ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನ ಸಮಿತಿಯ ವತಿಯಿಂದ ಶ್ರೀ ಶನೇಶ್ವರ ಜಯಂತಿ ಮತ್ತು ರಥೋತ್ಸವವು ವಿವಿಧ ಹೋಮ ಹವನಗಳೊಂದಿಗೆ ಶನಿವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ಜಯಂತಿ ಅಂಗವಾಗಿ ಸ್ವಸ್ತಿಶೀ ಪಂಚಗವ್ಯ ಪುಣ್ಯಾಹ ವಾಚನ ಗಣಯಾಗ, ಸಗ್ರಹಾಮಕ ಶಾಂತಿ ಹೋಮ, ನವಕಕಲಶಾರಾಧನೆ, ಪ್ರಧಾನ ಹೋಮ್, ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ, ಮಹಾಕುಂಭಾಭಿಷೇಕ ,ಪ್ರಸನ್ಯ ಪೂಜೆ, ಶನಿಶಾಂತಿ ಹೋಮದ ಪೂರ್ಣಾಹುತಿ, ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನೆರವೇರಿತು. ಪೂಜಾ ಕೈಂಕರ್ಯಗಳನ್ನು ಉಜ್ಜರೆಯ ಗೋಪಾಲ ತಂಡದವರು ನೆರವೇರಿಸಿದರು.