ಎಸ್‌ಐಆರ್ ಡಿಜಿಟಲೀಕರಣ ಶೇ.86 ರಷ್ಟು ಪೂರ್ಣ

ಎಸ್‌ಐಆರ್ ಪ್ರಕ್ರಿಯೆ ಸಂಬAಧ ಶಾಶ್ವತವಾಗಿ ಸ್ಥಳಾಂತರ, ಎರಡು ಕಡೆ ಹೆಸರು ಹೊಂದಿರುವ ಹಾಗೂ ಇತರೆ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸದೇ(ಎಎಸ್‌ಡಿಡಿಒ) ಇರುವ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರಮುಖರಿಗೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಹಸ್ತಾಂತರಿಸಿದರು. ತೆನ್ನೀರಾ ಮೈನಾ, ಸಜಿಲ್ ಕೃಷ್ಣ, ಗುಲಾಬಿ ಜನಾರ್ದನ, ಡಾ. ಸಹನಾ ಎಸ್.ಹಾದಿಮನಿ ಮತ್ತಿತರರು ಇದ್ದರು.
ಎಸ್‌ಐಆರ್ ಪ್ರಕ್ರಿಯೆ ಸಂಬAಧ ಶಾಶ್ವತವಾಗಿ ಸ್ಥಳಾಂತರ, ಎರಡು ಕಡೆ ಹೆಸರು ಹೊಂದಿರುವ ಹಾಗೂ ಇತರೆ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸದೇ(ಎಎಸ್‌ಡಿಡಿಒ) ಇರುವ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರಮುಖರಿಗೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಹಸ್ತಾಂತರಿಸಿದರು. ತೆನ್ನೀರಾ ಮೈನಾ, ಸಜಿಲ್ ಕೃಷ್ಣ, ಗುಲಾಬಿ ಜನಾರ್ದನ, ಡಾ. ಸಹನಾ ಎಸ್.ಹಾದಿಮನಿ ಮತ್ತಿತರರು ಇದ್ದರು.
Published on
ಮಡಿಕೇರಿ:
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ(ಎಸ್‌ಐಆರ್) ಡಿಜಿಟಲೀಕರಣ ಜಿಲ್ಲೆಯಲ್ಲಿ ಶೇ.86 ರಷ್ಟು ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಸಂಬAಧ ಶಾಶ್ವತವಾಗಿ ಸ್ಥಳಾಂತರ, ಎರಡು ಕಡೆ ಹೆಸರು ಹೊಂದಿರುವ ಹಾಗೂ ಇತರೆ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸದೇ(ಎಎಸ್‌ಡಿಡಿಒ) ಇರುವ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರಮುಖರಿಗೆ ಹಸ್ತಾಂತರಿಸಿ ಗುರುವಾರ ಮಾತನಾಡಿದರು.
ಜಿಲ್ಲೆಯಲ್ಲಿ 4,68,657 ಮತದಾರರಲ್ಲಿ 4,68,657 ಮತದಾರರಿಗೂ ಎಸ್‌ಐಆರ್ ನಮೂನೆ ವಿತರಿಸಿ, 4,03,576 ಡಿಜಿಟಲೀಕರಣ ಮಾಡಿ ಶೇ.86 ಕ್ಕೂ ಹೆಚ್ಚು ಪ್ರಗತಿ ಸಾಧಿಸಲಾಗಿದ್ದು, ಈ ಬಗ್ಗೆ ವಿವಿಧ ರಾಜಕೀಯ ಪಕ್ಷಗಳು ತಮ್ಮ ಹಂತದಲ್ಲಿ ಪರಿಶೀಲಿಸಬಹುದಾಗಿದೆ. ಜಿಲ್ಲೆಯಲ್ಲಿ ಮರಣ, ಸ್ಥಳಾಂತರ, ಗೈರು ಅಥವಾ ಎರಡು ಕಡೆ ಹೆಸರು ಹೊಂದಿರುವ, ಇತರೆ ಕಾರಣದಿಂದ ಗಣತಿ ನಮೂನೆ ಸಲ್ಲಿಸದೇ ಇರುವ 65,018 ಮತದಾರರಿದ್ದು, ಈ ಬಗ್ಗೆಯೂ ಸಹ ಗಮನಹರಿಸಬೇಕು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ವ್ಯತ್ಯಾಸಗಳಿದ್ದಲ್ಲಿ ಮಾಹಿತಿ ನೀಡುವಂತಾಗಬೇಕು. ಯಾರ ಹೆಸರು ಸಹ ಎಸ್‌ಐಆರ್ ಪ್ರಕ್ರಿಯೆಯಿಂದ ಹೊರಗುಳಿಯಬಾರದು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಹೆಚ್ಚಿನದ್ದಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಪ್ರಮುಖರಾದ ತೆನ್ನಿರಾ ಮೈನಾ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳು ಸಂಪೂರ್ಣವಾಗಿ ತೊಡಗಿಸಿಕೊಂಡಿವೆ.
