ಕೊಡಗು ಗೌಡ ಕ್ರೀಡಾಕೂಟ ಕರಪತ್ರ ಬಿಡುಗಡೆ

  ವಿರಾಜಪೇಟೆ ಗೌಡ ಸಮಾಜದಲ್ಲಿ ಹಮ್ಮಿಕೊಂಡಿದ್ದ ಕೊಡಗು ಗೌಡ ಕ್ರೀಡಾಕೂಟದ ಕರಪತ್ರ ಬಿಡುಗಡೆ ಕಾರ್ಯಕ್ರಮವನ್ನು ಶಾಸಕ ಎ. ಎಸ್. ಪೊನ್ನಣ್ಣ ಉದ್ಘಾಟಿಸಿದರು. ತೀತಿರ ಧರ್ಮಜ ಉತ್ತಪ್ಪ , ಆನಂದ್ ಕರಂದ್ಲಾಜೆ, ಸದಾನಂದ , ಮುಕ್ಕಿಟಿ ವಾಸು ಗಣಪತಿ ಇದ್ದರು.
ವಿರಾಜಪೇಟೆ ಗೌಡ ಸಮಾಜದಲ್ಲಿ ಹಮ್ಮಿಕೊಂಡಿದ್ದ ಕೊಡಗು ಗೌಡ ಕ್ರೀಡಾಕೂಟದ ಕರಪತ್ರ ಬಿಡುಗಡೆ ಕಾರ್ಯಕ್ರಮವನ್ನು ಶಾಸಕ ಎ. ಎಸ್. ಪೊನ್ನಣ್ಣ ಉದ್ಘಾಟಿಸಿದರು. ತೀತಿರ ಧರ್ಮಜ ಉತ್ತಪ್ಪ , ಆನಂದ್ ಕರಂದ್ಲಾಜೆ, ಸದಾನಂದ , ಮುಕ್ಕಿಟಿ ವಾಸು ಗಣಪತಿ ಇದ್ದರು.
Published on
ವಿರಾಜಪೇಟೆ : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಏಪ್ರಿಲ್ 27ರಿಂದ ಮೇ 17ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕ್ರೀಡಾಕೂಟದ ಕರಪತ್ರವನ್ನು ಶಾಸಕ ಪೊನ್ನಣ್ಣ ಭಾನುವಾರ ಬಿಡುಗಡೆಗೊಳಿಸಿದರು.
ಕೊಡಗು ಗೌಡ ಸಮಾಜದ ಒಕ್ಕೂಟದ ವತಿಯಿಂದ ವಿರಾಜಪೇಟೆಯ ಚಿಕ್ಕಪೇಟೆಯಲ್ಲಿನ ಗೌಡ ಸಮಾಜದಲ್ಲಿ ಆಯೋಜಿಸಲಾಗಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಕೂಟಕ್ಕೆ ಈ ವರ್ಷ ಸರ್ಕಾರದಿಂದ ಅನುದಾನ ಕೊಡಿಸುವ ಭರವಸೆ ನೀಡಿದರು.
ಕ್ರೀಡಾಕೂಟದ ಆಕರ್ಷಣೆಯಾಗಿ ಕುಟುಂಬವಾರು ಕ್ರಿಕೆಟ್ ಪಂದ್ಯಾಟ, ಕುಟುಂಬವಾರು ರಿಂಕ್ ಹಾಕಿ ಪಂದ್ಯಾಟ, ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಕ್ರಾಸ್ ಕಂಟ್ರಿ, ಅಥ್ಲೆಟಿಕ್ ಕ್ರೀಡೆಯನ್ನು ಮತ್ತು ಸಾಂಸ್ಕೃತಿಕ ಪೈಪೋಟಿ ಮಿಸ್ಟರ್ ಗೌಡ, ಮಿಸ್ ಗೌಡತಿ ಯನ್ನು ಆಯೋಜಿಸಲಾಗುವುದು
ಅಭಿನಂದನೀಯ ಎಂದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ, ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ವಿರಾಜಪೇಟೆ ಗೌಡ ಸಮಾಜದ ಅಧ್ಯಕ್ಷ ಮುಕ್ಕಾಟಿ ವಾಸು ಗಣಪತಿ, ಪ್ರಮುಖರಾದ ಚಿದಾನಂದ, ಅಂಬೆಕಲ್ ನವೀನ್, ತೇನನ ರಾಜೇಶ್, ಯುವ ವೇದಿಕೆ ಅಧ್ಯಕ್ಷ ಬಾಲಾಡಿ ಮನೋಜ್, ಪೈಕೆರ ಮನೋಹರ್ ಮಾದಪ್ಪ, ಪುದಿಯನೆರವನ ರಿಷಿತ್ ಮಾದಯ್ಯ, ಪಟ್ಟಡ ದೀಪಕ್, ದೇರಳ ನವೀನ್, ಪೊಕ್ಕು ಳಂಡ್ರ ಮನೋಜ್, ಕಟ್ಟೆಮನೆ ಸೋನಜಿತ್, ಪರಿಚನ ಸೋನಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net