ಸನ್ಮಾನ: ಗ್ರಾಮೀಣ ಭಾಗದ ಮಕ್ಕಳಿಗೆ ಬಸ್ ವ್ಯವಸ್ಥೆ ಮಾಡಲು ಸಹಕಾರ ನೀಡಿದ ಮತ್ತು ಉಚಿತವಾಗಿ ನೋಟ್‌ಬುಕ್ ವಿತರಿಸಿದ ಹರಪಳ್ಳಿ ರವೀಂದ್ರ ಅವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗಿರೀಶ್ ಕಾರ್ಯಪ್ಪ, ನಿರ್ದೇಶಕರಾದ ಗುಡ್ಡಳ್ಳಿ ಮಧು, ರಾಜೇಶ್, ಕುಡಿಗಾಣ ಸುಧಿನ್, ತಲ್ತರೆಶೆಟ್ಟಳ್ಳಿ ಸುಖಾಂತ್ ಬಸವರಾಜು, ಕಾವೇರಮ್ಮ, ಗಂಧರ್ವ, ಬೆಟ್ಟದಳ್ಳಿ ಆದರ್ಶ, ಮುಖ್ಯಶಿಕ್ಷಕಿ ಲೀಲಾವತಿ, ಸಹ ಶಿಕ್ಷಕರಾದ ಭವ್ಯಾ, ಶ್ವೇತಾ, ಸುಜಾತಾ ಇದ್ದರು.