ಕುಶಾಲನಗರ ಪುರಸಭೆಯಿಂದ ಉಳಿತಾಯ ಬಜೆಟ್

ಸಭೆಯಲ್ಲಿ ಆಡಳಿತಾಧಿಕಾರಿಯೂ ಆದ ಉಪ ವಿಭಾಧಿಕಾರಿ ನೀತಿನ್ ಚೆಕ್ಕಿ ಅವರು  2026-27ನೇ ಸಾಲಿನಲ್ಲಿ ರೂ.15.38 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು. ಮುಖ್ಯಾಧಿಕಾರಿ ಗಿರೀಶ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕಂದಾಯ ಅಧಿಕಾರಿ ರಾಮು, ಆರೋಗ್ಯ ನಿರೀಕ್ಷಕ ಉದಯಕುಮಾರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಆಡಳಿತಾಧಿಕಾರಿಯೂ ಆದ ಉಪ ವಿಭಾಧಿಕಾರಿ ನೀತಿನ್ ಚೆಕ್ಕಿ ಅವರು 2026-27ನೇ ಸಾಲಿನಲ್ಲಿ ರೂ.15.38 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು. ಮುಖ್ಯಾಧಿಕಾರಿ ಗಿರೀಶ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕಂದಾಯ ಅಧಿಕಾರಿ ರಾಮು, ಆರೋಗ್ಯ ನಿರೀಕ್ಷಕ ಉದಯಕುಮಾರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Savings budget
ಕುಶಾಲನಗರ: ಪುರಸಭೆಯಲ್ಲಿ ಶುಕ್ರವಾರ ನಡೆದ ಆಯವ್ಯಯ ಸಭೆಯಲ್ಲಿ ಆಡಳಿತಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ನೀತಿನ್ ಚೆಕ್ಕಿ ಅವರು 2026-27ನೇ ಸಾಲಿನಲ್ಲಿ 15.38 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.
2026-27ನೇ ಸಾಲಿಗೆ ನಿರೀಕ್ಷಿತ ಆದಾಯ 31.44 ಕೋಟಿ ರೂ., ನಿರೀಕ್ಷಿತ ಖರ್ಚು 31.28 ಕೋಟಿ ರೂ. ಎಂದು ಅದಾಂಜಿಸಲಾಗಿದ್ದು, 15.38 ಲಕ್ಷ ರೂ. ಉಳಿತಾಯ ನಿರೀಕ್ಷಿಸಲಾಗಿದೆ.
ರಾಜಸ್ವ ಆದಾಯ (ಸ್ವಂತ ನಿಧಿ): ಆಸ್ತಿ ತೆರಿಗೆ 37.3 ಕೋಟಿ. ರೂ., ಉದ್ದಿಮೆ ಪರವಾನಗಿ 50 ಲಕ್ಷ ರೂ., ಕಟ್ಟಡ ಪರವಾನಗಿ 32 ಲಕ್ಷ ರೂ., ಖಾತಾ ವರ್ಗಾವಣೆ 4.5 ಲಕ್ಷ ರೂ., ಮಾಂಸ ಮಾರಾಟ ಮಳಿಗೆಗಳು 10 ಲಕ್ಷ ರೂ., ಬ್ಯಾಂಕ್ ಗಳಿಂದ ಬಡ್ಡಿ 10 ಲಕ್ಷ ರೂ., ಜಾಹೀರಾತು ಶುಲ್ಕ 3 ಲಕ್ಷ ರೂ. ಆದಾಯ ನಿರೀಕ್ಷೆ ಮಾಡಲಾಗಿದೆ.
