ಪೊನ್ನಂಪೇಟೆ ತಾಲೂಕಿನ ಚಿಕ್ಕಮುಂಡೂರು ಗ್ರಾಮದ ರೈತ ಶಶಿ ಅಯ್ಯಪ್ಪ, ಪಿತ್ರಾರ್ಜಿತ ಆಸ್ತಿಯಾಗಿ ಬಂದ ಮೂರುವರೆ ಎಕರೆ ಜಾಗದಲ್ಲಿ ಕಾಫಿ, ಕರಿಮೆಣಸು, ತೆಂಗು, ಅಡಕೆ, ಬಾಳೆ ಮುಂತಾದ ಮಿಶ್ರ ಬೆಳೆಗಳನ್ನು ಬೆಳೆದು ಯಶಸ್ವಿ ರೈತ ಎನಿಸಿಕೊಂಡಿದ್ದಾರೆ. ಕಾಫಿ ಕೃಷಿಯಲ್ಲೂ ಶಶಿ ಅಯ್ಯಪ್ಪ ಸೈ ಎನಿಸಿಕೊಂಡಿದ್ದಾರೆ. ಎಕರೆಗೆ ಸುಮಾರು 40 ರಿಂದ 45 ಚೀಲಗಳಷ್ಟು ಇಳುವರಿ ತೆಗೆಯುವ ಅವರು ಪೊನ್ನಂಪೇಟೆ ಭಾಗದಲ್ಲಿ ಒಬ್ಬ ಸಾಧಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.