ಕೊಡಗಿನಲ್ಲಿ ಕರ್ತವ್ಯ ಸಲ್ಲಿಸಿದ್ದು ಜೀವನದಲ್ಲಿಯೇ ಸ್ಮರಣೀಯ

ಕೂರ್ಗ್ ಹೋಟೇಲ್, ರೆಸಾರ್ಟ್ ಅಸೋಸಿಯೇಷನ್, ಕೊಡಗು ಹೋಂಸ್ಟೇ ಅಸೋಸಿಯೇಷನ್, ಕೊಡಗು ಚೇಂಬರ್ ಆಫ್ ಕಾಮರ್ಸ್ ಸಂಯುಕ್ತಾಶ್ರಯದಲ್ಲಿ ರ್ಗಮಿತ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಕೂರ್ಗ್ ಹೋಟೇಲ್, ರೆಸಾರ್ಟ್ ಅಸೋಸಿಯೇಷನ್, ಕೊಡಗು ಹೋಂಸ್ಟೇ ಅಸೋಸಿಯೇಷನ್, ಕೊಡಗು ಚೇಂಬರ್ ಆಫ್ ಕಾಮರ್ಸ್ ಸಂಯುಕ್ತಾಶ್ರಯದಲ್ಲಿ ರ್ಗಮಿತ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಕೊಡಗಿನಲ್ಲಿ ಕರ್ತವ್ಯ ಸಲ್ಲಿಸಿದ್ದು ಜೀವನದಲ್ಲಿಯೇ ಸ್ಮರಣೀಯ
  • ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ವೆಂಕಟ್ ರಾಜಾ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದ ದಿನಗಳು ಜೀವನದಲ್ಲಿಯೇ ಸ್ಮರಣೀಯ ದಿನಗಳಾಗಿರುತ್ತವೆ. ಕೊಡಗಿನ ಜನತೆ ನೀಡಿದ ಪ್ರೀತಿ, ವಿಶ್ವಾಸ ಎಂದಿಗೂ ಮರೆಯಲಾರೆ. ಉತ್ತರಭಾರತೀಯನಾದ ತನಗೆ ಕೊಡಗು ಎರಡನೇ ಮನೆಯಿದ್ದಂತೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ವೆಂಕಟರಾಜಾ ಹೇಳಿದರು.
ನಗರದ ವ್ಯಾಲಿವ್ಯೆ ಹೋಟೇಲ್ ಸಭಾಂಗಣದಲ್ಲಿ ಕೂರ್ಗ್ ಹೋಟೇಲ್, ರೆಸಾರ್ಟ್ ಅಸೋಸಿಯೇಷನ್, ಕೊಡಗು ಹೋಂಸ್ಟೇ ಅಸೋಸಿಯೇಷನ್, ಕೊಡಗು ಚೇಂಬರ್ ಆಫ್ ಕಾಮರ್ಸ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವೆಂಕಟರಾಜಾ ಪ್ರವಾಸೋದ್ಯಮ ಸಂಘಟನೆಗಳ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಾನು ಜಿಲ್ಲಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದ ಎರಡೂವರೆ ವರ್ಷಗಳ ಕಾಲವೂ ಜಿಲ್ಲೆಯ ಜನತೆ ತನಗೆ ಪ್ರೀತಿ, ವಿಶ್ವಾಸತೋರಿ ಕುಟುಂಬ ನೀಡುವ ಮಮತೆಯನ್ನೇ ನೀಡಿದ್ದರು. ಕೊಡಗಿನ ಭವಿಷ್ಯದ ದಷ್ಟಿಯಿಂದ ಸ್ಪಷ್ಟ ಗುರಿಯೊಂದಿಗೆ ಅಭಿವೃದ್ಧಿಯತ್ತ ಗಮನ ನೀಡಿ ಎಂದು ಕಿವಿಮಾತು ಹೇಳಿದ ವೆಂಕಟರಾಜಾ, ಗುರಿ ಸಾಧನೆಯ ನಿಟ್ಟಿನಲ್ಲಿ ಕೊಡಗಿನ ಜನತೆ ತಮ್ಮ ಛಲದ ಹೋರಾಟ ಮರೆಯಬಾರದು ಎಂದು ಹೇಳಿದರು.
