ಟರ್ಫ್ ಅಳವಡಿಕೆಗೆ ಧನಸಹಾಯ

ಶಾಸಕ ಮಂಥರ್ ಗೌಡ ಅವರು ವೈಯಕ್ತಿಕವಾಗಿ ಮಾಲಂಬಿ ಗ್ರಾಮದ ಯುವಕ ಸಂಘದ ಆಟದ ಮೈದಾನದಲ್ಲಿ ವಾಲಿಬಾಲ್ ಕ್ರೀಡಾಂಗಣಕ್ಕೆ ಟರ್ಫ್ ಅಳವಡಿಸಲು ಧನ ಸಹಾಯ ನೀಡಿದ್ದು ಟರ್ಫ್ ಅಳವಡಿಕೆ ಕಾಮಗಾರಿ ಮುಗಿದಿದೆ.
ಶಾಸಕ ಮಂಥರ್ ಗೌಡ ಅವರು ವೈಯಕ್ತಿಕವಾಗಿ ಮಾಲಂಬಿ ಗ್ರಾಮದ ಯುವಕ ಸಂಘದ ಆಟದ ಮೈದಾನದಲ್ಲಿ ವಾಲಿಬಾಲ್ ಕ್ರೀಡಾಂಗಣಕ್ಕೆ ಟರ್ಫ್ ಅಳವಡಿಸಲು ಧನ ಸಹಾಯ ನೀಡಿದ್ದು ಟರ್ಫ್ ಅಳವಡಿಕೆ ಕಾಮಗಾರಿ ಮುಗಿದಿದೆ.
Published on
ಶನಿವಾರಸಂತೆ: ಶಾಸಕ ಡಾ.ಮಂಥರ್‌ಗೌಡ ಅವರು ಕ್ರೀಡಾಕ್ಷೇತ್ರ ಹಾಗೂ ಆಟದ ಮೈದಾನವನ್ನು ಅಭಿವೃದ್ಧಿಪಡಿಸಿ ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ವೈಯಕ್ತಿಕವಾಗಿ ವಾಲಿಬಾಲ್ ಕ್ರೀಡಾಂಗಣಕ್ಕೆ ಟರ್ಫ್ ಅಳವಡಿಸಲು ಧನ ಸಹಾಯ ಮಾಡಿದ್ದಾರೆ.
ಸಮೀಪದ ಆಲೂರು ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ಮಾಲಂಬಿ ಗ್ರಾಮದ ಯುವಕ ಸಂಘಧ ಆಟದ ಮೈದಾನದಲ್ಲಿ ವಾಲಿಬಾಲ್ ಕ್ರೀಡಾಂಗಣಕ್ಕೆ 2.20 ಲಕ್ಷ ರೂ.ವೆಚ್ಚದಲ್ಲಿ ಗುಣಮಟ್ಟದ ಅಸ್ಟ್ರೋ ಟರ್ಫ್ ಅಳವಡಿಕೆ ಮತ್ತು ಅಂಕಣದಲ್ಲಿ ಇಂಟರ್‌ಲ್ಯಾಕ್ ಅಳವಡಿಸಲು ಹಣ ನೀಡಿದ್ದಾರೆ.
ಈಗಾಗಲೇ ಕಾಮಗಾರಿ ನಡೆಯುತ್ತಿದೆ. ವಾಲಿಬಾಲ್ ಕ್ರೀಡಾಂಗಣಕ್ಕೆ ಅಸ್ಟ್ರೋ ಟರ್ಫ್ ಅಳವಡಿಸುವ ಕಾಮಗಾರಿ ಮುಗಿದಿದ್ದು, ಕ್ರೀಡಾಂಗಣದಲ್ಲಿ ಇಂಟರ್‌ಲ್ಯಾಕ್ ಅಳವಡಿಸುವ ಕಾಮಗಾರಿ ಮಾತ್ರ ಬಾಕಿ ಇದೆ. ಈ ಮೂಲಕ ಸದ್ಯದಲ್ಲೇ ಮಾಲಂಬಿ ಗ್ರಾಮದ ಯುವಕ ಸಂಘದ ಆಟದ ಮೈದಾನವು ವ್ಯವಸ್ಥಿತ ಮತ್ತು ಆಕರ್ಷಿತ ವಾಲಿಬಾಲ್ ಅಸ್ಟ್ರೋ ಟರ್ಫ್ ಅಂಗಣವಾಗಿ ಸಿದ್ಧವಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net