ಗ್ರಾಮೀಣ ಕ್ರೀಡೆಗೆ ಉತ್ತೇಜನ ಉತ್ತಮ ಬೆಳವಣಿಗೆ

ಪ್ರಥಮ ಬಹುಮಾನ ಪಡೆದ ಬಿ.ವೈ.ಸಿ. ಕುಡುಮಂಗಳೂರು 3 ಟೀಮ್ ಲಾಲಿ ಹೆಬ್ಬಾಲೆ ತಂಡ.
ಪ್ರಥಮ ಬಹುಮಾನ ಪಡೆದ ಬಿ.ವೈ.ಸಿ. ಕುಡುಮಂಗಳೂರು 3 ಟೀಮ್ ಲಾಲಿ ಹೆಬ್ಬಾಲೆ ತಂಡ.
Published on
ಶನಿವಾರಸಂತೆ: ಕ್ರೀಡೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.
ಮಾಲಂಬಿ ಬ್ರದರ್ಸ್ ಏರ್ಪಡಿಸಿದ್ದ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕು ಹಾಗೂ ಹಾಸನ ಜಿಲ್ಲೆಯ ಮರಿಯನಗರ ಮತ್ತು ಅರಗಲ್ಲು ಗ್ರಾಮಸ್ಥರ ವಾಲಿಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇಂದು ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡಾಕೂಟ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ, ಸಮಗ್ರ ಶಿಕ್ಷಣದ ಅಭಿವೃದ್ಧಿಯಲ್ಲಿ ಕ್ರೀಡಾ ಶಿಕ್ಷಣವೂ ಯಶಸ್ಸು ಸಾಧಿಸುತ್ತಿದೆ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಕ್ರೀಡಾ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಇಂತಹ ಗ್ರಾಮೀಣ ಕ್ರೀಡೆಗೆ ಉತ್ತೇಜನ ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆ, ಸರ್ಕಾರ ಇಂದು ಅನೇಕ ಕ್ರೀಡಾಕೂಟಗಳಿಗೆ ಪ್ರೋತ್ಸಾಹಧನ ನೀಡುತ್ತಿದೆ. ಕ್ರೀಡೆಯಲ್ಲಿ ತೀರ್ಪುಗಾರರು ಯಾವುದೇ ತಪ್ಪು ತೀರ್ಪು ನೀಡಬಾರದು ಕೆಲ ಸಣ್ಣ ತಪ್ಪು ತೀರ್ಪು ನೀಡುವುದರಿಂದ ನಿಜವಾದ ಕ್ರೀಡಾ ಪ್ರತಿಭೆ ಚಿವುಟಿ ಹೋಗುತ್ತದೆ. ಪಾಲಕರು ಮಕ್ಕಳ ಕ್ರೀಡಾ ಪ್ರತಿಭೆಯನ್ನು ಪ್ರಾರಂಭದಿಂದ ಪ್ರೋತ್ಸಾಹ ನೀಡಬೇಕು, ಇದರಿಂದ ಮುಂದೆ ದೊಡ್ಡ ಕ್ರೀಡಾಪಟುವಾಗಿ ಹೊರಹೊಮ್ಮುತ್ತಾರೆ, ಇಂದು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳಾಗಿ ಸಾಧನೆ ಮೂಲಕ ಹೊರ ಹೊಮ್ಮಿರುವುದು ಗ್ರಾಮೀಣ ಕ್ರೀಡಾಪಟುಗಳೇ ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ನಡೆಯುವ ಇಂತಹ ಕ್ರೀಡಾಕೂಟಗಳನ್ನು ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ವಿ. ಅಶೋಕ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡಾಕೂಟ ಆಯೋಜಿಸಿರುವುದು ಸಾಹಸದ ಕೆಲಸ. ಆದರೂ ಯುವ ಸಮೂಹ ನಾವು ಹೇಗಾದರೂ ಮಾಡಿ ಈ ವಾಲಿಬಾಲ್ ಕ್ರೀಡಾಕೂಟ ಆಯೋಜನೆ ಮಾಡಲೇಬೇಕು ಎಂದು ಪಣತೊಟ್ಟು ಅನೇಕರ ಸಹಕಾರದಿಂದ ಈ ಪಂದ್ಯಾವಳಿ ಏರ್ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಕ್ರೀಡಾಕೂಟ ಆಯೋಜಿಸಲಾಗುವುದು ಎಂದರು.
ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ರಾಜಮ್ಮ ರುದ್ರಯ್ಯ, ಆಲೂರು ಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಪ್ರಮುಖರಾದ ಕೋಮರಪ್ಪ, ಎಂ.ಡಿ.ಸುರೇಶ್, ಮುತ್ತಮ್ಮ ಗಣೇಶ್, ಲಿಂಗರಾಜು, ಲೀಲಾದಾಸ್, ತೀರ್ಥಪ್ರಸಾದ್, ಪ್ರಸನ್ನ, ಮಾಲಂಬಿ ಬ್ರದರ್ಸ್ ಸಮಿತಿ ಅಧ್ಯಕ್ಷ ಸಿದ್ದಪಾಜಿ, ಸುಂದರ್, ಮುತ್ತಪ್ಪ, ಉಣ್ಣಿಕೃಷ್ಣ, ಸುಬ್ರಮಣ್ಯ, ಚೆನ್ನಕೇಶವ ಮತ್ತಿತರರಿದ್ದರು.
ವಾಲಿಬಾಲ್ ಪಂದ್ಯಾಟದ ಪ್ರಥಮ ಬಹುಮಾನ ಬಿ.ವೈ.ಸಿ.ಕುಡುಮಂಗಳೂರು ತಂಡ, ದ್ವಿತೀಯ ಬಹುಮಾನ ಟೀಮ್ ಲಾಲಿ ಹೆಬ್ಬಾಲೆ ತಂಡ, ತೃತೀಯ ಬಹುಮಾನ ಫ್ರೆಂಡ್ಸ್ ಶನಿವಾರಸಂತೆ ತಂಡ, ಚತುರ್ಥ ಬಹುಮಾನ ಮಾಲಂಬಿ ಬ್ರದರ್ಸ್ ತಂಡ ಪಡೆದುಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net