ವಿದ್ಯಾರ್ಥಿಗಳನ್ನ ಉತ್ತಮ ವ್ಯಕ್ತಗಳನ್ನಾಗಿಸಿ

ಸೋಮವಾರಪೇಟೆ ಸಂತ ಜೋಸೆಫರರ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ಮೈಸೂರು ಡಯಾಸಿಸನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿಷಪ್ ಡಾ. ಫ್ರಾನ್ಸಿಸ್ ಸೆರವೊ ಎಸ್‌ಜೆ ಉದ್ಘಾಟಿಸಿದರು. ಟೋನಿ ವಿನ್ಸೆಂಟ್,  ಎಡ್ವರ್ಡ್ ವಿಲಿಯಂ ಸಾಲ್ಡಾನ, ನವೀನ್ ಕುಮಾರ್, ಪಿ.ಎಂ.ಪಾರ್ವತಿ, ಶೀಲಾ ಡಿಸೋಜ, ಇದ್ದರು.
ಸೋಮವಾರಪೇಟೆ ಸಂತ ಜೋಸೆಫರರ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ಮೈಸೂರು ಡಯಾಸಿಸನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿಷಪ್ ಡಾ. ಫ್ರಾನ್ಸಿಸ್ ಸೆರವೊ ಎಸ್‌ಜೆ ಉದ್ಘಾಟಿಸಿದರು. ಟೋನಿ ವಿನ್ಸೆಂಟ್, ಎಡ್ವರ್ಡ್ ವಿಲಿಯಂ ಸಾಲ್ಡಾನ, ನವೀನ್ ಕುಮಾರ್, ಪಿ.ಎಂ.ಪಾರ್ವತಿ, ಶೀಲಾ ಡಿಸೋಜ, ಇದ್ದರು.
Published on
ಸೋಮವಾರಪೇಟೆ: ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹ ನೀಡಿ, ಕಲಿಸಿ ಸಮಾಜದ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವುದು ಶಿಕ್ಷಣ ಸಂಸ್ಥೆಗಳ ಕರ್ತವ್ಯ ಎಂದು ಮೈಸೂರು ಡಯಾಸಿಸನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿಷಪ್ ಡಾ. ಫ್ರಾನ್ಸಿಸ್ ಸೆರವೊ ಎಸ್‌ಜೆ ಅಭಿಪ್ರಾಯಿಸಿದರು.
ಪಟ್ಟಣದ ಸಂತ ಜೋಸೆಫರ ವಿದ್ಯಾಸಂಸ್ಥೆ ವಾರ್ಷಿಕೋತ್ಸವ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳನ್ನು ಕೇವಲ ವೃತ್ತಪರರನ್ನಾಗಿ ರೂಪಿಸುವುದರಿಂದ ಸಮಾಜ ಸಂಪೂರ್ಣವಾಗುವುದಿಲ್ಲ. ಮಾನವೀಯತೆ, ಕರುಣೆ, ಸಹಾನುಭೂತಿ, ಪರಸ್ಪರ ಗೌರವ ಮತ್ತು ಸತ್ಯ ನಿಷ್ಠೆಗಳಿಲ್ಲದೆ ಶಿಕ್ಷಣ ಅಪೂರ್ಣ ಎಂದು ಅಭಿಪ್ರಾಯಿಸಿದರು.
ಮಕ್ಕಳಿಗೆ ಮನೆ ಮೊದಲ ಪಾಠಶಾಲೆ, ತಾಯಿ, ತಂದೆ ಮೊದಲ ಗುರುಗಳು. ತಾಯಿಯ ಮಡಿಲು ಮಗುವಿನ ಮೊದಲ ಬೆಂಚು, ಅಪ್ಪ, ಅಮ್ಮನ ಜೀವನ ಶೈಲಿ ಮಗುವಿನ ಮೊದಲ ಪುಸ್ತಕವಾಗಿದೆ. ಈ ಪುಸ್ತಕ ಗೊಂದಲದಲ್ಲಿದ್ದರೆ, ಮಗುವಿನ ಕಲಿಕೆ ದಾರಿ ತಪ್ಪುವ ಸಂಭವವೇ ಹೆಚ್ಚು. ಈ ಕಾರಣದಿಂದ ತಂದೆ, ತಾಯಿಗಳು ಮಕ್ಕಳಿಗೆ ಮಾದರಿಯಾಗಬೇಕು. ಮಕ್ಕಳ ಎದುರಿಗೆ ತಪ್ಪುಗಳನ್ನು ಮಾಡಬಾರದು. ಪಾಲಕರು ಜೀವನದಲ್ಲಿ ತೋರಿಸುವ ಮೌಲ್ಯಗಳೇ ಮಕ್ಕಳ ಬದುಕಿನ ದಿಕ್ಕನ್ನು ನಿರ್ಧರಿಸುತ್ತದೆ. ಮಕ್ಕಳಲ್ಲಿ ಗೊಂದಲ, ಅಸಹನೆ, ಅಥವಾ ಮೌಲ್ಯಗಳ ಕೊರತೆ ಉಂಟಾದರೆ, ಅದು ಅವರ ಭವಿಷ್ಯವಷ್ಟೇ ಅಲ್ಲ, ಸಮಾಜದ ಭವಿಷ್ಯವನ್ನು ಪ್ರಶ್ನಿಸುತ್ತದೆ. ಆದ್ದರಿಂದ ಪಾಲಕರು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಕೈಜೋಡಿಸಿ, ಮಕ್ಕಳಿಗೆ ಸುರಕ್ಷಿತ, ಮೌಲ್ಯಧಾರಿತ ಮತ್ತು ಪ್ರೇರಣಾದಯಕ ವಾತಾವರಣವನ್ನು ಒದಗಿಸಬೇಕು ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಅರಟ್ ಆ್ಯಡ್ ಆಯತಾನ ಅಧ್ಯಕ್ಷ ಟೋನಿ ವಿನ್ಸೆಂಟ್, ಡಯಾಸಿಸನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಡ್ವರ್ಡ್ ವಿಲಿಯಂ ಸಾಲ್ಡಾನ, ಖಜಾಂಚಿ ನವೀನ್ ಕುಮಾರ್, ಧರ್ಮಗುರುಗಳಾದ ಜಾನ್ ಡಿಕುನ್ಹಾ, ಗಿಲ್ಬರ್ಟ್ ಡಿಸಿಲ್ವಾ, ವಿಜಯಕುಮಾರ್, ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಎಂ.ಪಾರ್ವತಿ, ಓಎಲ್‌ವಿ ಚರ್ಚ್ ಕಾರ್ಯದರ್ಶಿ ಶೀಲಾ ಡಿಸೋಜ, ಕಾಲೇಜಿನ ಸಂತ ಜೋಸೆಫರ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ಅವಿನಾಶ್, ಹಳೇ ವಿದ್ಯಾರ್ಥಿನಿ ಮೆಟಿಲ್ಡಾ ಡಿಸೋಜ ಇದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವರ್ಣರಂಜಿತ ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net