ಇದಲ್ಲದೆ ಸುಳಿಮಳ್ತೆ ಹೊನವಳ್ಳಿ ಭಾಗದಲ್ಲಿರುವ ಎಸ್ಸಿ, ಎಸ್ಟಿ ಹಾಗೂ ಕೂಲಿ ಕಾರ್ಮಿಕರ ಕಾಲನಿಗೂ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲ. ಸುಮಾರು 10 ಕುಟುಂಬಗಳು ವಾಸಿಸುತ್ತಿರುವ ಈ ಕಾಲನಿಯಲ್ಲಿನ ಕೆಲವು ಮನೆಗಳು ಜೀರ್ಣಾವಸ್ಥೆಗೆ ತಲುಪಿವೆ. ಮಳೆಗಾಲದಲ್ಲಿ ಟಾರ್ಪಲ್ ಕಟ್ಟಿಕೊಂಡು ಬದುಕು ಸಾಗಿಸುವ ದುಸ್ಥಿತಿ ಎದುರಿಸುತ್ತಿದ್ದಾರೆ. ಬಹುತೇಕ ಮನೆಗಳಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಕಂದಾಯ ಇಲಾಖೆಗೆ ಹಲವಾರು ಬಾರಿ ಅರ್ಜಿ ಸಲ್ಲಿಸಿದರೂ ದಾಖಲೆಗಳನ್ನು ತರಲು ಹೇಳಿ ಕಾಲಹರಣ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಾದ ಅನುದಾನ ಎಲ್ಲಿ ವಿನಿಯೋಗವಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಬಡವರಿಗೆ ಮಾನವೀಯ ದೃಷ್ಟಿಯಿಂದ ಸಹಾಯ ಮಾಡುವವರು ಯಾರೂ ಇಲ್ಲ ಎಂಬುದು ಕಾಲನಿ ನಿವಾಸಿಗಳ ನೋವಾಗಿದೆ.