ರಾಜ್ಯದ ಪ್ರತಿಷ್ಠಿತ ಕಾಲೇಜುಗಳ 12 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ ಗೋಣಿಕೊಪ್ಪಲು ಕಾವೇರಿ ಕಾಲೇಜು ತಂಡ ಫೈನಲ್ ಪ್ರವೇಶಿಸಿತು. ಬಹುತೇಕ ರಾಷ್ಟ್ರಮಟ್ಟದ ಆಟಗಾರರನ್ನು ಒಳಗೊಂಡಿದ್ದ ಅತಿಥೇಯ ಬೆಂಗಳೂರು ಸೇಂಟ್ ಜೋಸೆಫ್ ಕಾಲೇಜು ತಂಡದ ವಿರುದ್ಧ 8-5 ಗೋಲುಗಳಿಂದ ಸೋಲನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.