ಸಮಾಜ ಸೇವಕಿ ಬಾಳೇಯಡ ದಿವ್ಯಾ ಮಂದಪ್ಪಗೆ ಸನ್ಮಾನ

ಪುನಶ್ಚೇತನ ಚಾರಿಟೆಬಲ್ ಟ್ರಸ್ಟ್ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಳೇಯಡ ದಿವ್ಯಾ ಮಂದಪ್ಪ ಅವರನ್ನು ಸನ್ಮಾನಿಸಲಾಯಿತು.
ಪುನಶ್ಚೇತನ ಚಾರಿಟೆಬಲ್ ಟ್ರಸ್ಟ್ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಳೇಯಡ ದಿವ್ಯಾ ಮಂದಪ್ಪ ಅವರನ್ನು ಸನ್ಮಾನಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ವಿರಾಜಪೇಟೆಯ ಪೊಂಬೊಳ್ಚ ಕೂಟ
  • ಐದು ವರ್ಷ ಪೂರೈಸಿದ ಸವಿನೆನಪಿಗಾಗಿ
ನಾಪೋಕ್ಲು: ವಿರಾಜಪೇಟೆಯ ಪೊಂಬೊಳ್ಚ ಕೂಟ ಐದು ವರ್ಷ ಪೂರೈಸಿದ ಸವಿನೆನಪಿಗಾಗಿ ಇಲ್ಲಿನ ಪುನಶ್ಚೇತನ ಚಾರಿಟೆಬಲ್ ಟ್ರಸ್ಟ್‌ನ ಮುಖ್ಯಸ್ಥೆಯೂ ಆದ ಸಮಾಜ ಸೇವಕಿ ಬಾಳೇಯಡ ದಿವ್ಯಾ ಮಂದಪ್ಪ ಅವರನ್ನು ಕೂಟದ ವತಿಯಿಂದ ಟ್ರಸ್ಟ್ ಆವರಣದಲ್ಲಿ ಸನ್ಮಾನಿಸಲಾಯಿತು.
ಕೂಟದ ಅಧ್ಯಕ್ಷ ಚಂಗೇಟಿರ ಸೋಮಣ್ಣ ಮಾತನಾಡಿದರು. ಸ್ಥಾಪಕರಾದ ಕೋಟೇರ ಪೂಣಚ್ಚ, ಕಾರ್ಯದರ್ಶಿ ಜಮ್ಮಡ ಮೋನ ಭೀಮಯ್ಯ, ಆಡಳಿತ ಮಂಡಳಿ ಸದಸ್ಯರಾದ ಕಳ್ಳಿಚಂಡ ದೀನ ಉತ್ತಪ್ಪ, ಕಾಣತಂಡ ವಿವೇಕ್ ಅಯ್ಯಪ್ಪ, ಕೂಟದ ಸದಸ್ಯರಾದ ಕ್ಯಾಪ್ಟನ್ ಬಿದ್ದಂಡ ನಾಣಿ ದೇವಯ್ಯ ಮಾತನಾಡಿ, ದಿವ್ಯಾ ಅವರ ಸಮಾಜ ಸೇವೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಸನ್ಮಾನ ಸ್ವೀಕರಿಸಿದ ಟ್ರಸ್ಟ್‌ನ ಮುಖ್ಯಸ್ಥೆ ದಿವ್ಯ ಮಂದಪ್ಪ ಅವರು ಅನುಭವ ಹಂಚಿಕೊಂಡು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಪೊಂಬೊಳ್ಚ ಕೂಟದ ಸಹಕಾರ್ಯದರ್ಶಿ ಅಜ್ಜಿಕುಟ್ಟೀರ ಭವ್ಯ ಬೋಪಣ್ಣ, ಖಜಾಂಚಿ ಶಿವಚಾಳಿಯಂಡ ರೋಹಿಣಿ ಬೋಪಣ್ಣ, ಮೊಣ್ಣಂಡ ವಿನು ಕಾರ್ಯಪ್ಪ,ಅಪ್ಪನೆರವಂಡ ವಿನು ಮಾದಪ್ಪ, ಕುಂಡ್ಯೋಳಂಡ ಬೋಪಣ್ಣ, ಸದಸ್ಯರಾದ ಗಿರೀಶ್, ಶಿವಚಾಳಿಯಂಡ ಬೋಪಣ್ಣ, ಪುನಶ್ಚೇತನ ಚಾರಿಟೇಬಲ್ ಟ್ರಸ್ಟ್‌ನ ಶಿಕ್ಷಕಿ ಅಸ್ಮಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net