಂಗಳೂರು ಗ್ರಾಮದ ಪ್ರಮುಖರಾದ ಕೆ.ಟಿ. ಅರುಣ್ ಕುಮಾರ್, ಸುರೇಶ್, ಕಿಶೋರ್ ಕುಮಾರ್, ಧರ್ಮ, ಕೃಷ್ಣ, ಮಹೇಂದ್ರ, ನಂದಕುಮಾರ್, ಹರೀಶ್, ಗಣೇಶ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net