ಶ್ರೀಬಸವೇಶ್ವರ ದೇವಾಲಯ ಸಮಿತಿ ಭೂಮಿ ಸರ್ವೇ

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದಲ್ಲಿರುವ ರಾಜರ ಆಳ್ವಿಕೆಯ ಕಾಲದ 6 ಎಕರೆಗಳಷ್ಟು ಪ್ರದೇಶದ ಸರ್ವೇ ಕಾರ್ಯ ಜರುಗಿತು. ಕೆ.ಎಸ್.ಚಂದ್ರಶೇಖರ್, ಪ್ರಕಾಶ್, ಕೆ.ಟಿ.ವೆಂಕಟೇಶ್ ಮತ್ತಿತರರು ಇದ್ದರು.
ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದಲ್ಲಿರುವ ರಾಜರ ಆಳ್ವಿಕೆಯ ಕಾಲದ 6 ಎಕರೆಗಳಷ್ಟು ಪ್ರದೇಶದ ಸರ್ವೇ ಕಾರ್ಯ ಜರುಗಿತು. ಕೆ.ಎಸ್.ಚಂದ್ರಶೇಖರ್, ಪ್ರಕಾಶ್, ಕೆ.ಟಿ.ವೆಂಕಟೇಶ್ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Land Survey
ಕುಶಾಲನಗರ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದಲ್ಲಿರುವ ರಾಜರ ಆಳ್ವಿಕೆಯ ಕಾಲದ 6 ಎಕರೆಗಳಷ್ಟು ಪ್ರದೇಶವು 80 ವರ್ಷಗಳಿಂದಲೂ ಕೂಡಿಗೆ ಗ್ರಾಮದ ಶ್ರೀಬಸವೇಶ್ವರ ದೇವಾಲಯ ಸಮಿತಿ ಸ್ವಾಧೀನದಲ್ಲಿದ್ದು, ಅದರ ಸರ್ವೇ ಕಾರ್ಯ ಗುರುವಾರ ಜರುಗಿತು.
ಗ್ರಾಮದ ಸರ್ವೆ ನಂಬರ್ 61/2 ರಲ್ಲಿ 6 ಎಕರೆಗಳಷ್ಟು ಪ್ರದೇಶ ಇರುವುದರಿಂದ ಅದರ ಕ್ರಮಬದ್ಧವಾದ ಸರ್ವೆ ನಡೆಸಿ ಭೂಮಿ ಹದ್ದುಬಸ್ತು ಅನ್ನು ದೇವಾಲಯ ಸಮಿತಿಗೆ ವಹಿಸಿಕೊಂಡು ಆ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಶ್ರೀಬಸವೇಶ್ವರ ದೇವಾಲಯ ಸಮಿತಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ಆರಂಭಿಸಲಾಗಿದೆ.
ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್. ಚಂದ್ರಶೇಖರ್, ಉಪಾಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಕೆ.ಟಿ. ವೆಂಕಟೇಶ್, ಮಾಜಿ ಅಧ್ಯಕ್ಷ ಕೆ.ಪಿ. ಸೋಮಣ್ಣ, ಸಮಿತಿ ನಿರ್ದೇಶಕರಾದ ಸೋಮಶೇಖರ್, ರಂಗ, ಪ್ರಸನ್ನ, ಗ್ರಾಮಸ್ಥರು, ಸರ್ವೆ ಇಲಾಖೆಯ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net