ದಿಲ್ಲಿಯಲ್ಲಿ ಯಮುನಾ ನದಿ ಕಲುಷಿತಗೊಂಡು ಕುಡಿಯಲು ಯೋಗ್ಯವಿಲ್ಲದಂತೆ ಆಗಿರುವುದನ್ನು ಪ್ರಸ್ತಾಪಿಸಿದ ವೆಂಕಟರಾಜಾ ಕೊಡಗಿನಲ್ಲಿ ಉಗಮಿಸಿ ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಸಾಗುವ ಕಾವೇರಿ ಅತ್ಯಂತ ಪವಿತ್ರ ನದಿಯಾಗಿದೆ. ಹೀಗಾಗಿ ಕೊಡಗಿನ ಪ್ರತೀಯೋರ್ವರೂ ಕಾವೇರಿಯ ಪಾವಿತ್ರ್ಯತೆ ಹಾಳಾಗಲು ಬಿಡಬಾರದು ಎಂದೂ ಕರೆ ನೀಡಿದ ಅವರು, ಕೊಡಗನ್ನು ಸ್ವಚ್ಚವಾಗಿ ಸುಂದರವಾಗಿ ಕಾಪಾಡಬೇಕಾದಲ್ಲಿ, ಪರಿಸರ ಸ್ಮೇಹಿ ಮತ್ತು ಸುಸ್ಥಿರ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕಾದ ಅನಿವಾರ್ಯತೆ ಇದೆ ಎಂದೂ ಅವರು ಅಭಿಪ್ರಾಯಪಟ್ಟರು.
ಕೂರ್ಗ್ ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಸಾಕಷ್ಟು ಯೋಜನೆ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ಪ್ರಯತ್ನದಿಂದಲೇ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಸೋಸಿಯೇಷನ್‌ಗೆ ಪ್ರವಾಸೋದ್ಯಮ ಕಛೇರಿಯಲ್ಲಿಯೇ ತನ್ನದೇ ಆದ ಕಛೇರಿ ಲಭಿಸುವಂತಾಯಿತು. ಕೊಡಗಿನ ಜಮ್ಮಾ ಹಿಡುವಳಿದಾರರ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿಯೂ ವೆಂಕಟರಾಜಾ ಅವರ ತಾಂತ್ರಿಕ ಮಾಹಿತಿಗಳು ಸರ್ಕಾರಕ್ಕೆ ನೆರವಾಯಿತೆಂದೂ ದಿನೇಶ್ ಕಾರ್ಯಪ್ಪ ಹೇಳಿದರು.
ಕೊಡಗು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಕೊಡಗು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿಗಣೇಶ್, ಕೂರ್ಗ್ ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ಗೌರವ ಸಲಹೆಗಾರ ಜಿ.ಚಿದ್ವಿಲಾಸ್, ಪತ್ರಕರ್ತ ಅನಿಲ್.ಹೆಚ್.ಟಿ, ಕೂರ್ಗ್ ಹೋಟೇಲ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನಾಸೀರ್, ಹೋಂಸ್ಟೇ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ ಇತರರಿದ್ದರು.
ಕರ್ನಾಟಕಕ್ಕೆ ನಿಯುಕ್ತಿಗೊಂಡ ನಾನು ಕೋಲಾರದಲ್ಲಿ ಕರ್ತವ್ಯ ಸಲ್ಲಿಸಿ ಕೊಡಗಿಗೆ ಜಿಲ್ಲಾಧಿಕಾರಿಯಾಗಿ ನೇಮಕಗೊಂಡೆ. ಆ ಮೂಲಕ ಮೂರು ಊರುಗಳ ಹೆಸರೂ ತನ್ನ ಪಾಲಿಗೆ ದೊರಕಿದವು. ನನ್ನ ಮಗ ಕಷ್ಣದೇವರಾಯ ಮಡಿಕೇರಿಯಲ್ಲಿಯೇ ಜನಸಿದ್ದೂ ಕೂಡ ನನ್ನ ಸೌಭಾಗ್ಯ. ಕರ್ನಾಟಕ ರಾಜ್ಯ ನನಗೆ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಅವಕಾಶ ಕೊಟ್ಟ ರಾಜ್ಯವಾಗಿದ್ದರೆ, ನಾನು ಜಿಲ್ಲಾಧಿಕಾರಿಯಾಗಿ ಜನರು ನೀಡಿದ ಪ್ರೀತಿಯಿಂದ ಕಾರ್ಯನಿರ್ವಹಿಸಿದ್ದ ಕೊಡಗು ನನ್ನ ಎರಡನೇ ಮನೆಯಂತೆ ಸದಾ ಸ್ಮರಣೀಯವಾಗಿರುತ್ತದೆ.
- ವೆಂಕಟರಾಜಾ, ನಿರ್ಗಮಿತ ಜಿಲ್ಲಾಧಿಕಾರಿ,
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net