ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ. ಮಹಾಸಭಾ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ದೀಪಿಕಾ ಕರುಣ ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ ಮಹಾಸಭಾ ಮಹಿಳಾ ವಿಭಾಗದ ಉಪಾಧ್ಯಕ್ಷೆ ಮತ್ತು ಕೊಡಗು ಉಸ್ತುವಾರಿ ರಾಜೇಶ್ವರಿ ನಾಗರಾಜ್, ನಿರ್ದೇಶಕಿ ಅನುರಾಧ ಚಂದ್ರಶೇಖರ್, ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ.ಶಿವಪ್ಪ, ಮಹಾಸಭಾ ಪ್ರಮುಖರಾದ ಎಸ್.ಎಸ್.ಸುರೇಶ್, ಪ್ರವೀಣ್, ಶಾಂಬಶಿವಯ್ಯ, ಉದಯ್‌ಕುಮಾರ್, ಮೋಕ್ಷಿತ್‌ರಾಜ್, ಡಿ.ಬಿ.ಧರ್ಮಪ್ಪ, ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ, ಮಹಾಸಭಾ ವಿವಿಧ ವಿಭಾಗದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.