ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಾರ್ಷಿಕ ಶಿಬಿರದಲ್ಲಿ ಜಿಲ್ಲಾ ಸಂಘಟನಾ ಆಯುಕ್ತೆ ಯು.ಸಿ.ದಮಯಂತಿ, ತರಬೇತುದಾರ ಕೆ.ಯು.ರಂಜಿತ್, ಸಿ.ಎಂ. ಸುಲೋಚನಾ, ಕೆ.ಬಿ.ಗಣೇಶ್, ಎಂ.ಎಸ್.ಗಣೇಶ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಕುಶಾಲನಗರ : ಇಲ್ಲಿಗೆ ಸಮೀಪದ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಎರಡು ದಿನಗಳ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಾರ್ಷಿಕ ಶಿಬಿರ ನೆರವೇರಿತು. ಕೊಡಗು ಜಿಲ್ಲಾ ಹಾಗೂ ಕುಶಾಲನಗರ ತಾಲೂಕು ಸಮಿತಿಗಳ ವತಿಯಿಂದ ನಡೆದ ಶಿಬಿರವನ್ನು ಸ್ಕೌಟ್ಸ್ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರಾ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜ್ಞಾನಗಂಗಾ ಶಾಲೆಯ ಕಾರ್ಯದರ್ಶಿ ಬಿ.ಎಸ್.ನಿಂಗಪ್ಪ, ಪ್ರಾಂಶುಪಾಲೆ ಸತ್ಯ ಸುಲೋಚನಾ, ಸ್ಕೌಟ್ಸ್ ತರಬೇತುದಾರ ಕೆ.ಯು.ರಂಜಿತ್, ಜಿಲ್ಲಾ ಸಂಘಟನಾ ಆಯುಕ್ತೆ ಯು.ಸಿ.ದಮಯಂತಿ, ಸಿ.ಎಂ. ಸುಲೋಚನಾ, ಕೆ.ಬಿ.ಗಣೇಶ್, ಎಂ.ಎಸ್.ಗಣೇಶ್, ಡಿ.ವಿ.ಗಣೇಶ್ ಇದ್ದರು.