ಪ್ರತಿಭೆ ಅನಾವರಣಕ್ಕೆ ಕ್ರೀಡಾಕೂಟಗಳು ಅವಶ್ಯ

 ಮಡಿಕೇರಿಯಲ್ಲಿ ನಡೆದ ಬಿಲ್ಲದ ಸಮುದಾಯದ ಕ್ರೀಡಾಕೂಟದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಕ್ರಿಕೆಟ್ ಆಡಿ ಗಮನ ಸೆಳೆದರು. ಲಿಂಗಪ್ಪ ಪೂಜಾರಿ, ಆಪ್ರು ರವೀಂದ್ರ, ತೆನ್ನಿರಾ ಮೈನಾ ಮತ್ತಿತರರು ಈ ಸಂದರ್ಭ ಇದ್ದರು.
ಮಡಿಕೇರಿಯಲ್ಲಿ ನಡೆದ ಬಿಲ್ಲದ ಸಮುದಾಯದ ಕ್ರೀಡಾಕೂಟದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಕ್ರಿಕೆಟ್ ಆಡಿ ಗಮನ ಸೆಳೆದರು. ಲಿಂಗಪ್ಪ ಪೂಜಾರಿ, ಆಪ್ರು ರವೀಂದ್ರ, ತೆನ್ನಿರಾ ಮೈನಾ ಮತ್ತಿತರರು ಈ ಸಂದರ್ಭ ಇದ್ದರು.
Published on
ಮಡಿಕೇರಿ:
ಸಮುದಾಯದ ಯುವ ಪೀಳಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಕ್ರೀಡಾಕೂಟಗಳು ತುಂಬಾ ಸಹಕಾರಿಯಾಗಿದೆ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ಮಡಿಕೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬಿಲ್ಲವ ಸಮುದಾಯದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಆಯ್ಕೆ ಮಾಡಲಾಯಿತು.
ಕೊಡಗಿನಲ್ಲಿ ಎಲ್ಲಾ ಸಮುದಾಯಗಳು, ಕುಟುಂಬಗಳು ಒಗ್ಗಟ್ಟಿನಿಂದ ಇರುವ ಕಾರಣ ಇಂಥ ಕ್ರೀಡಾಕೂಟಗಳು ಮತ್ತಷ್ಟು ಪ್ರಾಶಸ್ತ್ಯ ಪಡೆಯುತ್ತಿವೆ. ಸಮುದಾಯದ ಯುವ ಪೀಳಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಈ ರೀತಿಯ ಕ್ರೀಡಾಕೂಟಗಳು ತುಂಬಾ ಸಹಕಾರಿ. ಯುವ ಜನತೆ ಇಂತಹ ಕ್ರೀಡಾಕೂಟಗಳನ್ನು ಸದುಪಯೋಗಪಡಿಸಿಕೊಂಡು ತಾವು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಅವರ ಭವಿಷ್ಯ ಉಜ್ವಲ ಪ್ರದರ್ಶನ. ಕ್ರೀಡೆಯನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸಿ ಎಲ್ಲಾ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಲು ಪ್ರಯತ್ನಿಸಬೇಕು. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನಸ್ಸನ್ನು ಬೆಳೆಸಿಕೊಳ್ಳಬೇಕು.
ಕೊಡಗು ಜಿಲ್ಲಾ ಬಿಲ್ಲವ ಸಮಾಜದ ಅಧ್ಯಕ್ಷ ಲಿಂಗಪ್ಪ ಪೂಜಾರಿ, ಕಾಂಗ್ರೆಸ್ ಮುಖಂಡ ಆಪ್ರು ರವೀಂದ್ರ, ತೆನ್ನಿರಾ ಮೈನಾ, ಕಾರ್ಯಕ್ರಮ ಆಯೋಜಕರು ಈ ಸಂದರ್ಭ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net