ಸುಂಟಿಕೊಪ್ಪ: ಬಿಜೆಪಿ ಘಟಕದ ವತಿಯಿಂದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು. ಶ್ರೀ ರಾಮ ಮಂದಿರಲ್ಲಿ ವಿಶೇಷ ಪೂಜೆ ಹಾಗೂ ಸಿಹಿ ಹಂಚುವ ಮೂಲಕ ಅದ್ದೂರಿಯಾಗಿ ಆಚರಿಸಿದರು.
ಬಿಜೆಪಿ ಮುಖಂಡ ಪಿ.ಆರ್.ಸುನಿಲ್ ಕುಮಾರ್, ಬಿಜೆಪಿ ನಗರಾಧ್ಯಕ್ಷ ಧನುಕಾವೇರಪ್ಪ, ಮುಖಂಡರಾದ ವಾಸುದೇವ,ವಿಘ್ನೇಶ್, ಲೀಲಾಮೇದಪ್ಪ, ರಾಜ, ಈಶ್ವರ, ಸಂದೀಪ್ ಹಾಗೂ ಕಾರ್ಯಕರ್ತರು ಇದ್ದರು.