ಕ್ರೀಡೆಯಿಂದ ಸಮಾಜದಲ್ಲಿ ಒಗ್ಗಟ್ಟು ಸಾಧ್ಯ

ಪೊನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ಜರುಗಿದ ಬ್ರಾಹ್ಮಣ ಅರ್ಚಕರ ಸಂಘದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ವಿಜೇತರಾದ ಶ್ರೀನಿವಾಸ್ ಹಾಗೂ ಪ್ರಸನ್ನಮಯ್ಯ ಜೋಡಿ.
ಪೊನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ಜರುಗಿದ ಬ್ರಾಹ್ಮಣ ಅರ್ಚಕರ ಸಂಘದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ವಿಜೇತರಾದ ಶ್ರೀನಿವಾಸ್ ಹಾಗೂ ಪ್ರಸನ್ನಮಯ್ಯ ಜೋಡಿ.
Published on

ಪ್ರಮುಖ ಮುಖ್ಯಾಂಶಗಳು

  • ಅರಣ್ಯ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಜಡೇಗೌಡ ಅಭಿಮತ
ಪೊನ್ನಂಪೇಟೆ: ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ, ಕೊಡಗು ಜಿಲ್ಲಾ ಬ್ರಾಹ್ಮಣ ಅರ್ಚಕರ ಸಂಘದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ,
ಕುಶಾಲನಗರದ ಶ್ರೀನಿವಾಸ್, ಪ್ರಸನ್ನಮಯ್ಯ ಜೋಡಿ ಪ್ರಥಮ ಸ್ಥಾನ, ಪೊನ್ನಂಪೇಟೆ ಪ್ರಸನ್ನ ವೈಲಾಯ ಮತ್ತು ಆಯುಷ್ ಜೋಡಿ ದ್ವಿತೀಯ ಸ್ಥಾನ ಪಡೆದು ಕೊಂಡರು.
ಮಹಿಳೆಯರ ವಿಭಾಗದಲ್ಲಿ ಪೊನ್ನಂಪೇಟೆಯ ಪ್ರಣಮ್ಯ ಮತ್ತು ವಂಶಿಕಾ ಜೋಡಿ ಪ್ರಥಮ ಸ್ಥಾನ, ರಜನಿ ಮತ್ತು ಆಶಿಕಾ ಭಾರದ್ವಾಜ್ ಜೋಡಿ ದ್ವಿತೀಯ ಸ್ಥಾನ ಪಡೆದುಕೊಂಡರು.
ಪ್ರಥಮ ಸ್ಥಾನ ಪಡೆದ ಜೋಡಿಗೆ 5 ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಜೋಡಿಗೆ 3 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು.
ಕ್ರೀಡಾ ಕೂಟದಲ್ಲಿ ಪುರುಷರ ವಿಭಾಗದಲ್ಲಿ 9 ತಂಡಗಳು, ಮಹಿಳೆಯರ ವಿಭಾಗದಲ್ಲಿ 7 ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಿದವು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡಿದ್ದ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಜಡೇಗೌಡ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಬ್ರಾಹ್ಮಣ ಅರ್ಚಕರಿಗಾಗಿ ಕ್ರೀಡಾಕೂಟ ಮಾಡಿರುವುದು ಉತ್ತಮ ಬೆಳವಣಿಗೆ, ಯಾವುದೇ ಒಂದು ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸಲು ಕ್ರೀಡೆಯಿಂದ ಸಾಧ್ಯ ಎಂದರು.
ಕೊಡಗು ಜಿಲ್ಲಾ ಬ್ರಾಹ್ಮಣ ಅರ್ಚಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಕೇಕುಣ್ಯಾಯ ಮಾತನಾಡಿ, ಕೋವಿಡ್ ಕಾಲದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಂಘದಿಂದ ಕ್ರೀಡೆಯ ಮೂಲಕ ಮತ್ತಷ್ಟು ಒಗ್ಗಟ್ಟು ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ಸದಸ್ಯರೇ ಹೊಂದಾಣಿಕೆ ಮೂಲಕ ತಾವೇ ಹಣ ಹಾಕಿ ಕ್ರೀಡೆ ನಡೆಸಿದ್ದು, ಖುಷಿ ತಂದಿದೆ ಎಂದರು.
ಕಾರ್ಯದರ್ಶಿ ನಾಗೇಶ್ ಭಾರದ್ವಾಜ್, ಸದಸ್ಯರಾದ ಅಶೋಕ್ ಭಟ್, ದಯಾನಂದ, ಇನ್ನಿತರ ಸದಸ್ಯರು, ಟ್ರೋಫಿ ಪ್ರಾಯೋಜಕರಾದ ಸುಬ್ರಹ್ಮಣ್ಯ ಹಳ್ಳಿಗಟ್ಟು ಹಿರಿಯರಾದ ವಿಷ್ಣುಮೂರ್ತಿ, ಬೆಕ್ಕೆಸೊಡ್ಲೂರು ಶಾಲಾ ಶಿಕ್ಷಕ ಕೃಷ್ಣ,ಅರಣ್ಯ ಮಹಾ ವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಈಶ್ವರ್ ಇದ್ದರು.
ಶಿವಪ್ರಸಾದ್ ಕೇಕುಣ್ಣಾಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net