ಭಾನುವಾರ ಎಸ್‌ಡಿಪಿಐ ಜನಾಗ್ರಹ ಸಮಾವೇಶ

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹ್ಸಿನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹ್ಸಿನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on
ಮಡಿಕೇರಿ:
ರಾಜ್ಯ ಮತ್ತು ಜಿಲ್ಲೆಯಲ್ಲಿ ತಲೆದೋರಿರುವ ಸಮಸ್ಯೆಗಳಿಗೆ ಬೆಳಕು ಚೆಲ್ಲುವ ಸಲುವಾಗಿ ಭಾನುವಾರ (ಜ.18) ಮಡಿಕೇರಿಯಲ್ಲಿ ತಮ್ಮ ಪಕ್ಷದ ವತಿಯಿಂದ ಜನಾಗ್ರಹ ಸಮಾವೇಶ ಆಯೋಜಿಸಲಾಗಿದೆ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹ್ಸಿನ್ ತಿಳಿಸಿದ್ದಾರೆ.
ದೇಶದಲ್ಲಿ ಈಗ ಒಂದಿಲ್ಲೊAದು ಕಾರಣ ಹೇಳಿ ಪೌರತ್ವದ ಪ್ರಶ್ನೆ ಎತ್ತಲಾಗುತ್ತಿದೆ. ಎಸ್‌ಐಆರ್ ಹೆಸರಿನಲ್ಲಿ ಸಂವಿಧಾನ ಬಾಹಿರ ಕೆಲಸ ನಡೆದಿದೆ.
6-7 ಕೋಟಿ ಜನರನ್ನು 11 ರಾಜ್ಯಗಳಲ್ಲಿ ಮತದಾನದಿಂದ ಹೊರಗಿಡಲಾಗಿದೆ. ಎಐಆರ್‌ನಲ್ಲಿ ಪೌರತ್ವ ಸಾಬೀತು ಮಾಡಲು 7-8 ತಿಂಗಳು ಬೇಕಾಗುತ್ತದೆ.
ಸಾಧ್ಯ ಇರುವ ದಾಖಲೆಗಳು ಬಿಟ್ಟು ಅಸಾಧ್ಯ ದಾಖಲೆ ಕೇಳುವ ಮೂಲಕ ಪೌರತ್ವದಿಂದ ದೂರ ಇಡುವ ಷಡ್ಯಂತರ ನಡೆದಿದೆ. ಉತ್ತರ ಪ್ರದೇಶ ಒಂದರಲ್ಲೇ ಶೇ. 25ರಷ್ಟು ಮತದಾರರನ್ನು ಮತದಾನದಿಂದ ಹೊರಗಿಡಲಾಗಿದೆ. ರಾಜ್ಯ ಸರ್ಕಾರ ಇದರ ವಿರುದ್ಧ ಧ್ವನಿ ಎತ್ತಬೇಕು. ಇದೇ ರೀತಿಯ ಅನೇಕ ಸಮಸ್ಯೆಗಳಿದ್ದು ಇವುಗಳಿಗೆ ಪರಿಹಾರ ಸೂತ್ರ ಕಂಡುಕೊಳ್ಳುವ ಸಲುವಾಗಿ ಜನಾಗ್ರಹ ಸಮಾವೇಶ ನಡೆಸಲಾಗುತ್ತಿದೆ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಂವಿಧಾನಿಕ ಹಕ್ಕುಗಳ ಮೂಲಕ ಹೊಂದಿರುವ ಮತದಾನದ ಹಕ್ಕನ್ನು ಮೊಟಕುಗೊಳಿಸುವ ತೀವ್ರ ಮತದಾರರ ಮತದಾರರ ಪರಿಷ್ಕರಣೆಗೆ ಹೊರಟಿರುವ ಸಂವಿಧಾನ ಬಾಹಿರ ಕ್ರಮ ಕೈ ಬಿಡಬೇಕು, ಕೃಷಿ ಮಾಡಿಕೊಂಡು ಬದುಕುತ್ತಿರುವ ರೈತರ ಜಮೀನನ್ನು ಸಿ.ಎನ್.