ವಿವಿಧ ಕಾರ್ಮಿಕ ಸಂಘದಿಂದ ಶಾಸಕರಿಗೆ ಮನವಿ ಸಲ್ಲಿಕೆ

ಸೋಮವಾರಪೇಟೆ ಶಾಸಕರ ಕಚೇರಿ ಎದುರು ಆಗಮಿಸಿದ ಕರ್ನಾಟಕದ ರೈತಸಂಘ ಹಾಗೂ ದಲಿತ, ಆದಿವಾಸಿ, ಕೃಷಿ, ಕಾರ್ಮಿಕ ಸಂಘದ ಸದಸ್ಯರು ವಿವಿಧ ಬೇಡಿಕೆಗಳನ್ನು ಈಡೇರಿಸುಂತೆ ಆಗ್ರಹಿಸಿ ಶಾಸಕ ಡಾ. ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಿದರು.
ಸೋಮವಾರಪೇಟೆ ಶಾಸಕರ ಕಚೇರಿ ಎದುರು ಆಗಮಿಸಿದ ಕರ್ನಾಟಕದ ರೈತಸಂಘ ಹಾಗೂ ದಲಿತ, ಆದಿವಾಸಿ, ಕೃಷಿ, ಕಾರ್ಮಿಕ ಸಂಘದ ಸದಸ್ಯರು ವಿವಿಧ ಬೇಡಿಕೆಗಳನ್ನು ಈಡೇರಿಸುಂತೆ ಆಗ್ರಹಿಸಿ ಶಾಸಕ ಡಾ. ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಿದರು.
Published on
ಸೋಮವಾರಪೇಟೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕದ ರೈತ ಸಂಘ ಹಾಗೂ ದಲಿತ, ಆದಿವಾಸಿ, ಕೃಷಿ, ಕಾರ್ಮಿಕ ಸಂಘದ ಪದಾಧಿಕಾರಿ ಶಾಸಕ ಡಾ.ಮಂತರ್‌ಗೌಡ ಅವರಿಗೆ ಮನವಿ ಸಲ್ಲಿಸಿದರು.
ಮೂಲ ದಾಖಲೆಗಳಾದ ಪಡಿತರ ಚೀಟಿ, ಆಧಾರ್ ಕಾರ್ಡ್, ಮನೆ ನಿವೇಶನ, ಭೂಮಿ ಹಕ್ಕು, ಕುಡಿಯುವ ನೀರು, ಸಾಲ ಸೌಲಭ್ಯಗಳನ್ನು ಕೊಡಿಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರೈತ ಸಂಘದ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ವಿವಿಧ ಗ್ರಾಮ ಮತ್ತು ಹಾಡಿಗಳಲ್ಲಿ ವಾಸ ಮಾಡುತ್ತಿರುವ ನಮಗೆ ಸರ್ಕಾರ ಹೊಸ ಪಡಿತರ ಚೀಟಿಯನ್ನು ಕಳೆದ 5 ವರ್ಷಗಳಿಂದ ನೀಡದ ಕಾರಣ ಹೆಚ್ಚಿನವರಿಗೆ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ. ಯಾವುದೇ ದಾಖಲಾತಿಗಳು ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆಗಳಿಂದಲೂ ವಂಚಿತರಾಗುತ್ತಿದ್ದೇವೆ.
ಅಧಿಕಾರಿಗಳಿಗೆ ಸರಳ ಮಾರ್ಗದಲ್ಲಿ ಮೂಲ ದಾಖಲೆಗಳನ್ನು ಕೊಡಿಸಿಕೊಡಬೇಕು. ಬ್ಯಾಡಗೊಟ್ಟದಲ್ಲಿ 354 ಕುಟುಂಬಗಳಿದ್ದು, ಈ ಸ್ಥಳಕ್ಕೆ ಮೂಲ ಸೌಕರ್ಯ ಒದಗಿಸಬೇಕು. 70 ಮನೆಗಳು ಇಂದಿಗೂ ಪಾಳು ಬಿದ್ದಿವೆ, ಬಸವನಳ್ಳಿ ಗ್ರಾಮದಲ್ಲೂ ಸಹ ಇದೇ ಪರಿಸ್ಥಿತಿ ಇದ್ದು, ಕೂಡಲೇ ಸೂಕ್ತ ವ್ಯವಸ್ಥೆ ಮಾಡಿಸಿಕೊಡಬೇಕೆಂದು ಮನವಿ ಮಾಡಿದರು.
ದಲಿತ ಆದಿವಾಸಿ ಸಂಘದ ಜಿಲ್ಲಾಧ್ಯಕ್ಷ ಮುತ್ತ, ವಳಗುಂದ ಕುಮಾರ, ವೈ.ಎಂ.ಸುರೇಶ ಸೇರಿದಂತೆ ಹಲವರು ಇದ್ದರು. ಮನವಿಯನ್ನು ಸ್ವೀಕರಿಸಿ ಶಾಸಕರು, ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net