ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ತರ್ಬಿಯತ್ತುಲ್ ಇಸ್ಲಾಂ ಮದರಸದಲ್ಲಿ ಗುಹ್ಯ ಯೂತ್ ಹೆಲ್ತ್ ಕೇರ್ ನೇತೃತ್ವದಲ್ಲಿ ಸರ್ವಧರ್ಮೀಯರ ಸೌಹಾರ್ದ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು.
Published on:
Copied
Follow Us
ಸಿದ್ದಾಪುರ: ಗುಹ್ಯ ಗ್ರಾಮದ ತರ್ಬಿಯತ್ತುಲ್ ಇಸ್ಲಾಂ ಮದರಸದಲ್ಲಿ ಗುಹ್ಯ ಯೂತ್ ಹೆಲ್ತ್ ಕೇರ್ ನೇತೃತ್ವದಲ್ಲಿ ಸರ್ವಧರ್ಮೀಯರ ಸೌಹಾರ್ದ ಇಫ್ತಾರ್ ಕೂಟ ಭಾನುವಾರ ಸಂಜೆ ನಡೆಯಿತು.
ಪವಿತ್ರ ರಂಜಾನ್ ತಿಂಗಳ ಉಪವಾಸದ ಅಂತ್ಯವನ್ನು ಮುಸ್ಲಿಂ ಸಮುದಾಯದವರು ಗ್ರಾಮದ ಹಿಂದು ಸಹೋದರರೊಂದಿಗೆ ಸೇರಿ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡು ಆಚರಿಸಿದರು. ಈ ಸಂದರ್ಭದಲ್ಲಿ ಮಸೀದಿ ಖತೀಬ್ ಹನೀಫ್ ರಹ್ಮಾನಿ ಅವರು ಗ್ರಾಮದ ಐಕ್ಯತೆ ಮತ್ತು ಸೌಹಾರ್ದತೆಗಾಗಿ ವಿಶೇಷ ದುವಾ ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಯೂತ್ ಹೆಲ್ತ್ ಕೇರ್ ಅಧ್ಯಕ್ಷ ರಶೀದ್, ಉಪಾಧ್ಯಕ್ಷ ಅಬ್ದುಲ್ ಖಾದರ್, ಕಾರ್ಯದರ್ಶಿ ಹಂಸ ಮೌಲ್ವಿ, ಗ್ರಾಮದ ಪ್ರಮುಖರಾದ ಪಿ.ಕೆ.ಚಂದ್ರನ್, ರೆಜಿತ್‌ಕುಮಾರ್, ವಿ.ಕೆ.ಬಷೀರ್, ಎ.ಎಸ್.ಹಸ್ಸನ್ ಹಾಗೂ ಕಾರ್ಗಿಲ್ ಯುವಕ ಸಂಘದ ಪ್ರಮುಖರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.