ಸೇವೆಯಿಂದ ಜನರಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ

ಸೋಮವಾರಪೇಟೆ ಇನ್ನರ್‌ವ್ಹೀಲ್ ಕ್ಲಬ್‌ನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭವನ್ನು ಕ್ಲಬ್ ಜಿಲ್ಲಾ ಮಾಜಿ ಅಧ್ಯಕ್ಷೆ ಜಾಹ್ನವಿ ಮೂರ್ತಿ ಉದ್ಘಾಟಿಸಿದರು. ತನ್ಮಿಯಿ, ಲತಾ, ಸುವಿನಾ, ವನಿತಾ ಇದ್ದರು.
ಸೋಮವಾರಪೇಟೆ ಇನ್ನರ್‌ವ್ಹೀಲ್ ಕ್ಲಬ್‌ನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭವನ್ನು ಕ್ಲಬ್ ಜಿಲ್ಲಾ ಮಾಜಿ ಅಧ್ಯಕ್ಷೆ ಜಾಹ್ನವಿ ಮೂರ್ತಿ ಉದ್ಘಾಟಿಸಿದರು. ತನ್ಮಿಯಿ, ಲತಾ, ಸುವಿನಾ, ವನಿತಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇನ್ನರ್‌ವ್ಹೀಲ್ ಕ್ಲಬ್‌ನ ಜಿಲ್ಲಾ ಮಾಜಿ ಅಧ್ಯಕ್ಷೆ ಜಾಹ್ನವಿ ಮೂರ್ತಿ ಅಭಿಮತ
  • ಇನ್ನರ್‌ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್‌ನ ಪದಾಧಿಕಾರಿಗಳ ಪದಗ್ರಹಣ
ಸೋಮವಾರಪೇಟೆ: ಸೇವೆ ಮೂಲಕ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಇನ್ನರ್‌ವ್ಹೀಲ್ ಕ್ಲಬ್‌ನ ಜಿಲ್ಲಾ ಮಾಜಿ ಅಧ್ಯಕ್ಷೆ ಜಾಹ್ನವಿ ಮೂರ್ತಿ ಹೇಳಿದರು.
ಪಟ್ಟಣದ ಸಾಕ್ಷಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಇನ್ನರ್‌ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್‌ನ 2026-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜ ಸೇವೆಯೇ ಇನ್ನರ್‌ವ್ಹೀಲ್ ಸಂಸ್ಥೆಯ ಮೂಲ ಧ್ಯೇಯವಾಗಿದ್ದು, ಪ್ರತಿಯೊಬ್ಬ ಸದಸ್ಯೆಯೂ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ಹೊಸ ಪದಾಧಿಕಾರಿಗಳು ಉತ್ತಮ ಯೋಜನೆಗಳನ್ನು ರೂಪಿಸಿ ಕ್ಲಬ್‌ನ ಗೌರವವನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಹಾರೈಸಿದರು. ಪರಸ್ಪರ ಸಹಕಾರ, ಸ್ನೇಹ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಿದರೆ ಕ್ಲಬ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ. ಪ್ರತಿಯೊಬ್ಬ ಸದಸ್ಯೆಯೂ ನಾಯಕತ್ವದ ಗುಣ ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.
ನೂತನ ಅಧ್ಯಕ್ಷೆ ಲತಾ ಮಂಜು, ಕಾರ್ಯದರ್ಶಿ ವನಿತಾ ಜಯರಾಮ್, ಉಪಾಧ್ಯಕ್ಷೆ ಅರ್ಮಿತಾ ಕಿರಣ್, ಪದಾಧಿಕಾರಿಗಳಾಗಿ ಲತಾ, ದಿವ್ಯಾ, ರಾಜೇಶ್ವರಿ, ಪ್ರೇಮಾ, ಕಾವೇರಿ, ಮಮತಾ, ಶಿಲ್ಪಾ, ನಂದಿತಾ ಅಧಿಕಾರ ಸ್ವೀಕರಿಸಿದರು.
ಕ್ಲಬ್ ವತಿಯಿಂದ ಹಿರಿಯ ತಜ್ಞ ವೈದ್ಯ ಕೃಷ್ಣನಂದಾ ಅವರನ್ನು ಸನ್ಮಾನಿಸಲಾಯಿತು. ಕ್ಲಬ್ ಹಿರಿಯ ಸದಸ್ಯರಾದ ಸಂಧ್ಯಾರಾಣಿ ಅವರು ಇಬ್ಬರು ವಿದ್ಯಾರ್ಥಿಗಳಿಗೆ 10 ಸಾವಿರ ರೂ.ಗಳ ಸಹಾಯಧನ, ನಂದಿನಿ ಪ್ರಭುದೇವ್ ಅವರು ವಿದ್ಯಾರ್ಥಿಯೊಬ್ಬನ ಚಿಕಿತ್ಸೆಗೆ 10 ಸಾವಿರ ರೂ.ಗಳ ಸಹಾಯಧನ ನೀಡಿದರು. ರೋಟರಿ ಅಧ್ಯಕ್ಷ ಬಿ.ಎಸ್.ಸುಂದರ್ ಕ್ಲಬ್‌ನ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ವೇದಿಕೆಯಲ್ಲಿ ಅಧ್ಯಕ್ಷೆ ತನ್ಮಯಿ ಪ್ರವೀಣ್, ಕಾರ್ಯದರ್ಶಿ ಸುವಿನಾ ಕೃಪಾಲ್ ಇದ್ದರು. ಸ್ಮಿತಾ, ಆಶಾ, ಅನಿತಾ, ಪೂರ್ಣಿಮಾ, ಸುಮಲತಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net