ಅಖಿಲ ಭಾರತ ತಲ್ ಸೈನಿಕ್ ಶಿಬಿರಕ್ಕೆ ಆಯ್ಕೆ

ಜೇಷ್ಠ
ಜೇಷ್ಠ
Published on
ಮಡಿಕೇರಿ:
ಕೊಡಗು ವಿದ್ಯಾಲಯದ ಎನ್.ಸಿ.ಸಿ ಕೆಡೆಟ್ ಗೋಲ್ಡನ್ ಸಾರ್ಜೆಂಟ್ ಎಂ.ಹೆಚ್. ಜೇಷ್ಠ ಸುಬ್ಬಯ್ಯ ಪ್ರತಿಷ್ಠಿತ ಅಖಿಲ ಭಾರತ ತಲ್ ಸೈನಿಕ್ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಈ ಶಿಬಿರ ಸೋಮವಾರದಿಂದ ಆರಂಭವಾಗಿದ್ದು, ಸೆಪ್ಟೆಂಬರ್ 11 ರವರೆಗೆ ನವದೆಹಲಿಯಲ್ಲಿ ನಡೆಯಲಿದೆ. ಫೈರಿಂಗ್ (ಗ್ರೂಪಿಂಗ್) ವಿಭಾಗದಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದಿಂದ 3 ಕೆಡೆಟ್‌ಗಳ ಮಾತ್ರ ಆಯ್ಕೆಯಾಗಿದ್ದು, ಅದರಲ್ಲಿ ಜೇಷ್ಠ ಸುಬ್ಬಯ್ಯ ಒಬ್ಬರಾಗಿದ್ದಾರೆ.
ಕರ್ನಾಟಕದ ವಿವಿಧೆಡೆ ನಡೆದ 7 ಆಯ್ಕೆ ಶಿಬಿರಗಳಲ್ಲಿ ಜೇಷ್ಟ ಸುಬ್ಬಯ್ಯ ಭಾಗವಹಿಸಿ, ಗ್ರೂಪಿಂಗ್ ಶೂಟಿಂಗ್ ಸ್ಪರ್ಧೆಯಲ್ಲಿ 1.2 ಸೆಂ.ಮೀ. ಗ್ರೂಪಿಂಗ್ ಸಾಧನೆ ಮಾಡುವ ಮೂಲಕ ಈ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾನೆ ಎಂದು ಶಾಲಾ ಪ್ರಾಂಶುಪಾಲರಾದ ಸುಮಿತ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೇಷ್ಠ ಸುಬ್ಬಯ್ಯ ಮರಗೋಡುವಿನ ಕೃಷಿಕ ಮಂಡಿರ ಎಂ.ವಿ. ಹರೀಶ್ ಮತ್ತು ವಿಮಾ ದಂಪತಿಯ ಪುತ್ರ. 19ನೇ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಯ ಕೆಡೆಟ್ ಆಗಿದ್ದಾನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net