ಆಹಾರ ನಿರೀಕ್ಷಕಿ ಯಶಸ್ವಿನಿ ಮಾತನಾಡಿ, ತಾಲೂಕಿನಲ್ಲಿ 1032 ಅನರ್ಹ ಬಿಪಿಎಲ್ ಕಾರ್ಡ್‌ಗಳಿದ್ದು, ನಾಲ್ಕು ಚಕ್ರದ ವಾಹನ ಹೊಂದಿರುವವರು, ಜಿಎಸ್‌ಟಿ ಮತ್ತು ಐಟಿ ಪಾವತಿದಾರರು, 1,20, 000 ಕ್ಕೂ ಅಧಿಕ ಹಣದ ಬ್ಯಾಂಕ್ ವ್ಯವಹಾರ ನಡೆಸುವವರ ಕಾರ್ಡ್ ರದ್ದಾಗಿದೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಕಾರ್ಡ್ ನೀಡಿ, ಅನರ್ಹರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಪಡಿತರ ಚೀಟಿಯ ಬಗ್ಗೆ ಖುದ್ದು ಪರಿಶೀಲಿಸಿ ವರದಿ ನೀಡಬೇಕು ಎಂದು ಇಲಾಖೆಯ ಮುಖ್ಯ ಕಾರ್ಯದರ್ಶಿ ಸೂಚನೆ ಇದೆ ಎಂದು ಸಭೆಗೆ ತಿಳಿಸಿದರು.