ಹಾಡಿಯ ಜನರಲ್ಲಿ ಈ ಬಗ್ಗೆ ಇನ್ನಷ್ಟು ಎಚ್ಚರವಹಿಸಿ ಎಸ್‌ಐಆರ್ ಪ್ರಕ್ರಿಯೆಯ ಪ್ರಗತಿ ಸಾಧನೆಗೆ ಶ್ರಮಿಸಬೇಕಿದೆ. ಬಿಎಲ್‌ಒಗಳು ಸ್ಥಳೀಯರ ವಿಶ್ವಾಸಗಳಿಸಿ ಎಸ್‌ಐಆರ್ ಶೇಕಡಾವಾರು ಪ್ರಗತಿಗೆ ಶ್ರಮಿಸಬೇಕು.
ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಬಿಎಲ್‌ಒಗಳು ಯಾರೂ ಎಂಬುದೇ ಅಷ್ಟಾಗಿ ತಿಳಿದಿರುವುದಿಲ್ಲ. ಆದ್ದರಿಂದ ನೋಡಲ್ ಅಧಿಕಾರಿಗಳು, ಬಿಎಲ್‌ಒಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ಎಸ್‌ಐಆರ್ ಪ್ರಕ್ರಿಯೆ ಪ್ರಗತಿಗೆ ಮುಂದಾಗಬೇಕು ಎಂದು ಸಲಹೆ ಮಾಡಿದರು.
ಭಾರತೀಯ ಜನತಾ ಪಕ್ಷದ ಪ್ರಮುಖರಾದ ಸಜಿಲ್ ಕೃಷ್ಣ ಮಾತನಾಡಿ ಎಸ್‌ಐಆರ್ ಪ್ರಕ್ರಿಯೆ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಪಕ್ಷ ಅಗತ್ಯ ಜಾಗೃತಿ ಮೂಡಿಸಿದೆ ಎಂದರು.
ಬಹುಜನ ಸಮಾಜ ಪಕ್ಷದ ಅಧ್ಯಕ್ಷ ದಿವಿಲ್ ಕುಮಾರ್ ಮಾತನಾಡಿ, ಹಾಡಿಯ ಜನರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗದಂತೆ ಹೆಚ್ಚಿನ ನಿಗಾವಹಿಸಬೇಕು. ಐಟಿಡಿಪಿ ಇಲಾಖೆ ಈ ಬಗ್ಗೆ ಇನ್ನಷ್ಟು ಪ್ರತೀ ಹಾಡಿಯಲ್ಲೂ ಸಹ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.
ಜಾತ್ಯತೀತ ಜನತಾ ದಳದ ಗುಲಾಬಿ ಜನಾರ್ದನ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಕಾರ್ಯದರ್ಶಿ ಎಚ್.ಪಿ. ರಮೇಶ್ ಎಸ್‌ಐಆರ್ ಪ್ರಕ್ರಿಯೆ ಸಂಬAಧ ಹಲವು ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಹನಾ ಎಸ್.ಹಾದಿಮನಿ ಎಸ್‌ಐಆರ್ ಪ್ರಕ್ರಿಯೆ ಪ್ರಗತಿ ಬಗ್ಗೆ ಮಾಹಿತಿ ನೀಡಿದರು. ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಚುನಾವಣಾ ಶಿರಸ್ತೆದಾರ್ ಮಹೇಶ್, ಅನಿಲ್ ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net