ವಾರ್ಷಿಕ ಮಹಾಸಭೆ: ಟ್ರಸ್ಟ್‌ನ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷ ಹೊನ್ನಪ್ಪ ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಬ್ರಿಜೇಶ್ ರೈ ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಸುಜಾತಾ.ಡಿ.ಎಂ, ನಾರಾಯಣ, ಕಿಶೋರ್ ರೈ ಕತ್ತಲೆಕಾಡು, ತೃಪ್ತಿ.ಬಿ.ಎಸ್, ತನುಶ್ರೀ.ಬಿ.ಜೆ, ಚರಣ್.ಎಂ.ಆರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಮ, ಸೀತೆಯ ರೂಪದಲ್ಲಿ ಕಂಗೊಳಿಸಿದ ಪುಟಾಣಿಗಳಾದ ಅದೃಷ್ಟ, ಮನಸ್ಸು ಕಿಶೋರ್ ರೈ, ಅದ್ವಿಕ ರೈ, ಶ್ರೀನಿಧಿ, ಅಕ್ಷನ, ನಿಶ್ಮಿತಾ, ಚಾರ್ವಿನ್ ಎಂ.ರೈ ಅವರಿಗೆ ಸ್ಮರಣಿಗೆ ನೀಡಿ ಗೌರವಿಸಿ ಪ್ರೋತ್ಸಾಹಿಸಲಾಯಿತು.