ಬಳಿಕ ಮಾತನಾಡಿ, 45 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಕ್ರೀಡಾ ವಸತಿ ಶಾಲೆ, ತರಬೇತಿ ಕೇಂದ್ರದ ಕಾಮಗಾರಿ ಇದಾಗಿದೆ. ಮೊದಲ ಹಂತವಾಗಿ ಆಡಳಿತ ಭವನ, ಬ್ಯಾಡ್ಮಿಂಟನ್ ಅಂಕಣ, ಜಿಮ್ ಕಾಮಗಾರಿ ಚಾಲನೆಯಲ್ಲಿದ್ದು ಇದಾದ ಬಳಿಕ ಎರಡು ಹಾಗೂ ಮೂರನೇ ಹಂತದಲ್ಲಿ ಟರ್ಪ್ ಹಾಕಿ ಮೈದಾನ , ರನ್ನಿಂಗ್ ಟ್ರ್ಯಾಕ್ , ಕ್ರಿಕೆಟ್ ಪಿಚ್ , ಟೆನಿಸ್ ಅಂಕಣ, ಈಜುಕೊಳ, ಶೂಟಿಂಗ್ ಪಾಯಿಂಟ್, ಬಾಸ್ಕೆಟ್ ಬಾಲ್, ವಾಲಿಬಾಲ್ ಕೋರ್ಟ್ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಎರಡು ವಸತಿ ನಿಲಯ ನಿರ್ಮಾಣವಾಗಲಿದೆ ಎಂದು ಹೇಳಿದರು.