ಮೋಜು-ಮಸ್ತಿಗಾಗಿ ಆರಂಭವಾದ ಕ್ರಿಕೆಟ್ ಕ್ರಮೇಣ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡು ಇಂದು ಎಲ್ಲ ವಯೋಮಾನದವರನ್ನು ಸೆಳೆಯುತ್ತಿದೆ. ಶಿಸ್ತುಬದ್ಧ ಆಟವಾಗಿ ಜನಪ್ರಿಯಗೊಂಡಿರುವ ಕ್ರಿಕೆಟ್ ಭಾರತದಲ್ಲೂ ಛಾಪು ಮೂಡಿಸಿದೆ. ಕ್ರೀಡಾ ಕ್ಷೇತ್ರದಲ್ಲಿ ಜೀವನ ಕಟ್ಟಿಕೊಳ್ಳಲು ಸಾಧ್ಯವಿದೆ. ಕೋಟ್ಯಂತರ ರೂಪಾಯಿ ಹಣ, ಗೌರವ ಆಟಗಾರರಿಗೆ ದೊರೆಯುತ್ತಿದೆ. ಕ್ರಿಕೆಟ್ ನಾಯಕತ್ವ ಗುಣ, ಕೌಶಲವನ್ನು ವೃದ್ಧಿಸುತ್ತದೆ. ಮಾನಸಿಕ ಒತ್ತಡ ನಿಭಾಯಿಸುವ ಶಕ್ತಿ ಕ್ರೀಡೆ ನೀಡುತ್ತದೆ. ತಾಳ್ಮೆ, ಸದೃಢತೆ ಸಾಧಿಸಿದರೆ ಎಲ್ಲ ರೀತಿಯ ಒತ್ತಡ ನಿಭಾಯಿಸಬಹುದು. ದೇಶದ ಪ್ರಗತಿಯಲ್ಲಿ ಕ್ರೀಡೆ ದೊಡ್ಡ ಮಟ್ಟದ ಕೊಡುಗೆ ನೀಡಿದೆ. ಐಕ್ಯತೆಗೂ ಕಾರಣವಾಗಿದೆ ಎಂದರು.