ಸಣ್ಣ ರೈತರ ನೀರಾವರಿ ಅನುಕೂಲಕ್ಕೆ ಉಚಿತ ಕೊಳವೆ ಬಾವಿ

ಸೋಮವಾರಪೇಟೆ ಶಾಸಕರ ಕಚೇರಿ ಎದುರು ನಡೆದ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕೃಷಿಕರಿಗೆ ಕೊಳವೆಬಾವಿ ನಿರ್ಮಾಣಕ್ಕೆ ಆದೇಶ ಪತ್ರಗಳನ್ನು ಶಾಸಕ ಡಾ.ಮಂತರ್ ಗೌಡ ಸೋಮವಾರ ವಿತರಿಸಿದರು. ಕಾಂತರಾಜು, ಸತೀಶ್, ಜನಾರ್ದನ್, ಸುರೇಶ್ ಇದ್ದರು.
ಸೋಮವಾರಪೇಟೆ ಶಾಸಕರ ಕಚೇರಿ ಎದುರು ನಡೆದ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕೃಷಿಕರಿಗೆ ಕೊಳವೆಬಾವಿ ನಿರ್ಮಾಣಕ್ಕೆ ಆದೇಶ ಪತ್ರಗಳನ್ನು ಶಾಸಕ ಡಾ.ಮಂತರ್ ಗೌಡ ಸೋಮವಾರ ವಿತರಿಸಿದರು. ಕಾಂತರಾಜು, ಸತೀಶ್, ಜನಾರ್ದನ್, ಸುರೇಶ್ ಇದ್ದರು.
Published on
ಸೋಮವಾರಪೇಟೆ: ಸಣ್ಣ ರೈತರಿಗೆ ನೀರಾವರಿ ಅನುಕೂಲ ಕಲ್ಪಿಸಲು ಎಸ್‌ಟಿ, ಎಸ್‌ಸಿ ಕುಟುಂಬಗಳಿಗೆ ಉಚಿತವಾಗಿ ಕೊಳವೆ ಬಾವಿಗಳನ್ನು ಕೊರೆಯಿಸಿಕೊಡಲಾಗುತ್ತಿದೆ ಎಂದು ಶಾಸಕ ಡಾ.ಮಂತರ್‌ಗೌಡ ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕೃಷಿಕರಿಗೆ 5ಲಕ್ಷ ರೂ.ವೆಚ್ಚದ ಉಚಿತ ಕೊಳವೆಬಾವಿ ನಿರ್ಮಾಣಕ್ಕೆ ಆದೇಶ ಪತ್ರಗಳನ್ನು ಶಾಸಕ ಡಾ.ಮಂತರ್ ಗೌಡ ಸೋಮವಾರ ತಮ್ಮ ಕಚೇರಿ ಎದುರು ವಿತರಿಸಿದರು.
ಕಳೆದ 5 ವರ್ಷಗಳಿಂದ ಈ ಯೋಜನೆ ಕೊಡಗು ಜಿಲ್ಲೆಗೆ ಬಂದಿರಲಿಲ್ಲ. ನಮ್ಮ ಜಿಲ್ಲೆಯ ಸಣ್ಣ ನೀರಾವರಿ ಸಚಿವರು ಹಾಗೂ ಕೊಡಗು ಉಸ್ತುವಾರಿ ಸಚಿವರಾದ ಬೋಸ್‌ರಾಜ್ ಅವರ ವಿಶೇಷ ಆಸಕ್ತಿಯಿಂದ ನೀಡಿದ್ದಾರೆ. ಈ ಭಾರಿ ಕ್ಷೇತ್ರದ 50 ಕೃಷಿಕರಿಗೆ ಮಾತ್ರ ಯೋಜನೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ 50 ಕೃಷಿಕರಿಗೆ ಕೊಳವೆಬಾವಿ ಯೋಜನೆ ನೀಡಲಾಗುವುದು. ಇದರಲ್ಲಿ ಕನಿಷ್ಟ ಅರ್ಧ ಏಕರೆ ಕೃಷಿ ಭೂಮಿಯನ್ನು ರೈತರು ಹೊಂದಿರಬೇಕು. ಬೇರಾವುದೇ ಯೋಜನೆಯಲ್ಲಿ ಕೊಳವೆಬಾವಿ ಪಡೆದಿರಬಾರದು ಎಂದರು.
ರೈತರು ಕೊಳವೆಬಾವಿ ತೆಗೆಸಲು ಅಧಿಕಾರಿಗಳಿಗೆ ಹಣ ನೀಡುವುದು ಬೇಡ. ಮುಂದಿನ ಒಂದು ತಿಂಗಳಿನ ಒಳಗೆ ಎಲ್ಲ ಕೊಳವೆಬಾವಿಗಳನ್ನು ಕೊರೆಸಿ, ಮೋಟಾರ್ ಅಳವಡಿಸಿ, ವಿದ್ಯುತ್ ಸಂಪರ್ಕ ನೀಡುವ ಕೆಲಸವನ್ನು ಇಲಾಖಾಧಿಕಾರಿ ಕುಮಾರಸ್ವಾಮಿ ಮಾಡಿಸಬೇಕು. ಪ್ರತಿ ಬಾವಿಯನ್ನು 400 ಅಡಿಯವರೆಗೆ ಕೊರೆಸಲು ಅವಕಾಶ ಇದ್ದು, ಚೆನ್ನಾಗಿ ನೀರು ಸಿಗುವ ತನಕ ಕೊರೆಸಲು ರೈತರು ಮುಂದಾಗಬೇಕು. ಫಲಾನುಭವಿಗಳು ಯೋಜಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ವೇದಿಕೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಬಿ.ಬಿ.ಸತೀಶ್, ಜೆ.ಇ.ಜನಾರ್ದನ, ಜಿಲ್ಲಾ ಕೆಡಿಪಿ ಸಮಿತಿ ಸದಸ್ಯ ಎಚ್.ಆರ್. ಸುರೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net