ಎಸ್‌ಡಿಎಂಸಿ ರಚನೆ ಮತ್ತು ನಿರ್ವಹಣೆ ತರಬೇತಿ

ಗೋಣಿಕೊಪ್ಪಲು ಕ್ಲಸ್ಟರ್ ಮಟ್ಟದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ರಚನೆ ಮತ್ತು ನಿರ್ವಹಣೆ ತರಬೇತಿಗೆ ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್ ಜೋಡುಬೀಟಿ vಚಾಲನೆ ನೀಡಿದರು. ಹೆಚ್.P.É ಕುಮಾರ್, ರಾಧಾ, ಮಾಲಿನಿ ಮತ್ತಿತರರು ಇದ್ದರು.
ಗೋಣಿಕೊಪ್ಪಲು ಕ್ಲಸ್ಟರ್ ಮಟ್ಟದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ರಚನೆ ಮತ್ತು ನಿರ್ವಹಣೆ ತರಬೇತಿಗೆ ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್ ಜೋಡುಬೀಟಿ vಚಾಲನೆ ನೀಡಿದರು. ಹೆಚ್.P.É ಕುಮಾರ್, ರಾಧಾ, ಮಾಲಿನಿ ಮತ್ತಿತರರು ಇದ್ದರು.
Published on
ಗೋಣಿಕೊಪ್ಪಲು:
ಗೋಣಿಕೊಪ್ಪಲು ಕ್ಲಸ್ಟರ್ ಮಟ್ಟದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ರಚನೆ ಮತ್ತು ನಿರ್ವಹಣೆ ತರಬೇತಿಯನ್ನು ಗೋಣಿಕೊಪ್ಪಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆಸಲಾಯಿತು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಮಿತಿಯ ಕರ್ತವ್ಯ ಪ್ರಮುಖವಾಗಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಯ ಮುನ್ನೋಟಕ್ಕೆ ಸಮಿತಿ ಪೂರ್ವಕವಾಗಿ ಸ್ಪಂದಿಸಿ ಕಾರ್ಯನಿರ್ವಹಿಸಬೇಕಾದ ಜವಾಬ್ದಾರಿ ಇದೆ ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಹೆಚ್.P.ೆ ಕುಮಾರ್ ಮಾತನಾಡಿ, ಎಸ್‌ಡಿಎಂಸಿ ಶಾಲೆಯ ಅಭಿವೃದ್ಧಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಮಕ್ಕಳ ದಾಖಲಾತಿ, ಶಾಲೆಯ ಮೂಲ ಸೌಕರ್ಯಗಳ ಅಗತ್ಯತೆಗಳ ಬಗ್ಗೆ ಪೂರೈಕೆ ಮಾಡುವ ಕರ್ತವ್ಯ ಹೊಂದಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಗೋಣಿಕೊಪಲ್ಪು ಕ್ಲಸ್ಟರ್‌ನ ಸಿ.ಆರ್.ಪಿ. ರಾಧಾ, ನೂತನವಾಗಿ ಆಯ್ಕೆಯಾದ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರುಗಳ ಜವಾಬ್ದಾರಿ, ಸಮಿತಿ ನಿರ್ವಹಿಸಬೇಕಾದ ಪ್ರಕಾರಗಳ ಬಗ್ಗೆ ತಿಳಿಸುತ್ತಾ, ಸಮಿತಿ ರಚನೆ ಮತ್ತು ಹಿನ್ನೆಲೆ, ಶಿಕ್ಷಣ ಹಕ್ಕು ಕಾಯ್ದೆ ಅಧ್ಯಕ್ಷರ ಆಯ್ಕೆ, ಮತ್ತು ಸದಸ್ಯ ಕಾರ್ಯದರ್ಶಿಯ ನೇಮಕ, ಸಮಿತಿ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.
ಹಾತೂರು ಶಾಲೆಯ ಮುಖ್ಯ ಶಿಕ್ಷಕಿ ಮಾಲಿನಿ, ಗೋಣಿಕೊಪ್ಪಲು ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ, ಗೋಣಿಕೊಪ್ಪಲು ಕ್ಲಸ್ಟರ್ ವ್ಯಾಪ್ತಿಯ ಶಾಲೆಯ ಮುಖ್ಯ ಶಿಕ್ಷಕರು, ಎಸ್.ಡಿಎಂಸಿ ಅಧ್ಯಕ್ಷರು, ಸದಸ್ಯರುಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net