ಕ್ರೀಡೆ ದೈಹಿಕ, ಮಾನಸಿಕ ಬೆಳವಣೆಗೆಗೆ ಸಹಕಾರಿ

ತಾಲೂಕು ಮಟ್ಟದ ಬಾಲಕರ ಮತ್ತು ಬಾಲಕಿಯರ ಖೋ ಖೋ ಮತ್ತು ಕರಾಟೆ ಪಂದ್ಯಾವಳಿಯನ್ನು ಕಲ್ಲುಮಠ ವಿದ್ಯಾಸಂಸ್ಥೆ ನಿರ್ದೇಶಕ ಶಿವಶೇಖರ್ ಉದ್ಘಾಟಿಸಿದರು. ಸೂಫಿ ಪೆರಾಜೆ, ಕರುಂಬಯ್ಯ, ಆಶಾ, ಅಬಿಲಾಷ್, ಪುನಿತ್ ಇತರರಿದ್ದರು.
ತಾಲೂಕು ಮಟ್ಟದ ಬಾಲಕರ ಮತ್ತು ಬಾಲಕಿಯರ ಖೋ ಖೋ ಮತ್ತು ಕರಾಟೆ ಪಂದ್ಯಾವಳಿಯನ್ನು ಕಲ್ಲುಮಠ ವಿದ್ಯಾಸಂಸ್ಥೆ ನಿರ್ದೇಶಕ ಶಿವಶೇಖರ್ ಉದ್ಘಾಟಿಸಿದರು. ಸೂಫಿ ಪೆರಾಜೆ, ಕರುಂಬಯ್ಯ, ಆಶಾ, ಅಬಿಲಾಷ್, ಪುನಿತ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೈಹಿಕ ಶಿಕ್ಷಣ ಪರಿವೀಕ್ಷಕ ಸೂಫಿ ಪೆರಾಜೆ ಹೇಳಿಕೆ
ಶನಿವಾರಸಂತೆ: ಸೋಮವಾರಪೇಟೆ ತಾಲೂಕು ಮಟ್ಟದ 14 ವರ್ಷ ವಯೋಮಾನದ ಬಾಲಕ ಮತ್ತು ಬಾಲಕಿಯರ ಖೋ ಖೋ ಹಾಗೂ ಕರಾಟೆ ಪಂದ್ಯಾವಳಿ ಕೊಡ್ಲಿಪೇಟೆ ಕಲ್ಲುಮಟ್ಟದ ಎಸ್‌ಕೆಎಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಕ್ರೀಡಾಂಗಣದಲ್ಲಿ ನಡೆಯಿತು.
ಪಂದ್ಯಾವಳಿಯನ್ನು ವಿದ್ಯಾಸಂಸ್ಥೆ ನಿರ್ದೇಶಕ ಶಿವಶೇಖರ್ ಉದ್ಘಾಟಿಸಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸೂಫಿ ಪೆರಾಜೆ ಮಾತನಾಡಿ, ಕ್ರೀಡಾ ಚಟುವಟಿಕೆಯಿಂದ ವಿದ್ಯಾರ್ಥಿಗಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಕ್ರೀಡಾ ಮನೋಭಾವ, ಶಿಸ್ತು ಮತ್ತು ನಿಯಮವನ್ನು ಪಾಲನೆ ಮಾಡುವ ಮೂಲಕ ಉತ್ತಮ ಕ್ರೀಡಾಪಟುಗಳಾಗಲು ಸಾಧ್ಯವಾಗುತ್ತದೆ ಎಂದರು.
ಖೋ ಖೋ ಹಾಗೂ ಕರಾಟೆ ಪಂದ್ಯಾವಳಿಯ ತೀರ್ಪುಗಾರರು ಯಾವುದೆ ಲೋಪ ದೋಷಗಳಿಲ್ಲದೆ ನ್ಯಾಯಸಮ್ಮತ್ತವಾಗಿ ತೀರ್ಪು ನೀಡುವಂತೆ ಸಲಹೆ ನೀಡಿದರು.
ಕರಾಟೆ ಶಿಕ್ಷಕ ಅರುಣ್, ದೈಹಿಕ ಶಿಕ್ಷಣ ಶಿಕ್ಷಕ ಕರುಂಬಯ್ಯ, ಕೊಡ್ಲಿಪೇಟೆ ವಲಯ ಕ್ರೀಡಾಕೂಟ ಕಾರ್ಯದರ್ಶಿ ಸುನಿಲ್, ಪ್ರಾಥಮಿಕ ಶಾಲಾ ವಿಭಾಗದ ವಲಯ ಕಾರ್ಯದರ್ಶಿ ಆಶಾ, ಶಾಲಾ ಮುಖ್ಯಶಿಕ್ಷಕ ಎಚ್.ಎಂ. ಅಭಿಲಾಷ್, ಎಚ್.ಪಿ.ಪುನಿತ್ ವಿವಿಧ ಶಾಲೆಗಳ ದೈಹಿಕ ಶಿಕ್ಷಕರು ಕರಾಟೆ ತರಬೇತುದಾರರು ಹಾಜರಿದ್ದರು.
ಪಂದ್ಯಾವಳಿಯ ಸ್ಪರ್ಧಾ ವಿಜೇತರು: ಖೋ ಖೋ ಪಂದ್ಯಾವಳಿಯ ಬಾಲಕರ ವಿಭಾಗದಲ್ಲಿ ಆಲೂರು ಸಿದ್ದಾಪುರ ಮುರಾರ್ಜಿ ದೇಸಾಯಿ ವಸತಿ ಶಾಲಾ ತಂಡ ಪ್ರಥಮ ಸ್ಥಾನ. ಬಸವನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲಾ ತಂಡ ದ್ವಿತೀಯ ಸ್ಥಾನ ಪಡೆದುಕೊಂಡವು.
ಖೋ ಖೋ ಬಾಲಕಿಯರ ವಿಭಾಗದಲ್ಲಿ ಆಲೂರು ಸಿದ್ದಾಪುರ ಮುರಾರ್ಜಿ ದೇಸಾಯಿ ವಸತಿ ಶಾಲಾ ತಂಡ ಪ್ರಥಮ ಸ್ಥಾನ. ಕೊಡ್ಲಿಪೇಟೆ ಕಲ್ಲುಮಠದ ಎಸ್‌ಕೆಎಸ್ ಶಾಲಾ ತಂಡ ದ್ವೀತಿಯ ಸ್ಥಾನ ಪಡೆದುಕೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net