ಜೀವನದಲ್ಲಿ ಶಿಕ್ಷಣದ ಜತೆ ಕ್ರೀಡೆ ಅವಶ್ಯ

ಬಲ್ಲಮಾವಟಿ ನಾಲ್ನಾಡ ಹಾಕಿ ಕ್ಲಬ್ ವತಿಯಿಂದ ಬಲ್ಲಮಾವಟಿಯ ನೇತಾಜಿ ಪ್ರೌಢಶಾಲಾ ಆಟದ ಮೈದಾನದಲ್ಲಿ ಹಾಕಿ ತರಬೇತಿ ಶಿಬಿರವನ್ನು ಕೊಡಗಿನ ಹಿರಿಯ ಹಾಕಿ ಆಟಗಾರ ಮಡಿಕೇರಿಯ ವಾಂಡರ್ಸ್ ಕ್ಲಬ್ಬಿನ ತರಬೇತುದಾರ ಕೋಟೆರ ನಾಣಯ್ಯ ಉದ್ಗಾಟಿಸಿದರು. ಕರವಂಡ ಸುರೇಶ್, ಅಪ್ಪಚೆಟ್ಟೋಳಂಡ ಡಾಲಿ ಬೋಪಯ್ಯ, ನುಚ್ಚಿಮಣಿಯಂಡ ಗಣೇಶ, ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಹಾಕಿ ಆಟಗಾರ ಕೋಟೆರ ನಾಣಯ್ಯ ಅಭಿಮತ
ನಾಪೋಕ್ಲು: ಬಲ್ಲಮಾವಟಿ ನಾಲ್ನಾಡ ಹಾಕಿ ಕ್ಲಬ್ ವತಿಯಿಂದ ಬಲ್ಲಮಾವಟಿಯ ನೇತಾಜಿ ಪ್ರೌಢಶಾಲಾ ಆಟದ ಮೈದಾನದಲ್ಲಿ ಆಯೋಜಿಸಿದ್ದ ಹಾಕಿ ತರಬೇತಿ ಶಿಬಿರವನ್ನು ಶುಕ್ರವಾರ ಕೊಡಗಿನ ಹಿರಿಯ ಹಾಕಿ ಆಟಗಾರ ಮಡಿಕೇರಿಯ ವಾಂಡರ್ಸ್ ಕ್ಲಬ್ ತರಬೇತುದಾರ ಕೋಟೆರ ನಾಣಯ್ಯ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಶಾಲೆಗಳಲ್ಲಿ ಯಾವ ರೀತಿ ಶಿಸ್ತುಬದ್ಧವಾಗಿ ಪಾಠ ಪ್ರವಚನಗಳಲ್ಲಿ ಭಾಗಿಯಾಗುತ್ತಿರೋ ಅದೇ ರೀತಿ ಶಿಬಿರದಲ್ಲೂ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಜೀವನದಲ್ಲಿ ಶಿಕ್ಷಣದ ಜತೆ ಕ್ರೀಡೆಯೂ ಅವಶ್ಯವಾಗಿದೆ ಎಂದರು.
ಸಂಘದ ಅಧ್ಯಕ್ಷ ಕರವಂಡ ಸುರೇಶ್, ಅಪ್ಪಚೆಟ್ಟೋಳಂಡ ಡಾಲಿ ಬೋಪಯ್ಯ, ನುಚ್ಚಿಮಣಿಯಂಡ ಗಣೇಶ, ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಅಂಜಪರವಂಡ ರೋಷನ್, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಕರವಂಡ ಅಪ್ಪಣ್ಣ, ನಾಲ್ನಾಡ ಹಾಕಿ ಕ್ಲಬ್ಬಿನ ಉಪಾಧ್ಯಕ್ಷ ಕೈಬಿಲಿರ ಉಮೇಶ್ ಉತ್ತಪ್ಪ, ಬೈರುಡ ಮಾಚಯ್ಯ, ಮಚ್ಚುರ ಯಧುಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net