ಸೋಮವಾರಪೇಟೆ ತಾಲೂಕಿನ ಸಿದ್ಧಲಿಂಗಪುರದ ಅರಿಶಿನಗುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥಸ್ವಾಮಿ ಹಾಗೂ ಛಯನ್ನು ಶೃದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಗ್ಗೆ ಗಣಪತಿ ಹೋಮದೊಂದಿಗೆ ಪೂಜೆಗಳು ಆರಂಭವಾಯಿತು. ಸಂಜೆ ಶ್ರೀ ಮಂಜುನಾಥಸ್ವಾಮಿ ದೇವಾಲಯದಲ್ಲಿ ರುದ್ರಾಭಿಷೇಕ, ಪುಷ್ಪಾಲಂಕಾರ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು. ಕ್ಷೇತ್ರದಲ್ಲಿರುವ ನವನಾಗನಾಥ ದೇವಾಲಯದಲ್ಲಿ ನಾಗದೇವರಿಗೆ ಜಲಾಭಿಷೇಕ, ಎಳನೀರುವ ಅಭಿಷೇಕ, ಹಾಲಿನ ಅಭಿಷೇಕ, ಅರಿಶಿಣ ಅಭಿಷೇಕ, ತಂಬಿಲ ಸೇವೆಗಳನ್ನು ಕ್ಷೇತ್ರದ ಪ್ರಧಾನ ಅರ್ಚಕ ಜಗದೀಶ ಉಡುಪ ಅವರು ನೆರವೇರಿಸಿದರು. ನಂತರ ನಾಗದೇವರಿಗೆ ಬೆಳ್ಳಿಯ ಬಿಂಬವನ್ನು ಸಮರ್ಪಿಸಲಾಯಿತು. ಮಹಾಮಂಗಳಾರತಿಯ ಬಳಿಕ ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಅರ್ಚಕರಾದ ವಾದಿರಾಜ್ ಭಟ್, ದೇವಾಲಯ ಸಮಿತಿ ಅಧ್ಯಕ್ಷ ಮೋಹನ್, ಮಣಿಸ್ವಾಮಿ ಇದ್ದರು.