ಶಾಲೆಯ ಸಾಧಕರಿಗೆ ಸನ್ಮಾನ

ಕೂಡಿಗೆ ಸÀದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. Àಬೋಸ್ ಮೊಣ್ಣಪ್ಪ, ಬಿ.ಪಿ. ಅಪ್ಪಣ್ಣ, ಕೆ.ಸಿ. ದೇವಯ್ಯ, ಅರುಣ್ ಕುಮಾರ್, ಎನ್. ಪುಷ್ಪ ಮತ್ತಿತರರು ಇದ್ದರು.
ಕೂಡಿಗೆ ಸÀದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. Àಬೋಸ್ ಮೊಣ್ಣಪ್ಪ, ಬಿ.ಪಿ. ಅಪ್ಪಣ್ಣ, ಕೆ.ಸಿ. ದೇವಯ್ಯ, ಅರುಣ್ ಕುಮಾರ್, ಎನ್. ಪುಷ್ಪ ಮತ್ತಿತರರು ಇದ್ದರು.
Published on
ಕುಶಾಲನಗರ:
ಕೂಡಿಗೆಯ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ವ್ಯವಸ್ಥಾಪಕ ಮಂಡೆಪAಡ ಬೋಸ್ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಶಾಲೆಯ ಗ್ರೂಪ್ ಡಿ. ನೌಕರ ಹೆಚ್.ಆರ್. ರಘು,
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಶರಾವತಿ ಹಾಗೂ ಪೋಷಕರಿಗೆ, ಕರ್ನಾಟಕ ರಾಜ್ಯ ಮಟ್ಟದ
ಕಾಯಕಯೋಗಿ ರತ್ನ ಪ್ರಶಸ್ತಿ ಪುರಸ್ಕೃತ ಮಂಡೆಪAಡ ಬೋಸ್ ಮೊಣ್ಣಪ್ಪ, ಕ್ರೀಡೆಯಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಶಾಲಾ ವಿದ್ಯಾರ್ಥಿಗಳಾದ ಪ್ರಜೇಶ್ ,ಮಣಿಕಂಠ, ಮುರಳಿ, ಹಾಗೂ ತರಬೇತುದಾರ, ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಬಿ.ಪಿ. ಅಪ್ಪಣ್ಣ, ಕೆ.ಸಿ. ದೇವಯ್ಯ, ಅರುಣ್ ಕುಮಾರ್, ಶಾಲಾ ಮುಖ್ಯೋಪಾಧ್ಯಾಯನಿ ಎನ್. ಪುಷ್ಪ ಹಳೆಯ ವಿದ್ಯಾರ್ಥಿ ಚರಣ್, ಶಿಕ್ಷಕರಾದ ಎ.ಪಿ. ಸೋಮಯ್ಯ, ಎಂ.ಎಸ್. ಕುಸುಮ, ಟಿ .ಎಸ್. ಕಾಂತರಾಜ್, ಹೇಮಮಾಲಿನಿ, ಪ್ರತಾಪ್, ರೂಪಕಲಾ, ಗಣೇಶ್, ಕುಮಾರ್, ದೀಪಕ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net