ಡಿ. ವ್ಯಾಪ್ತಿಗೆ ತಂದು ಸೆಕ್ಷನ್ 4ರ ಅಡಿಯಲ್ಲಿ ನೋಟಿಸು ಜಾರಿ ಮಾಡಿರುವ ಕ್ರಮವನ್ನು ಕೈ ಬಿಟ್ಟು ಜಮೀನನ್ನು 57ರ ಅಡಿಯಲ್ಲಿ ಸಕ್ರಮಗೊಳಿಸಬೇಕು, ಮಾನವ ಹಾಗೂ ಪ್ರಾಣಿ ಸಂಘರ್ಷದಿAದಾಗಿ ಕೊಡಗಿನ ಕೃಷಿ ಕಾರ್ಮಿಕರು ಹಾಗೂ ಜನಸಾಮಾನ್ಯರು ತೀವ್ರ ಸಮಸ್ಯೆಗೆ ಒಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರದ ವತಿಯಿಂದ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು. ಕೊಡಗಿನ ಅಪಾರ ಜನಸಂಖ್ಯೆಯ ಸಮುದಾಯ ನಿವೇಶನ ಹಾಗೂ ವಸತಿ ವಂಚಿತರಾಗಿದ್ದಾರೆ ಶೀಘ್ರವಾಗಿ ಎಲ್ಲಾ ನಿವೇಶನ ರಹಿತರಿಗೆ ವಸತಿ ಹಾಗೂ ನಿವೇಶನ ಹಂಚಬೇಕು. ಎಲ್ಲಾ ನಮೂನೆ 50, 53, 57 ಹಾಗೂ 94ಸಿ, 94ಸಿಸಿ ಫಾಸ್ಟ್ ಟ್ರ‍್ಯಾಕ್ ಸಮಿತಿ ರಚಿಸಿ ಸಕ್ರಮಗೊಳಿಸಬೇಕು. ಜೀವ ನದಿ ಕಾವೇರಿ ಮಾಲಿನ್ಯಗೊಳ್ಳದ ಹಾಗೆ ಕ್ರಮವಹಿಸಬೇಕು ಎನ್ನುವ ಬೇಡಿಕೆಗಳನ್ನು ಮುಂದಿಟ್ಟುಕೊAಡು ಜನಾಗ್ರಹ ಸಮಾವೇಶ ನಡೆಸಲಾಗುತ್ತಿದೆ.
ಸಮಾವೇಶ ಹಿನ್ನೆಲೆಯಲ್ಲಿ ಎವಿ ಶಾಲೆಯಿಂದ ಸಮಾವೇಶ ನಡೆಯುವ ಗಾಂಧಿ ಮೈದಾನ ತನಕ ಮೆರವಣಿಗೆ ನಡೆಸಲಾಗುವುದು. ಭಾನುವಾರ ಬೆಳಗ್ಗೆ 10.30ರಿಂದ ಮೆರವಣಿಗೆ ಆರಂಭವಾಗಲಿದೆ. ಎಸ್‌ಡಿಪಿಐ ರಾಜ್ಯಾಧ್ಯಕ್ಷ್ಷ ಅಬ್ದುಲ್ ಮಜೀದ್, ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಪ್ರಧಾನ ಕಾರ್ಯದರ್ಶಿ
ಅಪ್ಸರ್ ಕೊಡ್ಲಿಪೇಟೆ, ಪತ್ರಕರ್ತ ರಾ. ಚಿಂತನ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಜಿಲ್ಲಾ ಉಪಾಧ್ಯಕ್ಷ ಮನ್ಸೂರ್, ಜಿಲ್ಲಾ ಕಾರ್ಯರ್ಶಿ ಮೆರಿ ವೇಗಸ್, ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಅಡ್ಕಾರ್, ನಗರಸಭಾ ಸದಸ್ಯೆ ನೀಮಾ ಅರ್ಷದ್ ಹಾಗೂ ನಗರಾಧ್ಯಕ್ಷ ಮೊಹಮ್ಮದ್ ಅಲಿ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net