ನಕಲಿ ಮತದಾನ ತಡೆಗೆ ಎಸ್‌ಐಆರ್ ಪ್ರಕ್ರಿಯೆ

 ಭಾಗಮಂಡಲದ ಶ್ರೀಕಾವೇರಿ ಪದವಿ ಪೂರ್ವ ಕಾಲೇಜು ವತಿಯಿಂದ ಎಸ್‌ಐಆರ್ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಿ. ದಾಮೋದರ ನಾಯ್ಕ, ಕೀರ್ತಿ ಎಚ್. ಗೌಡ, ಟಿ. ಹೆಮಂತ್ ಕುಮಾರ್, ಕೆ.ಆರ್. ಪೂಣಚ್ಚ, ಎ.ಗಿರಿಧರ ಗೌಡ, ಬಿ.ಕೆ. ನರಸಿಂಹ, ಕೆ.ಬಿ. ಕಿಶೋರ್ ಇದ್ದರು.
ಭಾಗಮಂಡಲದ ಶ್ರೀಕಾವೇರಿ ಪದವಿ ಪೂರ್ವ ಕಾಲೇಜು ವತಿಯಿಂದ ಎಸ್‌ಐಆರ್ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಿ. ದಾಮೋದರ ನಾಯ್ಕ, ಕೀರ್ತಿ ಎಚ್. ಗೌಡ, ಟಿ. ಹೆಮಂತ್ ಕುಮಾರ್, ಕೆ.ಆರ್. ಪೂಣಚ್ಚ, ಎ.ಗಿರಿಧರ ಗೌಡ, ಬಿ.ಕೆ. ನರಸಿಂಹ, ಕೆ.ಬಿ. ಕಿಶೋರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • SIR process
ಮಡಿಕೇರಿ: ಭಾಗಮಂಡಲದ ಶ್ರೀಕಾವೇರಿ ಪದವಿ ಪೂರ್ವ ಕಾಲೇಜಿನ ಮತದಾನ ಮಾಹಿತಿ ಕ್ಲಬ್ (ಇಎಲ್‌ಸಿ) ಮತ್ತು ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ (ಎಸ್‌ವಿಇಇಪಿ) ವತಿಯಿಂದ ಮತಾದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಬಗ್ಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಶಾಸ ಉಪನ್ಯಾಸಕ ಪಿ. ದಾಮೋದರ ನಾಯ್ಕ ವಿದ್ಯಾರ್ಥಿಗಳಿಗೆ ಮತಾಧಿಕಾರದ ಮೌಲ್ಯದ ಬಗ್ಗೆ ವಿವರಿಸಿದರು. ಮತಾಧಿಕಾರದ ದುರ್ಬಳಕೆ, ನಕಲಿ ಮತದಾರರನ್ನು ಮತಾದಾರರ ಪಟ್ಟಿಯಿಂದ ತೆಗೆದು ಅರ್ಹ ಮತಾದಾರರಿಗೆ ಮತಾಧಿಕಾರವನ್ನು ನೀಡುವ ಸಲುವಾಗಿ ಎಸ್‌ಐಆರ್ ಪ್ರಕ್ರಿಯೆ ಜರುಗುತ್ತಿದೆ. ಈ ಬಗ್ಗೆ ನಿಮ್ಮ ಮನೆಯಲ್ಲಿ ಹಾಗೂ ಅಕ್ಕ ಪಕ್ಕದ ಮನೆಗಳಿಗೆ ಮಾಹಿತಿ ನೀಡಬೇಕು ಎಂದರು. ನಂತರ ವಿದ್ಯಾರ್ಥಿಗಳೊಂದಿಗೆ ಜಾಥಾ ನಡೆಸಿ ತಾವೂರು ಗ್ರಾಮದ ಮನೆಗಳಿಗೆ ಭೇಟಿ ನೀಡಿ ಎಸ್‌ಐಆರ್ ಬಗ್ಗೆ ಮಾಹಿತಿ ನೀಡಲಾಯಿತು.
ಕಾಲೇಜಿನ ಆಡಳಿತ ಮೇಲ್ವಿಚಾರಕ ಕೀರ್ತಿ ಎಚ್. ಗೌಡ, ಪ್ರಾಚಾರ್ಯ ಟಿ. ಹೆಮಂತ್ ಕುಮಾರ್, ಉಪನ್ಯಾಸಕರಾದ ಕೆ.ಆರ್. ಪೂಣಚ್ಚ, ಎ. ಗಿರಿಧರಗೌಡ, ಬಿ.ಕೆ. ನರಸಿಂಹ, ಕೆ.ಬಿ. ಕಿಶೋರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net