ಶ್ರೀ ದಂಡಿನಮ್ಮ ದೇವಾಲಯಕ್ಕೆ 10 ಲಕ್ಷ ರೂ. ಅನುದಾನದ ಭರವಸೆ

ಕೂಡಿಗೆ ಗ್ರಾಮದಲ್ಲಿರುವ ಶ್ರೀ ದಂಡಿನಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ವಿಶೇಷ ಪೂಜೆ ಸಲ್ಲಿಸಿದರು. ವಿ.ಪಿ. ಶಶಿಧರ್, ಕೆ.ಎಸ್. ಚಂದ್ರು, ಕೆ.ಬಿ. ಪ್ರಕಾಶ್, ಕೆ.ಟಿ. ವೆಂಕಟೇಶ್ ಮತ್ತಿತರರು ಇದ್ದರು.
ಕೂಡಿಗೆ ಗ್ರಾಮದಲ್ಲಿರುವ ಶ್ರೀ ದಂಡಿನಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ವಿಶೇಷ ಪೂಜೆ ಸಲ್ಲಿಸಿದರು. ವಿ.ಪಿ. ಶಶಿಧರ್, ಕೆ.ಎಸ್. ಚಂದ್ರು, ಕೆ.ಬಿ. ಪ್ರಕಾಶ್, ಕೆ.ಟಿ. ವೆಂಕಟೇಶ್ ಮತ್ತಿತರರು ಇದ್ದರು.
Published on
ಕುಶಾಲನಗರ:
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕೂಡಿಗೆ ಗ್ರಾಮದಲ್ಲಿರುವ ಶ್ರೀ ದಂಡಿನಮ್ಮ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿದ್ದರು. ಶ್ರೀ ದಂಡಿನಮ್ಮ, ಶ್ರೀ ಬಸವೇಶ್ವರ, ಶ್ರೀ ಮುತ್ತತ್ ರಾಯ ದೇವಸ್ಥಾನ ಹಾಗೂ ಗ್ರಾಮದೇವಾ ಸಮಿತಿ ಕೂಡಿಗೆ-ಕೊಪ್ಪಲು, ಹೆಗ್ಗಡಳ್ಳಿ-ಕೋಟೆ ಇವರ ವತಿಯಿಂದ ಹಮ್ಮಿಕೊಂಡಿದ್ದ, ಗ್ರಾಮ ದೇವತೆಯ ಹಬ್ಬದ ಪೂಜೋತ್ಸವ ಕಾರ್ಯಕ್ರಮದಲ್ಲಿ ಶಾಸಕರು ಪಾಲ್ಗೊಂಡರು. ಈ ಸಂರ್ಭ ಮಾತನಾಡಿದ ಡಾ. ಮಂತರ್ ಗೌಡ ಗ್ರಾಮಗಳಲ್ಲಿ ಹಬ್ಬಾಚರಣೆಗಳ ಮೂಲಕ ಹಿಂದಿನ ಸಂಪ್ರದಾಯ, ಸಂಸ್ಕೃತಿಗಳನ್ನು ನಡೆಸುತ್ತಾ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕರಾಗಬೇಕಾಗಿದೆ. ಜತೆಯಲ್ಲಿ ಯುವಕರು ಒಗ್ಗೂಡಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಬೇಕು. ದೇವಾಯಲದ ಅಭಿವೃದ್ಧಿಗೆ ಮತ್ತು ನೂತನವಾಗಿ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಈ ಸಾಲಿನಲ್ಲಿ 10 ಲಕ್ಷ ರೂ. ಅನುದಾನ ನೀಡುವುದಾಗಿ ಇದೇ ವೇಳೆ ಪ್ರಕಟಿಸಿದರು.
ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತಾನಾಡಿ ಯುವಕರು ಹಬ್ಬ ಹರಿದಿನಗಳಲ್ಲಿ ಭಾಗವಹಿಸಿ ಸೇವಾ ಮನೋಭಾವದ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪಣತೊಡಬೇಕು. ಪಾರಂಪರಿಕವಾಗಿ ನಡೆದು ಬಂದು ಧಾರ್ಮಿಕ ಆಚರಣೆಗಳು ಬಹುಮುಖ್ಯ. ಅವುಗಳ ಆಚರಣೆಯ ಮೂಲಕ ಗ್ರಾಮದ ಪ್ರಗತಿಗೆ ಅನುಕೂಲ. ಸೌಹಾರ್ದತೆಯ ಮೂಲಕ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯ ಬೇಕೆಂದರು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿ ವತಿಯಿಂದ ಶಾಸಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್. ಚಂದ್ರು, ಉಪಾಧ್ಯಕ್ಷ ಕೆ.ಬಿ. ಪ್ರಕಾಶ್, ಕಾರ್ಯದರ್ಶಿ ಕೆ.ಟಿ. ವೆಂಕಟೇಶ್, ಸಹ ಕಾರ್ಯದರ್ಶಿ ಸಂತೋಷ್, ಸಮಿತಿಯ ಸಲಹೆಗಾರರಾದ ಕೆ.ಕೆ. ತಿಮ್ಮಪ್ಪ, ಕೆ.ಕೆ. ನಾಗರಾಜಶೆಟ್ಟಿ, ಕೆ.ಜೆ. ರಾಜಶೇಖರ್, ಕೆ.ಬಿ. ಪ್ರಕಾಶ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net