ಜತೆಗೆ ಸರ್ಕಾರದ ಅನುದಾನ, 16ನೇ ಹಣಕಾಸು ಯೋಜನೆ ಅನುದಾನ, ರಾಜ್ಯ, ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳ ಅನುದಾನ ಸೇರಿ 12.8 ಕೋಟಿ. ರೂ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಖರ್ಚುಗಳ ವಿವರ: ಹೊರಗುತ್ತಿಗೆ ನೌಕರರ ವೇತನಕ್ಕೆ 90 ಲಕ್ಷ ರೂ., ಘನತ್ಯಾಜ್ಯ ನಿರ್ವಹಣಾ ವಾಹನಗಳಿಗೆ ಇಂಧನ ವೆಚ್ಚ 30 ಲಕ್ಷ ರೂ., ಬೀದಿ ದೀಪ ನಿರ್ವಹಣೆಗೆ 42 ಲಕ್ಷ ರೂ., ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ 30 ಲಕ್ಷ ರೂ., ಶೌಚಾಲಯಗಳ ದುರಸ್ತಿಗೆ 10 ಲಕ್ಷ ರೂ., ಬೀದಿನಾಯಿಗಳ ನಿಯಂತ್ರಣಕ್ಕಾಗಿ 10 ಲಕ್ಷ ರೂ. ಹಾಗೂ ನೂತನ ಪುರಸಭೆ ಮಾರುಕಟ್ಟೆ ನಿರ್ಮಾಣ, ಸ್ವಾಗತ ಕಾಮಾನು, ಸರ್ಕಲ್ ಅಭಿವೃದ್ಧಿ, ಸ್ಮಶಾನಗಳ ಅಭಿವೃದ್ಧಿ ಸೇರಿ ವಿವಿಧ ಬಾಬ್ತುಗಿಗೆ ಒಟ್ಟು 31.28 ಕೋಟಿ ರೂ. ಖರ್ಚು ಮಾಡಲು ಉದ್ದೇಶಿಸಲಾಗಿದೆ.
ಉದ್ದೇಶಿತ ಪ್ರಮುಖ ಯೋಜನೆಗಳು
ಪುರಸಭೆ ವ್ಯಾಪ್ತಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಫುಡ್ ಕೋರ್ಟ್ ನಿರ್ಮಾಣ ಮಾಡಲು 15 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ಪುರಸಭೆ ಕಚೇರಿಯ ಸಂಪೂರ್ಣ ಕಡತಗಳನ್ನು ಡಿಜಿಟಲೀಕರಣಗೊಳಿಸಲು 20 ಲಕ್ಷ ರೂ., ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಮಹಿಳೆಯರು ಮತ್ತು ಹಿರಿಯ ನಾಗರಿಕರ ಸುರಕ್ಷತೆಗೆ ಸೋಲಾರ್ ಸಿಸಿ ಟಿವಿ ಅಳವಡಿಸಲು 25ಲಕ್ಷ ರೂ., ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ 10 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ. ಜತೆಗೆ ಕೆಎಸ್‌ಆರ್‌ಟಿಸಿಬಸ್ ನಿಲ್ದಾಣದಲ್ಲಿ ಆವರಣದಲ್ಲಿ ಮಹಿಳೆಯರ ಅನುಕೂಲಕ್ಕಾಗಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಯಂತ್ರ ಅಳವಡಿಕೆ, ಪೌರಕಾರ್ಮಿಕ ಸಿಬ್ಬಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜನರಲ್ ಪರ್ಸನಲ್ ಇನ್ಶೂರೆನ್ಸ್ ಅಡಿಯಲ್ಲಿ 60 ಲಕ್ಷ ರೂ. ಅಪಘಾತ ವಿಮೆ ಮಾಡಿಸಲು ಉದ್ದೇಶಿಸಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿರುವ ಎಲ್ಲ ಸರ್ಕಲ್‌ಗಳ ಅಭಿವೃದ್ಧಿ ಹಾಗೂ ಕೆ.ಎಂ.ಕಾರ್ಯಪ್ಪ ಸರ್ಕಲ್ ಪ್ರತಿಮೆ ಹಾಗೂ ಗುಂಡೂರಾವ್ ಪ್ರತಿಮೆ ಸ್ಥಾಪನೆಗಾಗಿ 25 ಲಕ್ಷ ರೂ. ಕಾಯ್ದಿರಿಸಲಾಗಿದೆ ಎಂದು ಮುಖ್ಯಾಧಿಕಾರಿ ಗಿರೀಶ್ ತಿಳಿಸಿದರು.
ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕಂದಾಯ ಅಧಿಕಾರಿ ರಾಮು, ಆರೋಗ್ಯ ನಿರೀಕ್ಷಕ ಉದಯಕುಮಾರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net