ಕುಶಾಲನಗರದಲ್ಲಿ ಶಿವಧಾರೆ ಉತ್ಸವ

ಶಿವಧಾರೆ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಏರ್ಪಡಿಸಿದ್ದ ಶಿವಧಾರೆ ಉತ್ಸವದಲ್ಲಿ ನೃತ್ಯ ಸಂಯೋಜಕ ಮಾಸ್ಟರ್ ಚೇತನ್ ರವಿ ಅವರನ್ನು ಸನ್ಮಾನಿಸಲಾಯಿತು. ನೃತ್ಯ ಶಾಲೆಯ ವಿದ್ಯಾರ್ಥಿಗಳು ಇದ್ದರು.
ಶಿವಧಾರೆ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಏರ್ಪಡಿಸಿದ್ದ ಶಿವಧಾರೆ ಉತ್ಸವದಲ್ಲಿ ನೃತ್ಯ ಸಂಯೋಜಕ ಮಾಸ್ಟರ್ ಚೇತನ್ ರವಿ ಅವರನ್ನು ಸನ್ಮಾನಿಸಲಾಯಿತು. ನೃತ್ಯ ಶಾಲೆಯ ವಿದ್ಯಾರ್ಥಿಗಳು ಇದ್ದರು.
Published on
ಕುಶಾಲನಗರ:
ಇಲ್ಲಿನ ಶಿವಧಾರೆ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಶಿವಧಾರೆ ಉತ್ಸವ ಎಂಬ ವಿನೂತನ ಕಾರ್ಯಕ್ರಮ ನೃತ್ಯ ಶಾಲೆಯ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಶಿವಧಾರೆ ನೃತ್ಯ ಶಾಲೆಯ ವಿದ್ಯಾರ್ಥಿಗಳು ಸೋಲೋ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಅದ್ಭುತ ನೃತ್ಯ ಪ್ರದರ್ಶಿಸಿದರು.
ವೆಸ್ಟರ್ನ್, ಹಿಪ್ ಹಾಪ್, ಸೋಲೋ, ಫ್ರೀ ಸ್ಟೈಲ್ ನೃತ್ಯಗಳನ್ನು ನೃತ್ಯ ಶಾಲೆಯ ವಿದ್ಯಾರ್ಥಿಗಳು ಒಂದನ್ನೊAದು ಮೀರಿಸುವಂತೆ ಪ್ರದರ್ಶನ ನೀಡುವ ಮೂಲಕ ನೆರೆದಿದ್ದ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು.
ವೈವಿಧ್ಯಮಯ ಉಡುಗೆ ತೊಡುಗೆಗಳು ನೃತ್ಯ ವೈಭವಕ್ಕೆ ಮತ್ತಷ್ಟು ಮೆರುಗು ತುಂಬಿದವು. ಸಬ್ ಜೂನಿಯರ್ ವಿಭಾಗದಲ್ಲಿ ಜಾಗ್ವಿ ಪ್ರಥಮ, ನಿಹಾರಿಕಾ ದ್ವಿತೀಯ ಹಾಗೂ ಇಶಾನಿ ತೃತೀಯ ಬಹುಮಾನ ಪಡೆದುಕೊಂಡರು. ಜೂನಿಯರ್ ವಿಭಾಗದಲ್ಲಿ ಆಧ್ಯಾ ಪ್ರಥಮ, ಅನನ್ಯ- ಕಹಾನಿ ದ್ವಿತೀಯ ಹಾಗೂ ಮಹಾನಿ ತೃತೀಯ ಬಹುಮಾನ ಪಡೆದುಕೊಂಡರು.
ಸೀನಿಯರ್ ವಿಭಾಗದಲ್ಲಿ ಹಿತಾ ಗೌಡ ಪ್ರಥಮ, ಪೂರ್ವಿ ಶೆಟ್ಟಿ ದ್ವಿತೀಯ, ದಿಶಾ ಪ್ರಶಾಂತ್ ಹಾಗೂ ರಿಷಾ ಪ್ರಶಾಂತ್ ತೃತೀಯ ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದ ವೇದಿಕೆಯಲ್ಲಿದ್ದ ಗುಡ್ಡೆಹುಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್, ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಉತ್ತಪ್ಪ ಹಾಗೂ ಆರಕ್ಷಕ ಅಧಿಕಾರಿ ಜಯಪ್ರಕಾಶ್ ಮಕ್ಕಳಿಗೆ ಬಹುಮಾನ ವಿತರಿಸಿದರು.
ಶಿವಧಾರೆ ನೃತ್ಯ ಸಂಸ್ಥೆಯ ನೃತ್ಯ ಸಂಯೋಜಕ ಮಾಸ್ಟರ್ ಚೇತನ್ ರವಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಇದೇ ಸಂದರ್ಭ ಮಾಸ್ಟರ್ ಚೇತನ್ ರವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕುಶಾಲನಗರದ ಮುತ್ತೂಟ್ ಎಂಕ್ರೆಡ್ ಲಿಮಿಟೆಡ್ ಬ್ರಾಂಚ್ ಮ್ಯಾನೇಜರ್ ವಿನೋದ್, ಮೆಹೆಕ್ ಚಿಕನ್ ಸ್ಟಾಲ್ ಮಾಲೀಕ ಇಲ್ಲು, ಕಾಂಗ್ರೆಸ್ ಮುಖಂಡ ನಯಾಜ್ ಅಹಮ್ಮದ್, ಶಿವಧಾರೆ ನೃತ್ಯ ಸಂಸ್ಥೆಯ ಶಿವರಾಜ್, ಪೋಷಕರು ಹಾಗೂ ಮಕ್ಕಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net