ಏ.28ಕ್ಕೆ ಶ್ರೀ ಕಡೋಡಿ ಮಹಾವಿಷ್ಣುಮೂರ್ತಿ ಉತ್ಸವ

ಶ್ರೀ ಕಡೋಡಿ ಮಹಾವಿಷ್ಣುಮೂರ್ತಿ ದೈವಸ್ಥಾನ
ಶ್ರೀ ಕಡೋಡಿ ಮಹಾವಿಷ್ಣುಮೂರ್ತಿ ದೈವಸ್ಥಾನ
Published on
ಮಡಿಕೇರಿ
ಪ್ರಸಿದ್ಧ ಶ್ರೀ ಕಡೋಡಿ ಮಹಾವಿಷ್ಣುಮೂರ್ತಿ ದೈವಸ್ಥಾನದ 2026ನೇ ಸಾಲಿನ ಉತ್ಸವ ನಡೆಸುವ ಸಂಬAಧ ಭಾನುವಾರ (ಡಿ.28) ಭಾಗಮಂಡಲ ಸಮೀಪದ ಅಯ್ಯಂಗೇರಿಯ ಕುಯ್ಯಮುಡಿ ಐನ್ ಮನೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಕುಯ್ಯಮುಡಿ ಮತ್ತು ಕಡೋಡಿ ಕುಟುಂಬದವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. 2026ರ ಏ.21ರಂದು ಗೊನೆ ಕಡಿದು ಏ.27ಕ್ಕೆ ರಾತ್ರಿ ಬೊಳ್ಳಾಟ ಮತ್ತು ಇತರೇ ದೈವಗಳ ಕೋಲ ಹಾಗೂ ಏ.28ರಂದು ಶ್ರೀ ಮಹಾವಿಷ್ಣುಮೂರ್ತಿ ಮೆಲೇರಿ ಹಾಗೂ ಗುಳಿಗ ದೈವದ ಕೋಲಗಳನ್ನು ನಡೆಸುವ ಬಗ್ಗೆ ಈ ಸಭೆಯಲ್ಲಿ ತೀರ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net