ಅಮೆರಿಕ, ಸಿಂಗಾಪುರ್, ಕೇರಳ, ತಮಿಳುನಾಡು, ದೆಹಲಿ, ಮುಂಬೈ ಹಾಗೂ ರಾಜ್ಯದ ವಿವಿಧ ಜಿಲ್ಲೆಯಿಂದ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. 42 ಕಿ.ಮೀ. ಬರಿಗಾಲು ಮ್ಯಾರಥಾನ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಗಣಪತಿ ಯಲ್ಲಪ ಚಾಂಪಿಯನ್ ಪಟ್ಟ ಗಳಿಸಿ ನಗದು ಹಾಗೂ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು, ದ್ವಿತೀಯ ಬಹುಮಾನವನ್ನು ರಂಗಣ್ಣ ನೈಕರ ಪಡೆದರು.