ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿ

ಪೊನ್ನಂಪೇಟೆಯಲ್ಲಿ ಆಯೋಜಿಸಿದ್ದ ಅಮ್ಮ ಕೊಡವ ಬ್ಯಾಡ್ಮಿಂಟನ್ ಪಂದ್ಯಾವಳಿಯ ವಿಜೇತರಾದ ಬಾನಂಡ ಸುನೀತ್, ಚಿರಾಗ್, ಅನಿಲ್ ಪ್ರಸಾದ್, ಅಭಯ್, ಮನ್ನಕ್ಕಮನೆ ಸುಮೀತ್, ನವ್ಯಾ, ಸೌಮ್ಯಾಬಾಲು,ದೀಕ್ಷಿತ್, ತನಿಷ್ ಗ್ರಂಥ, ವಜ್ರ, ತನ್ಮಯ್ ಅವರೊಂದಿಗೆ ಗಣ್ಯರು ಇದ್ದರು.
ಪೊನ್ನಂಪೇಟೆಯಲ್ಲಿ ಆಯೋಜಿಸಿದ್ದ ಅಮ್ಮ ಕೊಡವ ಬ್ಯಾಡ್ಮಿಂಟನ್ ಪಂದ್ಯಾವಳಿಯ ವಿಜೇತರಾದ ಬಾನಂಡ ಸುನೀತ್, ಚಿರಾಗ್, ಅನಿಲ್ ಪ್ರಸಾದ್, ಅಭಯ್, ಮನ್ನಕ್ಕಮನೆ ಸುಮೀತ್, ನವ್ಯಾ, ಸೌಮ್ಯಾಬಾಲು,ದೀಕ್ಷಿತ್, ತನಿಷ್ ಗ್ರಂಥ, ವಜ್ರ, ತನ್ಮಯ್ ಅವರೊಂದಿಗೆ ಗಣ್ಯರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ
  • ಅರಣ್ಯ ಮಹಾ ವಿದ್ಯಾಲಯ
  • ಒಳಾಂಗಣ ಕ್ರೀಡಾಂಗಣ
ಪೊನ್ನಂಪೇಟೆ: ಕ್ರೀಡೆ ಒಗ್ಗಟ್ಟು ಮೂಡಿಸುವುದರ ಜತೆಗೆ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಎಂದು ವಿರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಹೇಳಿದರು.
ಇಲ್ಲಿನ ಅರಣ್ಯ ಮಹಾ ವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಅಮ್ಮ ಕೊಡವ ಯೂತ್ ವಿಂಗ್ ವತಿಯಿಂದ ಆಯೋಜಿಸಿದ್ದ ಮೊದಲನೇ ವರ್ಷದ ಅಮ್ಮ ಕೊಡವ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಆದರೆ ಎಲ್ಲರೂ ಕ್ರೀಡಾ ಸ್ಫೂರ್ತಿಯಿಂದ ಭಾಗವಹಿಸುವ ಮೂಲಕ ಪಂದ್ಯಾವಳಿಯ ಯಶಸ್ಸಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯಮಟ್ಟದ ಮಾಸ್ಟರ್ಸ್ ಈಜು ಸ್ಪರ್ಧೆಯಲ್ಲಿ ಚಿನ್ನ ಹಾಗೂ ಬೆಳ್ಳಿಪದಕ ಪಡೆದ ಹೆಮ್ಮಚ್ಚಿಮನೆ ಮಿಥಿ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಅಮ್ಮ ಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರಥ್ಯು, ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ. ದೇವಗಿರಿ, ವೋಲ್ವೋ ಗ್ರೂಪ್ ಇಂಡಿಯಾದ ಡಿಜಿಎಂ ಬಾನಂಡ ಸುನೀತ್ ಹಾಜರಿದ್ದರು.
ಬ್ಯಾಡ್ಮಿಂಟನ್ ಪಂದ್ಯಾವಳಿ ವಿಜೇತರು: ಅಮ್ಮ ಕೊಡವ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಪುರುಷರ ವಿಭಾಗದಲ್ಲಿ ಬಾನಂಡ ಸುನೀತ್‌ಮತ್ತು ಚಿರಾಗ್ ಜೋಡಿ ಪ್ರಥಮ ಸ್ಥಾನ, ಪುತ್ತಾಮನೆ ಅನಿಲ್ ಪ್ರಸಾದ್ ಮತ್ತು ಚೀರಮ್ಮನ ಅಭಯ್ ಜೋಡಿ ದ್ವಿತೀಯ ಸ್ಥಾನ ಪಡೆಯಿತು.
ಮಹಿಳೆಯರ ವಿಭಾಗದಲ್ಲಿ ಮನ್ನಕ್ಕಮನೆ ಸುಮಿತ್ ಮತ್ತು ನವ್ಯಾ ಜೋಡಿ ಪ್ರಥಮ, ಮನ್ನಕ್ಕಮನೆ ಸೌಮ್ಯಾ ಬಾಲು ಹಾಗೂ ದೀಕ್ಷಿತ್ ಜೋಡಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ಮಕ್ಕಳ ವಿಭಾಗದಲ್ಲಿ ಪುತ್ತಾಮನೆ ತನಿಷ್ ಹಾಗೂ ಗ್ರಂಥ್ ಜೋಡಿ ಪ್ರಥಮ, ಮನ್ನಕ್ಕಮನೆ ವಜ್ರ ಮತ್ತು ಅಚ್ಚಿಯಂಡ ತನ್ಮಯಿ ಜೋಡಿ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರೀಯ ಹಾಕಿ ಆಟಗಾರ ಹೆಮ್ಮಚ್ಚಿಮನೆ ಸಂದೀಪ್ ಸೋಮಯ್ಯ, ಅಮ್ಮ ಕೊಡವ ವಿದ್ಯಾಭಿವೃದ್ಧಿ ಸಂಘದ ಖಜಾಂಚಿ ಮನ್ನಕ್ಕಮನೆ ಬಾಲಕೃಷ್ಣ, ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಈಶ್ವರ, ಕೊತೂರು ಶ್ರೀ ಕೃಷ್ಣ ಅಮ್ಮ ಕೊಡವ ಸಂಘದ ಹೆಮ್ಮಚ್ಚಿಮನೆ ಆಶಿತ್, ಕೋತೂರು ಅನ್ನಪೂರ್ಣೇಶ್ವರಿ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಶ್ವೇತಾ ರವಿ, ಪಂದ್ಯಾವಳಿ ಸಂಯೋಜಕರಾದ ಪುತ್ತಾಮನೆ ಅನಿಲ್ ಪ್ರಸಾದ್, ಪುತ್ತಾಮನೆ ಯತೀಶ್, ಪುತ್ತಾಮನೆ ಪರ್ವತ್, ಅಮ್ಮಕೊಡವ ಯೂತ್ ವಿಂಗ್ ಸದಸ್ಯರು ಇದ್ದರು. ತೀರ್ಪುಗಾರರಾಗಿ ನೀಲ್ ನಾಚಪ್ಪ, ನಿಶಾಂತ್, ಅನಿರುದ್ಧ್, ಪವನ್, ವಿಷ್ಣು, ಜೈ ದೀಪ್, ಅನಿಲ್ ಪ್ರಸಾದ್ ಅಭಯ್ ಕಾರ್ಯ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net