ಶ್ರೀ ಮುನೇಶ್ವರ ದೇಗುಲ ವಾರ್ಷಿಕೋತ್ಸವ ಸಂಪನ್ನ

ಶ್ರೀ ಮುನೇಶ್ವರ ದೇವಾಲಯದ ವಾರ್ಷಿಕೋತ್ಸವ
ಶ್ರೀ ಮುನೇಶ್ವರ ದೇವಾಲಯದ ವಾರ್ಷಿಕೋತ್ಸವ
Published on
ಸಿದ್ದಾಪುರ: ಸಮೀಪದ ಕಾವೇರಿ ನದಿ ದಡದ ಕಾಫಿ ಎಸ್ಟೇಟ್‌ನಲ್ಲಿ ನೆಲೆಗೊಂಡಿರುವ ಶ್ರೀ ಮುನೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಂಡಿರುವ ಚಾಮುಂಡೇಶ್ವರಿ, ಗುಳಿಗ ಹಾಗೂ ನಾಗದೇವರ ವಾರ್ಷಿಕ ಪೂಜಾ ಕೈಂಕರ್ಯಗಳು ಮಂಗಳವಾರ ಭಕ್ತಿಭಾವದಿಂದ ನೆರವೇರಿದವು.
ಸುಮಾರು 80 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಮುನೇಶ್ವರ ಹಾಗೂ ಪರಿವಾರ ದೈವಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಲಯದ ಪೂಜಾರಿ ಅಯ್ಯ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಮಧ್ಯಾಹ್ನ ನಡೆದ ಬಲಿ ಪೂಜೆಯ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಪ್ರಮುಖರಾದ ಚಂದ್ರ, ರಿವರ್ ಸೈಡ್ ಎಸ್ಟೇಟ್ ಮಾಲೀಕ ಚೆಂದಂಡ ಚುಮ್ಮಿ ಪೂವಯ್ಯ, ಬಾಲು, ತಂಗಮ್ಮ, ಸುಬ್ರಮಣಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net